ವಿಷ್ಣುವರ್ಧನ ಯಶಸ್ಸಿಗೆ ಸುದೀಪ್ ಕಾರಣ: ದ್ವಾರಕೀಶ್

ಸ್ಯಾಂಡಲ್ ವುಡ್ ನಲ್ಲೀಗ ವಿಷ್ಣುವರ್ಧನ ಚಿತ್ರದ್ದೇ ಸುದ್ದಿ. ಕಾರಣ, ಬಿಡುಗಡೆಯಾಗಿ ಒಂದು ವಾರಕ್ಕಿಂತ ಮೊದಲೇ ಬರೋಬ್ಬರಿ ಆರು ಕೋಟಿ ವ್ಯಾಪಾರ ಮಾಡಿ ನಿರ್ಮಾಪಕ ದ್ವಾರಕೀಶ್ ಜೇಬು ತುಂಬಿಸಿದೆ ಈ ಚಿತ್ರ. ಸಿನಿಮಾವೊಂದನ್ನು ಅಚ್ಚುಕಟ್ಟಾಗಿ ನಿರ್ಮಿಸಿ ಆಕರ್ಷಕ ಟೈಟಲ್ ಕೊಟ್ಟು ಪ್ರೇಕ್ಷಕರ ಮುಂದಿಟ್ಟರೆ ಸಕ್ಸಸ್ ಗ್ಯಾರಂಟಿ ಎಂಬುದನ್ನು ವಿಷ್ಣುವರ್ಧನ ನಿರೂಪಿಸಿದೆ.

ಸಕ್ಸಸ್ ನಿಂದ ಸಖತ್ ಖುಷಿಯಾಗಿದ್ದಾರೆ ದ್ವಾರಕೀಶ್. ಈ ಎಲ್ಲಾ ಯಶಸ್ಸಿಗೆ ಕಾರಣ ಸುದೀಪ್ ಅಂದಿದ್ದಾರೆ ದ್ವಾರ್ಕಿ. ಕಥೆ, ಚಿತ್ರಕಥೆ, ಸಂಭಾಷಣೆ ಅಲ್ಲದೇ ಶೀರ್ಷಿಕೆ, ಹೀಗೆ ಎಲ್ಲಾ ವಿಷಯಗಳಲ್ಲಿ ತನ್ನದೇ ಚಿತ್ರ ಎನ್ನುವಂತೆ ನಟ ಸುದೀಪ್ ಇನ್ವಾಲ್ವ್ ಆಗಿದ್ದರು. ಹಾಗಾಗಿಯೇ ಚಿತ್ರ ಈ ಮಟ್ಟಿಗೆ ಯಶಸ್ವಿಯಾಗಿದೆ" ಎಂದಿದ್ದಾರೆ.

ಸುದೀಪ್ ಇಲ್ಲದಿದ್ದರೆ ಚಿತ್ರಕ್ಕೆ ಈ ಪರಿ ಭರ್ಜರಿ ಓಪನಿಂಗ್ ಸಿಗುತ್ತಿರಲಿಲ್ಲ. ಜೊತೆಗೆ ಖುಷಿಖುಷಿಯಾಗಿ ನಟಿಸಿರುವ ಭಾವನಾ ಮತ್ತು ಬೋಲ್ಡ್ ಆಗಿ ನಟಿಸಿರುವ ಪ್ರಿಯಾಮಣಿಗೂ ಇದರಲ್ಲಿ ಕ್ರೆಡಿಟ್ ಇದೆ" ಎಂದಿದ್ದಾರೆ. ಒಟ್ಟಿನಲ್ಲಿ ಸುದೀಪ್ ಮಹಿಮೆಯೋ, ವಿಷ್ಣುವರ್ಧನ್ ಶೀರ್ಷಿಕೆಯ ಮ್ಯಾಜಿಕ್ಕೋ, ವಿಷ್ಣುವರ್ಧನ್ ಚಿತ್ರ ಮಾತ್ರ ನಿರಂತರವಾಗಿ ನಿರಾತಂಕವಾಗಿ ದಿನದಿಂದ ದಿನಕ್ಕೆ ಹೆಚ್ಚು ಗಳಿಸುತ್ತಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Sudeep lead Vishnuvardhana first week collections and records! The movie got mixed talk. Despite these mixed talks Vishnuvardhana got huge first week collections.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X