ಪವರ್ ಫುಲ್ ಪರಮಾತ್ಮ ಯೋಗರಾಜ್ ಭಟ್ಟರ ಪತ್ರ

By * ಶ್ರೀರಾಮ್ ಭಟ್

ಬಹುನಿರೀಕ್ಷಿತ ಚಿತ್ರ ಪರಮಾತ್ಮ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಯಶಸ್ವೀ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಪವರ್ ಸ್ಟಾರ್ ಪುನೀತ್ ಸಂಗಮದ ಈ ಪರಮಾತ್ಮ ಚಿತ್ರ ಬಿಡುಗಡೆಗೆ ಮುಂಚೆಯೇ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸದ್ದು-ಸುದ್ದಿ ಮಾಡಿತ್ತು.

ಇಷ್ಟೇ ಅಲ್ಲದೇ, ದಾಖಲೆಯ ಬೆಲೆ ರು. 3.5 ಕೋಟಿ ಟಿವಿ ರೈಟ್ಸ್ ಪಡೆದು ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿತ್ತು. ಪರಮಾತ್ಮನನ್ನು ನೋಡಲು ಎಲ್ಲರೂ ಕಾಯುವಂತಾಗಿತ್ತು.

ಇವೆಲ್ಲಕ್ಕೂ ಕಳಶವಿಟ್ಟಂತೆ ಪರಮಾತ್ಮ ಆಡಿಯೋ 'ಸೂಪರ್ ಹಿಟ್' ಆಗಿ ನೋಕಿಯಾ ರಿಪೋರ್ಟ್ ನಲ್ಲಿ ದಕ್ಷಿಣಭಾರತಕ್ಕೇ ನಂ. 1 ಸ್ಥಾನ ಪಡೆದು ಹಾಡುಗಳು ಎಲ್ಲರ ಬಾಯಲ್ಲಿಯೂ ಹರಿದಾಡಿತ್ತು.

ಇದೀಗ ಬಿಡುಗಡೆಯಾಗಿ "ಚಿತ್ರಮಂದಿರ ತುಂಬಿದೆ" ಎಂಬ ಬೋರ್ಡ್ ನೊಂದಿಗೆ ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರತಂಡದವರ ಹೃದಯಗಳಲ್ಲೂ ಖುಷಿ ತುಂಬಿದೆ.

ಈ ಸಂದರ್ಭದಲ್ಲಿ ಸಹಜವಾಗಿಯೇ ಈ 'ಯಶಸ್ವೀ ಚಿತ್ರ'ದ ರೂವಾರಿ ಯೋಗರಾಜ್ ಭಟ್ ಮಾಧ್ಯಮದ ಮೂಲಕ ಬಹಿರಂಗ ಪತ್ರ ಬರೆದು ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ. ಅವರ ಪತ್ರ ಹೀಗಿದೆ, ನೋಡಿ...

"ಥ್ಯಾಂಕ್ಯೂ.. ಥ್ಯಾಂಕ್ಯೂ.. ಥ್ಯಾಂಕ್ಯೂ... ಇದಕ್ಕಿಂತ ಹೆಚ್ಚಿನದು ಹೇಳೋದು ಕಷ್ಟ. ನೀವೆಲ್ಲಾ "ಪರಮಾತ್ಮ"ನನ್ನು ಇಷ್ಟಪಡಬಹುದು ಎಂಬ ಅಂದಾಜಿತ್ತು. ಈ ಮಟ್ಟಕ್ಕೆ ಚಿತ್ರವನ್ನು ಸ್ವಾಗತಿಸಿ, ಪ್ರೋತ್ಸಾಹಿಸಬಹುದು ಎಂದು ಗೊತ್ತಿರಲಿಲ್ಲ. ಈ ಪ್ರೀತಿಗೆ, ಪ್ರೋತ್ಸಾಹಕ್ಕೆ ವಂದನೆ, ಅಭಿನಂದನೆ.

ಚಿತ್ರ ಬರೀ ಗಳಿಕೆಯಲ್ಲಷ್ಟೇ ಅಲ್ಲ, ಪ್ರೋತ್ಸಾಹದ ದೃಷ್ಟಿಯಿಂದಲೂ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದೆ. ಈ ಯಶಸ್ಸು ನಿಮ್ಮದು. ನಿಮ್ಮ ಪ್ರೋತ್ಸಾಹ ಮತ್ತು ಅಭಿಮಾನಕ್ಕೆ ಇಡೀ ತಂಡ ಆಭಾರಿಯಾಗಿದೆ.

ಈ ಗೆಲುವು ನಿಮ್ಮದು. ಥ್ಯಾಂಕ್ಯೂ.. ಇಂತಿ ನಿಮ್ಮ ಯೋಗರಾಜ್ ಭಟ್ (ಪರಮಾತ್ಮ)"

ಈ ಪತ್ರಕ್ಕೆ ಹಾಗೂ ನಿಮ್ಮ ಚಿತ್ರದ ಯಶಸ್ಸಿಗೆ ಕಂಗ್ರಾಜ್ಯುಲೇಷನ್ ಭಟ್ರೇ... (ಒನ್ ಇಂಡಿಯಾ ಕನ್ನಡ)

More from Filmibeat

English summary
Kannada Movie Paramathma is running successfully in all the theater. Top Director Yograj Bhat and Power Star Puneeth Rajkumar both created magic. It was created a huge expectation before its release itself. Now expectation fulfilled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X