ಐಶ್ವರ್ಯ ರೈ ಡೆಲಿವರಿಯಂದೇ ತೆರೆಗೆ ವಿಷ್ಣುವರ್ಧನ!

By Rajendra

ಕೆಂಪೇಗೌಡ ಚಿತ್ರದ ಬಳಿಕ ನಟ ಸುದೀಪ್ ಅಭಿನಯದ ಯಾವ ಚಿತ್ರವೂ ತೆರೆಕಂಡಿಲ್ಲ. ಸದ್ಯಕ್ಕೆ ಸುದೀಪ್ ತೆಲುಗಿನಲ್ಲೂ ಬ್ಯುಸಿಯಾಗಿದ್ದು ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಅವುಗಳಲ್ಲಿ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಚಿತ್ರ 'ವಿಷ್ಣುವರ್ಧನ'.

ಈಗ ಈ ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ಇತ್ತೀಚೆಗೆ ರಾಜಸ್ತಾನದ ಜೈಸಲ್‌ಮೇರ್‌ನಲ್ಲಿ ನಡೆಯಿತು. ಸುದೀಪ್ ಜೊತೆಗೆ ಚಿತ್ರದ ನಾಯಕಿಯರಾದ ಭಾವನಾ, ಪ್ರಿಯಾಮಣಿ ಕೂಡ ಭಾಗವಹಿಸಿದ್ದರು. ಹರ್ಷ ಅವರ ನೃತ್ಯ ಸಂಯೋಜನೆಯಲ್ಲಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ನಟ, ನಿರ್ದೇಶಕ ದ್ವಾರಕೀಶ್ ನಿರ್ಮಿಸುತ್ತಿರುವ ಮಹತ್ವಾಕಾಂಕ್ಷಿ ಚಿತ್ರವಿದು. ಶೀಘ್ರದಲ್ಲೆ ಚಿತ್ರದ ಆಡಿಯೋ ಬಿಡುಗಡೆ ಮಾಡುವುದಾಗಿಯೂ ದ್ವಾರಕೀಶ್ ತಿಳಿಸಿದ್ದಾರೆ.

ವಿ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ನವೆಂಬರ್ 11ರಂದು ತೆರೆಕಾಣಲಿದೆ. ಅಂದೇ ಬಾಲಿವುಡ್ ತಾರೆ ಐಶ್ವರ್ಯ ರೈಗೆ ಡೆಲೆವರಿ ಡೇಟ್ ಸಹ ಕೊಡಲಾಗಿದೆ! ವಿ ಹರಿಕೃಷ್ಣ ಸಂಗೀತ ನೀಡುರುವ ಚಿತ್ರದ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ ಎಂದು ಸುದೀಪ್ ತಿಳಿಸಿರುವುದು ಚಿತ್ರದ ಬಗೆಗಿನ ನಿರೀಕ್ಷೆಗಳು ಇಮ್ಮಡಿಸುವಂತೆ ಮಾಡಿವೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Actor Sudeep, Bhavana and Priyamani lead Kannada movie Vishnuvardhana to hit the screens on November 11. Interestingly on the same day Bollywood actress Aishwarya Rai also suppose to delivering a baby!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X