ಟೈಂಸ್ ಆಫ್ ಕರ್ನಾಟಕ ಸಂಪಾದಕರಾಗಿ ವೆಂಕಟನಾರಾಯಣ

ವೆಂಕಟನಾರಾಯಣ ಕನ್ನಡ ಪತ್ರಿಕೋದ್ಯಮದಲ್ಲಿ ಚಿರಪರಿತ ಹೆಸರು. 1965ರಲ್ಲಿ ಆಕಸ್ಮಿಕವಾಗಿ ಪತ್ರಿಕಾ ರಂಗಕ್ಕೆ ಪದಾರ್ಪಣೆ ಮಾಡಿದರೂ, ವೆಂಕಟನಾರಾಯಣ ಅವರು ಈ ಕ್ಷೇತ್ರದಲಿ ಮೂಡಿಸಿರುವ ಛಾಪು ಅಚ್ಚಳಿಯದೆ ಉಳಿಯುವಂಥದ್ದು.
ಪತ್ರಿಕಾರಂಗದ ಭೀಷ್ಮ ಕೆ ಶಾಮರಾಯರ ಗರಡಿಯಲ್ಲಿ 'ಸಂಯುಕ್ತ ಕರ್ನಾಟಕ'ದಲ್ಲಿ ಅರಳಿದ ವೆಂಕಟನಾರಾಯಣ ಅಲ್ಲಿ ತಾವೇ ಕಲಿತದ್ದು ಹಾಗೂ ಕಿರಿಯರಿಗೆ ಕಲಿಸಿದ್ದು ಅಪಾರ. ಇಂದಿಗೂ ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳು ಹಾಗೂ ವಾಹಿನಿಗಳಲ್ಲಿ ವೆಂಕಟನಾರಾಯಣರ ಕೈಕೆಳಗೆ ಪಳಗಿದ ಪತ್ರಕರ್ತರು ಘಟಾನುಘಟಿ ಎನಿಸಿಕೊಂಡು ಖ್ಯಾತಿ, ಕೀರ್ತಿ ಸಂಪಾದಿಸಿದ್ದಾರೆ.
ಕೆ ಎಸ್ ಭಾಸ್ಕರಶೆಟ್ಟಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ. ಪತ್ರಿಕೆಯ ವಿಳಾಸ: ಸುವರ್ಣ ಟೈಮ್ಸ್ ಆಫ್ ಕರ್ನಾಟಕ, # 103 ಮೊದಲನೆ ಮಹಡಿ, ಔರೇಲಿಯಾ ಅಪಾರ್ಟ್‌ಮೆಂಟ್, 35/L, ಲಾಂಗ್ ಫೋರ್ಡ್ ರಸ್ತೆ, ಶಾಂತಿನಗರ, ಹಾಕಿ ಕ್ರೀಡಾಂಗಣ ಬಸ್ ನಿಲ್ದಾಣದ ಎದುರು, ಬೆಂಗಳೂರು-560025. ಫೋನ್ : 080-2222 3406/07. ಇಮೇಲ್: [email protected]. (ಒನ್‌ಇಂಡಿಯಾ ಕನ್ನಡ)
More from Filmibeat
English summary
The new Kannada daily "Suvarna Times of Karnataka" has been launched this weekend. Senior journalist Venkata Narayana is the chief editor of the news paper. Earlier Venkata Narayana worked in Samyukta Karnataka, Kannada Prabha, Ushakirana, Times of India (Kannada).
ಸುವರ್ಣ ಕನ್ನಡ ಪ್ರಭ ವಿಜಯ ಕರ್ನಾಟಕ ಸಂಯುಕ್ತ ಕರ್ನಾಟಕ suvarna kannada prabha vijaya karnataka samyukta karnataka


Click it and Unblock the Notifications











