For Quick Alerts
  ALLOW NOTIFICATIONS  
  For Daily Alerts

  ಸುದೀಪ್‌ಗೆ ಅಣ್ಣನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣನಾಗಿದ್ದಾರೆ. ಯಾರಿಗೆ ಅಂತೀರಾ? ಇನ್ಯಾರಿಗೆ ಕಿಚ್ಚ ಸುದೀಪ್‌ಗೆ. ಇವರಿಬ್ಬರೂ ಒಂದು ಕಾಲದಲ್ಲಿ ನಾನೊಂದು ತೀರೆ ನೀನೊಂದು ತೀರ ಎಂಬಂತಿದ್ದರು. ಆದರೆ ಇತ್ತೀಚೆಗೆ 'ಸಾರಥಿ' ಶತದಿನೋತ್ಸವ ಸಂಭ್ರಮದಲ್ಲಿ ಸುದೀಪ್ ಪಾಲ್ಗೊಂಡು ದರ್ಶನ್‌ಗೆ ಬೆನ್ನುತಟ್ಟಿದ್ದರು. ಈ ಮೂಲಕ ಇಬ್ಬರ ನಡುವಿನ ಅಡ್ಡಗೆರೆ ಅಳಿಸಿಹೋಗಿದೆ.

  ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ವೇಳೆ ಇಬ್ಬರೂ ಮತ್ತಷ್ಟು ಹತ್ತಿರವಾಗಿದ್ದರು. ಈಗ ಇವರಿಬ್ಬರನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತಿದ್ದಾರೆ ಉದ್ಯಮಿ ಹಾಗೂ ಚಿತ್ರ ನಿರ್ಮಾಪಕ ಅಶೋಕ್ ಖೇಣಿ. ಇವರಿಬ್ಬರನ್ನು ಹಾಕಿಕೊಂಡು ಮಲ್ಟಿಸ್ಟಾರ್ ಸಿನಿಮಾ ಮಾಡುವುದಾಗಿ ಖೇಣಿ ಔಪಚಾರಿಕವಾಗಿ ಸೋಮವಾರ (ಫೆ.13) ಘೋಷಿಸಿದ್ದಾರೆ.

  ಇದೊಂದು ಅಣ್ಣತಮ್ಮಂದಿರ ಕತೆಯಂತೆ. ಅಣ್ಣನದು ಹಳ್ಳಿಗಾಡಾದರೆ ತಮ್ಮ ಸಿಟಿಯವ. ಅಣ್ಣತಮ್ಮನ ಸೆಂಟಿಮೆಂಟೇ ಚಿತ್ರದ ಜೀವಾಳ. ಇದಿಷ್ಟರ ಬಗ್ಗೆ ಸುಳಿವು ನೀಡಿರುವ ಖೇಣಿ ಉಳಿದ ವಿವರಗಳನ್ನು ಇನ್ನಷ್ಟೇ ಪ್ರಕಟಿಸುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೂ ಕಾಯಬೇಕು. (ಒನ್‌ಇಂಡಿಯಾ ಕನ್ನಡ ವಿಶೇಷ)

  English summary
  Ashok Kheny, the owner of Karnataka Bulldozers and Managing Director of Nandi Infrastructure Corridor Enterprise (NICE) is bouncing back with a multi star film with Challenging Star Darshan and Kichcha Sudeep. The film is yet to be titled. More details about the movie are awaited.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X