For Quick Alerts
  ALLOW NOTIFICATIONS  
  For Daily Alerts

  ನಟಿ ರಂಜಿತಾಗೆ ರು.100 ಕೋಟಿ ಕೊಡಲು ಬೆದರಿಕೆ

  By Rajendra
  |

  ಇಷ್ಟು ದಿನ ತಣ್ಣಗಾಗಿದ್ದ ಸ್ವಾಮಿ ನಿತ್ಯಾನಂದ ಹಾಗೂ ರಂಜಿತಾ ರಾಸಲೀಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿತು. "ನಕಲಿ ವಿಡಿಯೋಗಳನ್ನು ತಯಾರಿಸಿ ನನ್ನ ಹೆದರಿಸಿದರು. ಸನ್‌ ಟಿವಿ, ನಕ್ಕೀರನ್ ಪತ್ರಿಕೆಗಳು ಆಡಿದ ನಾಟಕವಿದು" ಎಂದು ನಿತ್ಯಾನಂದ ಹಾಗೂ ನಟಿ ರಂಜಿತಾ ಅವರು ಸನ್ ಟಿವಿ ಹಾಗೂ ನಕ್ಕೀರನ್ ಪತ್ರಿಕೆಗಳ ಮೇಲೆ ಆರೋಪಗಳ ಸುರಿಮಳೆಗರೆದಿದ್ದಾರೆ.

  ನಟಿ ರಂಜಿತಾ ಹಾಗೂ ನಿತ್ಯಾನಂದ ಚೆನ್ನೈನಲ್ಲಿ ಬುಧವಾರ (ಜು.13) ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಈ ನೀಚ ಕೆಲಸಕ್ಕೆ ಕೈಹಾಕಿದ ಆ ಮೀಡಿಯಾ (ಸನ್ ಟಿವಿ, ನಕ್ಕೀರನ್) ಮೇಲೆ ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ನಿತ್ಯಾನಂದಆಗ್ರಹಿಸಿದರು.

  ಸನ್‌ಪಿಕ್ಚರ್ಸ್ ಪ್ರತಿನಿಧಿ ಸಕ್ಸೇನಾ, ನಕ್ಕೀರನ್ ಗೋಪಾಲ್ ರೌಡಿಗಳನ್ನು ಕಳುಹಿಸಿ ರು.100 ಕೋಟಿ ಕೊಡಿ ಎಂದು ಬೆದರಿಸಿದರು. ರು.60 ಕೋಟಿಗಳ ತನಕ ಕೊಡಬೇಕಾಯಿತು. ನನ್ನ ಜೀವಕ್ಕೇನಾದರೂ ಆದರೆ ಅದಕ್ಕೆ ಸಂಪೂರ್ಣ ಜವಾಬ್ದಾರಿ ಸನ್ ಟಿವಿ ಅವರೆ ಎಂದರು.

  ಎಂಎಲ್‌ಎ ಪದವಿ ಕೊಡುತ್ತೇವೆ ಎಂದು ಆಸೆ ತೋರಿಸಿದರು. ನಡೆದದ್ದೆಲ್ಲಾ ನಿಜ ಎಂದು ಹೇಳಿ ಎಂದು ಡಿಎಂಕೆ ಕಡೆಯವರು ರಂಜಿತಾರನ್ನು ಭಯಗೊಳಿಸಿದರು ಎಂದು ನಿತ್ಯಾನಂದ ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ. (ಏಜೆನ್ಸೀಸ್)

  English summary
  "They threatened me and sought Rs 100 crore and it was later brought down to Rs 60 crore. They extorted money from me and still continued to air the video' Nithyananda today made a public appearance and categorically stated that the video was doctored and fabricated.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X