»   » ಸಂಕ್ರಾಂತಿ ಎಳ್ಳುಬೆಲ್ಲ :

ಸಂಕ್ರಾಂತಿ ಎಳ್ಳುಬೆಲ್ಲ :

Posted By:
Subscribe to Filmibeat Kannada

ಬೆಂಗಳೂರು : ಸ್ಯಾಂಡಲ್‌ವುಡ್‌ನ ಬೆರಳೆಣಿಕೆಯಷ್ಟು ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರಾದ ನಿರ್ದೇಶಕ- ನಿರ್ಮಾಪಕ ಟಿ.ಎಸ್‌.ನಾಗಾಭರಣ, ಅಂತರರಾಷ್ಟ್ರೀಯ ಮಕ್ಕಳು ಹಾಗೂ ಯೂವಜನತೆ ಸಿನಿಮಾ ಕೇಂದ್ರ (International Centre of Films for Children and Youth CIFEJ) ದ ಸಾಮಾನ್ಯ ಸಭೆಯ ನಿರ್ದೇಶಕ ಮಂಡಳಿಗೆ ಆಯ್ಕೆಯಾಗಿದ್ದಾರೆ.

ವಿಶ್ವದ 60 ರಾಷ್ಟ್ರಗಳು ಪ್ರತಿನಿಧಿಸುವ CIFEJ ಸಾಮಾನ್ಯ ಸಭೆಗೆ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ನಾಗಾಭರಣ ಅವರು ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿದ್ದಾರೆ.

ನವಂಬರ್‌ ತಿಂಗಳಲ್ಲಿ ಸಿಐಎಫ್‌ಇಜೆ ದ್ವೆ ೖ ವಾರ್ಷಿಕ ಸಾಮಾನ್ಯ ಸಭೆಯ ಅಧಿವೇಶನ ನಾರ್ವೆಯಲ್ಲಿ ನಡೆಯಲಿದೆ ಎಂದು ಸಂಕ್ರಾಂತಿ ಮುನ್ನಾ ದಿನ (ಜ.14) ಬಿಡುಗಡೆಯಾದ ಸುದ್ದಿ ಹೇಳಿಕೆ ತಿಳಿಸಿದೆ.

ಕಲಾತ್ಮಕ ಹಾಗೂ ಕಮರ್ಷಿಯಲ್‌ ಎರಡೂ ಬಗೆಯ ಸಿನಿಮಾ ನಿರ್ದೇಶನದಲ್ಲಿ ಸೈ ಅನ್ನಿಸಿಕೊಂಡಿರುವ ನಾಗಭರಣ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕರು. ನಾಗಾಭರಣ ನಿರ್ದೇಶನದ ಮೈಸೂರು ಮಲ್ಲಿಗೆ, ನಾಗಮಂಡಲ, ಶಿಶುನಾಳ ಷರೀಫ, ಚಿನ್ನಾರಿ ಮುತ್ತ ಚಿತ್ರಗಳು ಕನ್ನಡ ಚಿತ್ರರಸಿಕರ ಮೆಚ್ಚುಗೆಗೆ ಪಾತ್ರವಾಗಿವೆ. ಭರಣ ನಿರ್ದೇಶನದ ಇನ್ನೂ ಬಿಡುಗಡೆಯಾಗದ ಚಿತ್ರ ಸಿಂಗಾರೆವ್ವ (ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ ಚಿತ್ರ) ಪ್ರೇಕ್ಷಕ ವಲಯದಲ್ಲಿ ಅಪಾರ ಕುತೂಹಲ ಮೂಡಿಸಿದೆ.

ಕಿರುತೆರೆ ಧಾರಾವಾಹಿ ನಿರ್ಮಾಣ-ನಿರ್ದೇಶನದಲ್ಲೂ ಯಶಸ್ವಿಯಾಗಿರುವ ನಾಗಾಭರಣ- ಗೋಪಾಲಕೃಷ್ಣ ಅಡಿಗ, ನಿರಂಜನ ಮುಂತಾದ ಹಿರಿಯ ಲೇಖಕರ ಕೃತಿಗಳನ್ನು ಯಶಸ್ವಿಯಾಗಿ ಕಿರುತೆರೆಗೆ ತಂದಿದ್ದಾರೆ.

(ಪಿಟಿಐ)

Post your Views

ಪೂರಕ ಓದಿಗೆ-
ನಾಗಾಭರಣ ಸಂದರ್ಶನ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada