»   » ಜೀ ಕನ್ನಡದಲ್ಲಿ ಬಾಳೇ ಬಂಗಾರ ಮತ್ತೆ ಪ್ರತ್ಯಕ್ಷ

ಜೀ ಕನ್ನಡದಲ್ಲಿ ಬಾಳೇ ಬಂಗಾರ ಮತ್ತೆ ಪ್ರತ್ಯಕ್ಷ

Subscribe to Filmibeat Kannada

ಬೆಂಗಳೂರು ಜು.14: ಕರ್ನಾಟಕದ ಮಹಿಳೆಯರ ಮೆಚ್ಚಿನ ಕಾರ್ಯಕ್ರಮ 'ಬಾಳೆ ಬಂಗಾರ' ಜೀ ಕನ್ನಡದಲ್ಲಿ ಮತ್ತೆ ಪ್ರಾರಂಭವಾಗಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7:30ಕ್ಕೆ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮಕ್ಕೆ ಕರ್ನಾಟಕದ ವಿವಿಧೆಡೆಯಿಂದ ಸ್ಫರ್ಧೆಯಲ್ಲಿ ಭಾಗವಹಿಸಲು ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ.

ಪ್ರತಿ ಸಂಚಿಕೆಯಲ್ಲಿ ನಾಲ್ಕು ತಂಡಗಳಿದ್ದು ಮಹಿಳೆಯರಿಗಾಗಿಯೇ ಪ್ರಾರಂಭಿಸಿರುವ ಈ ಕಾರ್ಯಕ್ರಮದಲ್ಲಿ ಮಹಿಳೆಯ ಜ್ಞಾನ ಪರೀಕ್ಷಿಸುವಂತಹ 'ಬಾಳೇ ಬಂಗಾರ' ಭಾಗ3 ರಲ್ಲಿ ಪ್ರತೀ ಸುತ್ತಿನಲ್ಲೂ ನಾಲ್ಕು ಭಾಗಗಳಿದ್ದು ಮಹಿಳೆಯರ ಸಾಮಾನ್ಯ ಜ್ಞಾನ, ಸಾಂಸಾರಿಕ ಪ್ರಜ್ಞೆ, ಹಾಸ್ಯ ಪ್ರಜ್ಞೆಗಳನ್ನು ಪರೀಕ್ಷಿಸುವಂತಹ ಸುತ್ತುಗಳನ್ನು ನೀಡಲಾಗುವುದು. ಈ ಹಿಂದೆ ನೀಡುತ್ತಿದ್ದಕ್ಕಿಂತ ಹೆಚ್ಚಿಗೆ ಬಹುಮಾನವನ್ನು ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಮೊತ್ತವಾಗಿ ಒಂದು ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ಗೆಲ್ಲಬಹುದು. ಹಾಗೂ ಇಬ್ಬರಿಗೆ ಬೀಜಿಂಗ್‌ನಲ್ಲಿ ನಡೆವ ಒಲಂಪಿಕ್ಸ್ ಕ್ರೀಡೆ ವೀಕ್ಷಿಸಲು ಟಿಕೇಟ್ ನೀಡಲಾಗುವುದು. ಮೊದಲ ರನ್ನರ್ ಅಪ್‌ಗೆ 50 ಸಾವಿರ ಮೌಲ್ಯದ ಬಂಗಾರ ನೀಡಲಾಗುವುದು.

55 ಸಂಚಿಕೆಗಳಲ್ಲಿ ಪ್ರಸಾರವಾಗುತ್ತಿರುವ 3ನೇ ಭಾಗದಲ್ಲೂ ಕೂಡ ಖ್ಯಾತ ನಟಿ ಅನು ಪ್ರಭಾಕರ್ ಕಾರ್ಯಕ್ರಮ ನಿರೂಪಣೆಯನ್ನು ನಡೆಸಿಕೊಡಲಿದ್ದಾರೆ. 'ಬಾಳೇ ಬಂಗಾರ' ಈ ಹಿಂದೆ ಪ್ರಾರಂಭವಾದಾಗ ಕರ್ನಾಟಕದಾದ್ಯಂತ ಮನೆಮಾತಾಗಿತ್ತು. ಕನ್ನಡದ ಕಿರುತೆರೆಯಲ್ಲಿ ಈ ರೀತಿಯ ಕಾರ್ಯಕ್ರಮ ಮೊದಲನೆಯದಾಗಿತ್ತು. ಮೊದಲು ಕರ್ನಾಟಕದ ಸಾಮಾನ್ಯ ಮಹಿಳೆಯರಿಗಾಗಿ ಕಾರ್ಯಕ್ರಮ ರೂಪಿಸಿದ ಜೀ ಕನ್ನಡ ಎರಡನೇ ಬಾರಿಗೆ ಕರ್ನಾಟಕದ ಖ್ಯಾತ ತಾರೆಯರಿಗಾಗಿ ಇದೇ ಕಾರ್ಯಕ್ರಮವನ್ನು ನಡೆಸಿಕೊಟ್ಟಿತ್ತು. ಈಗ ಮತ್ತೇ ಕರ್ನಾಟಕದ ಜನಸಾಮಾನ್ಯ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

ಜೀ ಕನ್ನಡ ಮೊದಲಿನಿಂದಲೂ ಹೊಸತನದ ಕಾರ್ಯಕ್ರಮ ನೀಡುತ್ತಿದೆ. ಹೊಸತನದಿಂದಲೇ ಈಗ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇನ್ನು ಮುಂದೆಯೂ ಕೂಡ ಹೊಸತನದ ಕಾರ್ಯಕ್ರಮ ನೀಡುತ್ತದೆ ಎಂದು ಜೀ ಕನ್ನಡದ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada