»   » ಬೆಂಗಳೂರಿನಲ್ಲಿ ವೆಂಕಟ ರಮೇಶನ ಸಂಕಟ

ಬೆಂಗಳೂರಿನಲ್ಲಿ ವೆಂಕಟ ರಮೇಶನ ಸಂಕಟ

Posted By:
Subscribe to Filmibeat Kannada

ರಾಮ ಶ್ಯಾಮ ಭಾಮ ಚಿತ್ರದಿಂದ ಆರಂಭವಾದ ರಮೇಶ್‌ಅರವಿಂದ್ ಅವರ ಹಾಸ್ಯೋತ್ಸವ ಸತ್ಯವಾನ್‌ಸಾವಿತ್ರಿಯಲ್ಲೂ ಮುಂದುವರೆಯಿತ್ತು. ನಂತರ ಆಕ್ಸಿಡೆಂಟ್ ಚಿತ್ರವನ್ನು ನಿರ್ದೇಶಿಸಿದ ಅವರು ಮತ್ತೆ ನಗೆಯತ್ತ ಮರಳಿದ್ದಾರೆ.

ಹೋಟಲ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ನರೇನ್ ಮಗಲಾನಿ ಅವರ ಪ್ರಥಮ ನಿರ್ಮಾಣದ ವೆಂಕಟ ಇನ್ ಸಂಕಟ ಚಿತ್ರವನ್ನು ರಮೇಶ್‌ಅರವಿಂದ್ ನಿರ್ದೇಶಿಸುತ್ತಿದ್ದು ನಗರದ ಆಸುಪಾಸಿನಲ್ಲಿ ಬಿರುಸಿನ ಚಿತ್ರೀಕರಣ ನಡೆಸುತ್ತಿದ್ದಾರೆ. ಚಿತ್ರದಲ್ಲಿ ಟ್ರಾಫಿಕ್ ಪೊಲೀಸ್ ಆಗಿರುವ ರಮೇಶ್ ಇಬ್ಬರ ಹೆಂಡಿರ ಮುದ್ದಿನ ಪೊಲೀಸ್ ಕೂಡ. ಹೆಂಡತಿಯರೊಂದಿಗೆ ತುಂಟಾಟವಾಡುವ ವೆಂಕಟ ಬಡ್ತಿಗಾಗಿ ಹೋರಾಟ ನಡೆಸುವ ಸನ್ನಿವೇಶಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸುವುದುದು ಖಚಿತ.

ರವಿಜೋಷ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ರಿಕ್ಕಿಕೇಜ್ ಅವರ ಸಂಗೀತವಿದೆ. ಪಿ.ಕೆ.ಎಚ್.ದಾಸ್, ಕ್ಯಾಮೆರಾ, ನಂದ ಸಂಭಾಷಣೆ, ಎ.ಎನ್.ಮೂರ್ತಿ, ರವಿವರ್ಮ ಸಾಹಸ, ಮದನ್ ಹರಿಣಿ ನೃತ್ಯ, ರಮೇಶ್‌ದೇಸಾಯಿ ಕಲೆ, ಟಿ.ಎನ್.ಎಲ್.ಶಾಸ್ತ್ರಿ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಮೇಶ್‌ಅರವಿಂದ್, ಶರ್ಮಿಳಾಮಾಂಡ್ರೆ, ಮೇಘನಾಮುಡಿಯನ್, ಅನುಶಾ, ಮುಖ್ಯಮಂತ್ರಿಚಂದ್ರು, ದೇವದಾಸ್‌ಕಪ್ಪಿಕಡ್, ಎಂ.ಎಸ್.ಉಮೇಶ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮತ್ತೆ ಕಾಮಿಡಿಗೆ ಹಾದಿಯಲ್ಲಿ ರಮೇಶ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada