»   » ಸತ್ಯದ ಹುಡುಕಾಟದಲ್ಲಿ 'ಗುಬ್ಬಚ್ಚಿಗಳು'

ಸತ್ಯದ ಹುಡುಕಾಟದಲ್ಲಿ 'ಗುಬ್ಬಚ್ಚಿಗಳು'

Posted By:
Subscribe to Filmibeat Kannada


'ಗುಬ್ಬಚ್ಚಿಗಳು' ಹಾಗೆಂದರೇನು? ಎಂದು ಕೇಳುವ ಪರಿಸ್ಥಿತಿ ಬಂದಿದೆ. ಈ ಕಾಂಕ್ರೀಟ್ ಕಾಡಲ್ಲಿ, ವಾಹನಗಳ ಹೊಗೆಯಲ್ಲಿ ಇಂದಿನ ಮಕ್ಕಳಿಗೆ ಆ ರೀತಿಯ ಹಕ್ಕಿ ಒಂದಿದೆ ಎಂದು ಗೊತ್ತೇ ಇಲ್ಲ. ಗುಬ್ಬಚ್ಚಿಗಳ ಬಗ್ಗೆ ಮಕ್ಕಳಿಗೆ ಸ್ವಾರಸ್ಯ ಕತೆ ಎಂಬಂತೆ ಹೇಳಬೇಕಿದೆ ಎನ್ನುತ್ತಾರೆ 'ಗುಬ್ಬಚ್ಚಿಗಳು' ಸಿನಿಮಾಗೆ ಚಿತ್ರಕತೆ ಬರೆದಿರುವ ಪತ್ರಕರ್ತ ಇಸ್ಮಾಯಿಲ್. ಈ ಚಿತ್ರಕ್ಕೆ ನಿರ್ದೇಶನ ಅಭಯಸಿಂಹ, ನಿರ್ಮಾಣ ಸಹಕಾರ ಮೀಡಿಯಾ ಸ್ಟುಡಿಯೋ ಹೌಸ್.

ಸುರೇಶ್ ಈ ಹಿಂದೆ ಠಪೋರಿ, ಅರ್ಥ ಎಂಬ ಚಿತ್ರಗಳನ್ನು ನಿರ್ದೇಶಿಸಿ ಅತ್ತ ಚಲನಚಿತ್ರ ರಂಗದಲ್ಲಿ. ಸಾಧನೆ, ನಾಕುತಂತಿ, ತಕಧಿಮಿತಾ ಧಾರವಾಹಿಗಳನ್ನು ನಿರ್ದೇಶಿಸಿ ಇತ್ತ ಕಿರುತೆರೆಯ ಕ್ಷೇತ್ರದಲ್ಲೂ ಹೆಸರಾದವರು. ಜನರಿಗೆ ಒಂದು ವರ್ಷದಲ್ಲಿ ನೋಡಲು ಒಂದು ಸಾವಿರ ಚಿತ್ರಗಳು ಸಿಗಬಹುದು. ಆದರೆ ಸತ್ಯ ಹೇಳುವ ಚಿತ್ರಗಳು ಎಷ್ಟು ಸಿಗುತ್ತವೆ? ವೀಕ್ಷಕರ ಭ್ರಮೆಯನ್ನು ದುರುಪಯೋಗ ಮಾಡಿಕೊಂಡು ಹಣ ಬಾಚಲಾಗುತ್ತಿದೆ. ಸತ್ಯವನ್ನು ಹೇಳುವ ಸಿನಿಮಾಗಳು ಬೇಡವೇ ಬೇಡ ಅಂದರೆ ಹೇಗೆ? ಹಾಗಾಗಬಾರದು, ಸಿನಿಮಾ ಮಾಡಬೇಕಾದರೆ ಅದರಲ್ಲಿ ಸತ್ಯವನ್ನೂ ಹೇಳುವ ಕೆಲಸ ಆಗಬೇಕು ಅನ್ನುತ್ತಾರೆ ನಿರ್ದೇಶಕ ಬಿ. ಸುರೇಶ್.

ಅವರ ಕೈಗೆ ಸಾಕಷ್ಟು ಕಮರ್ಷಿಯಲ್ ಚಿತ್ರಗಳು ಸಿಕ್ಕಿದ್ದರೂ ಅವುಗಳಲ್ಲಿ ಆಸಕ್ತಿ ವಹಿಸದೆ ಸತ್ಯ ಹೇಳುವ ಸಿನಿಮಾ ಮಾಡಬೇಕು ಎಂದು ಪಟ್ಟು ಹಿಡಿದು ಈಗ 'ಗುಬ್ಬಚ್ಚಿಗಳು' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅಲ್ಲಿ ಇಲ್ಲಿ ಅಂತ ಅಲ್ಲ ಎಲ್ಲ ಕಡೆಗೂ ಗುಬ್ಬಚ್ಚಿಗಳು ಕಾಣೆಯಾಗುತ್ತಿವೆ ಎಂಬುದೂ ಅಷ್ಟೇ ಕಠೋರ ಸತ್ಯ. ಸುರೇಶ್ ಪ್ರಕಾರ ಸತ್ಯವನ್ನು ಹೇಳುವ ಚಿತ್ರಗಳು ಕಲಾತ್ಮಕವಾಗಿರುತ್ತವೆ. ಆ ರೀತಿಯ ಸಿನಿಮಾಗಳನ್ನು ಜನ ಮುಗಿಬಿದ್ದು ನೋಡುತ್ತಾರೆ ಅನ್ನುವುದೂ ಅಷ್ಟೇ ಸುಳ್ಳು. ಆ ರೀತಿಯ ಚಿತ್ರಗಳನ್ನು ನಿರ್ಮಿಸುವವರು ಯಾರು? ಸಿನಿಮಾಗಳಿಗೆ ಸಾಲವಾಗಿ ಬಂಡವಾಳ ಕೊಡುವ ಎನ್.ಎಫ್.ಡಿ.ಸಿ ಸಹಾ ಕಲಾತ್ಮಕ ಚಿತ್ರಗಳಿಗೆ ಸಾಲ ಕೊಡುವುದಿಲ್ಲ. ಇದನ್ನೆಲ್ಲಾ ಮನಗಂಡ ಬಿ. ಸುರೇಶ್ ಮೀಡಿಯಾ ಹೌಸ್ ಸ್ಟುಡಿಯೋ ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅವರ ಪತ್ನಿ ಶೈಲಜಾನಾಗ್ ಸಹಾ ಅವರ ಬೆನ್ನಿಗಿದ್ದಾರೆ.

ಪತ್ರಕರ್ತರೊಡನೆ ಮಾತನಾಡಿದ ಸುರೇಶ್ ಇದೊಂದು ಮಕ್ಕಳ ಚಿತ್ರ ಎಂದು ಹೇಳಲು ಇಚ್ಚಿಸುತ್ತೇನೆಯೇ ಹೊರತು ಸರ್ಕಾರದಿಂದ 25 ಲಕ್ಷ ರೂ. ಸಹಾಯಧನ ಸಿಗುತ್ತದೆಂದು ಹಾಗೆ ಹೇಳುತ್ತಿಲ್ಲ. ಚಿತ್ರತಂಡದಲ್ಲಿ ಸುರೇಶ್, ಶೈಲಜಾನಾಗ್, ಅಭಯಸಿಂಹ, ಇಸ್ಮಾಯಿಲ್, ನಟ ನೀನಾಸಂ ಅಚ್ಯುತ್, ಬಾಲ ಕಲಾವಿದರಾದ ಬೇಬಿ ಪ್ರಕೃತಿ, ಮಾಸ್ಟರ್ ಅಭಿಲಾಶ್ ಇದ್ದಾರೆ. ಛಾಯಾಗ್ರಹಣ ಡಾ. ವಿಕ್ರಮ್ ಶ್ರೀವಾತ್ಸವ.

ಈ ಚಿತ್ರಕ್ಕೆ ಸಂಗೀತ ನೀಡುತ್ತಿರುವ ಅನ್ಮೋಲ್ ಭಾವೆ, ಛಾಯಾಗ್ರಾಹಕ ಡಾ. ವಿಕ್ರಮ್ ಶ್ರೀವಾಸ್ತವ, ನಿರ್ದೇಶಕ ಅಭಯಸಿಂಹ ಈ ಮೂವರೂ ಪ್ರತಿಷ್ಠಿತ ಪುಣೆ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಲ್ಲಿ ತರಬೇತಿ ಪಡೆದವರು. ಇವರೆಲ್ಲಾ ಒಟ್ಟಿಗೇ ಕಲಿತು, ಒಟ್ಟಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಒಳ್ಳೆಯ ತಂತ್ರಜ್ಞರ ತಂಡವೇ ಬೆನ್ನಿಗಿದೆ. ಹೀಗೆ ಹೊಸಬರಿಗೆ ಅವಕಾಶ ಕೊಡಬೇಕು ಎನ್ನುವುದೇ ಮೀಡಿಯಾ ಹೌಸ್‌ನ ಉದ್ದೇಶ.

ಮೀಡಿಯಾ ಹೌಸ್ ಸಂಸ್ಥೆ ನಿರ್ಮಿಸುತ್ತಿರುವ ಸತ್ಯ ಹೇಳುವ ಚಿತ್ರಕ್ಕೆ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಸತ್ಯ ಯಾವತ್ತೂ ಕಹಿಯಾಗೇ ಇರುತ್ತದೆ ಎನ್ನುವ ನಗ್ನಸತ್ಯ ಒಂದಿದೆಯಲ್ಲಾ? ಅದನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೋ!?

(ದಟ್ಸ್‌ಕನ್ನಡ ಸಿನಿವಾರ್ತೆ)

ಗುಬ್ಬಿ ಬಗ್ಗೆ ಮತ್ತಷ್ಟು ಸ್ವಾರಸ್ಯ ಸುದ್ದಿಗಳು:
ಅರ್ಥಕೋಶದಿಂದ ಆಚೆ ಜಿಗಿದ ಪಾಪ ಗುಬ್ಬಚ್ಚಿ
ಪ್ರತಿಕ್ರಿಯೆ: ಮಲೆನಾಡಲ್ಲೂ ಗುಬ್ಬಿಗಳು ಮಟಾಮಾಯ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada