»   » ನಾಳೆ ಯುಗಯುಗಗಳೇ ಸಾಗಲಿ ಬಿಡುಗಡೆ

ನಾಳೆ ಯುಗಯುಗಗಳೇ ಸಾಗಲಿ ಬಿಡುಗಡೆ

Posted By:
Subscribe to Filmibeat Kannada

ಯು.ಕೆ.ಎಂಟರ್ ಪ್ರೈಸಸ್ ಲಾಂಛನದಲ್ಲಿ ಬಿ.ಯು. ವಸಂತಕುಮಾರ್ ನಿರ್ಮಿಸಿ ಶಶಾಂಕರಾಜ್ ಪ್ರಥಮ ಬಾರಿಗೆ ನಿರ್ದೇಶಿಸಿರುವ ಯುಗಯುಗಗಳೇ ಸಾಗಲಿ ಚಿತ್ರ ಶುಕ್ರವಾರ(ಫೆ.15) ತೆರೆ ಕಾಣಲಿದೆ.

ನವಿರಾದ ಪ್ರೇಮಕಥೆಯುಳ್ಳ ಈ ಚಿತ್ರದಲ್ಲಿ ಯಶಸ್ ನಾಯಕನಾದರೆ ಬೆಡಗಿ ಮೇಘಘೋಷ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಯುವಪೀಳಿಗೆಗೆ ಹತ್ತಿರವಾಗಲಿರುವ ಯುಗಯುಗಗಳೇ ಸಾಗಲಿ ಚಿತ್ರಕ್ಕೆ ಹಂಸಲೇಖ ಮಧುರವಾದ ಗೀತೆಗಳನ್ನು ಬರೆದು ಸಂಗೀತ ಸಂಯೊಜಿಸಿದ್ದಾರೆ.

ನಿರ್ದೇಶಕ ಶಶಾಂಕ್‌ರಾಜ್ ಜೊತೆಗೆ ಸಂಭಾಷಣೆಗಾರ ಮಳವಳ್ಳಿ ಸಾಯಿಕೃಷ್ಣ ಚಿತ್ರಕಥೆ ರಚಿಸಿದ್ದಾರೆ. ನಾಗೇಶ್ವರ್‌ರಾವ್ ಛಾಯಾಗ್ರಹಣ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಇಸ್ಮಾಯಿಲ್ ಕಲೆ, ಕೌರವ ವೆಂಕಟೇಶ್, ಡಿಫ಼ರೆಂಟ್‌ಡ್ಯಾನಿ ಸಾಹಸ, ರಂಗಸ್ವಾಮಿಗೌಡ ಸಹನಿರ್ದೆಶನ, ರಮೇಶ್‌ಬಾಬು ನಿರ್ಮಾಣ-ನಿರ್ವಹಣೆ, ಪ್ರತಾಪ್‌ರಾವ್ ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ಯಶಸ್, ಮೇಘಘೋಷ್, ಅಲೀಶಾ, ಅನಂತನಾಗ್, ರಂಗಾಯಣರಘು, ಶರತ್‌ಲೋಹಿತಾಶ್ವ, ವಸಂತಕುಮಾರ್, ಪದ್ಮಜಾರಾವ್, ಬಿ.ವಿ.ರಾಧ, ನೀನಾಸಂ ಅಶ್ವತ್, ಅನಂತವೇಲು, ರೂಪಾಪ್ರಭಾಕರ್, ಶೋಭಾಶಿವಲಿಂಗಯ್ಯ, ಕೃಷ್ಣೇಗೌಡ, ಶರಣ್, ಜಯಲಕ್ಷ್ಮೀ, ಕಮಲ, ಪ್ರೀತಿ ಮುಂತಾದವರಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada