»   » ಹೆಚ್ಚಾಗಿ ಸೀರೆ ತೊಟ್ಟೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇಶಾ ಕೊಪ್ಪಿಕರ್‌ ‘ಕಂಪನಿ’ಯಲ್ಲಿ ಬಿಚ್ಚಮ್ಮನಾಗಿ ಕ್ಯಾಬರೆ ನರ್ತನ ಮಾಡಿದ್ದರ ಫಲ ನಿಧಾನವಾಗಿ ಸಿಕ್ಕಿದೆ. ಬಾಲಿವುಡ್‌ನಲ್ಲಿ ನಾಯಕಿಯಾಗಲು ಇಶಾ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ.

ಹೆಚ್ಚಾಗಿ ಸೀರೆ ತೊಟ್ಟೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇಶಾ ಕೊಪ್ಪಿಕರ್‌ ‘ಕಂಪನಿ’ಯಲ್ಲಿ ಬಿಚ್ಚಮ್ಮನಾಗಿ ಕ್ಯಾಬರೆ ನರ್ತನ ಮಾಡಿದ್ದರ ಫಲ ನಿಧಾನವಾಗಿ ಸಿಕ್ಕಿದೆ. ಬಾಲಿವುಡ್‌ನಲ್ಲಿ ನಾಯಕಿಯಾಗಲು ಇಶಾ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ.

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಬಾಲಿವುಡ್‌ನಲ್ಲಿ ನಾಯಕಿ ಪಟ್ಟ ಗಿಟ್ಟಿಸೋಕೆ ಏನೆಲ್ಲಾ ಮಾಡಬೇಕು ನೋಡಿ ; ಇದಕ್ಕೆ ಇಶಾ ಕೊಪ್ಪಿಕರ್‌ ಎಂಬ ದಕ್ಷಿಣ ಭಾರತದ ಚೆಲುವೆಯ ಸರ್ಕಸ್ಸೇ ಸಾಕ್ಷಿ.

ಕನ್ನಡದ ಸೂರ್ಯವಂಶ, ಓ ನನ್ನ ನಲ್ಲೆ ಚಿತ್ರಗಳಲ್ಲಿ ನಾಜೂಕಾಗಿ ಕಾಣಿಸಿಕೊಂಡ ಈ ಹುಡುಗಿ ಬೆಚ್ಚಿ ಬೀಳಿಸಿದ್ದು ರಾಮ್‌ಗೋಪಾಲ್‌ ವರ್ಮಾನ ‘ಕಂಪೆನಿ’ ಹಿಂದಿ ಚಿತ್ರದಲ್ಲಿ ಒಂದೇ ಹಾಡಿನಲ್ಲಿ ತುಂಡುಡುಗೆಯಲ್ಲಿ ಕುಣಿಯುವ ಮೂಲಕ. ಅದಕ್ಕೆ ಮುಂಚೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಲೀಸಾಗಿ ನಾಯಕಿಯಾಗಿ ಅವಕಾಶ ಗಿಟ್ಟಿಸುತ್ತಿದ್ದ ಇಶಾ ಒಂದೇ ಒಂದು ಹಾಡಿನ ಕುಣಿತಕ್ಕೆ ಒಪ್ಪಿಕೊಳ್ಳಲು ಕಾರಣ- ಬಾಲಿವುಡ್‌ನಲ್ಲಿ ಮಿಂಚಬೇಕೆಂಬ ಮಹದಾಸೆ.

ಈಚೆಗಷ್ಟೆ ತೆರೆಕಂಡು ಸಾಕಷ್ಟು ದುಡ್ಡು ದೋಚುತ್ತಿರುವ ‘ಕಾಂಟೆ’ ಎಂಬ ಹಿಂದಿ ಚಿತ್ರದಲ್ಲೂ ಇದೆ ಇಶಾ ಒಂದೇ ಹಾಡಿಗೆ ಕುಣಿದಿದ್ದಾರೆ. ಇಶಾ ಅದೃಷ್ಟ ಬಲು ಚೆನ್ನಾಗಿರುವುದರಿಂದ ಆಕೆಯ ಎರಡೂ ಸೆಕ್ಸಿ ಡ್ಯಾನ್ಸ್‌ಗಳು ಸಾಕಷ್ಟು ಕ್ಲಿಕ್ಕಾಗಿವೆ. ಹೀಗಾಗಿ ರಾಮ್‌ಗೋಪಾಲ್‌ ವರ್ಮಾ ಮುಂದಿನ ಚಿತ್ರದ ನಾಯಕಿ ಪಟ್ಟ ಇಶಾಗೆ ಒಲಿದಿದೆ. ‘ಇಂತೆಕಾಮ್‌’ ಎಂಬ ಇನ್ನೊಂದು ಚಿತ್ರಕ್ಕೂ ಇಶಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

ಒಂದು ಕಾಲದಲ್ಲಿ ತೀರಾ ನಾಚಿಕೆ ಸ್ವಭಾವದ ಹುಡುಗಿಯಾಗಿದ್ದ ಇಶಾ ಹೇಗಾದರೂ ಮಾಡಿ ಬಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸಲೇಬೇಕೆಂದು ಸಂಕಲ್ಪ ತೊಟ್ಟವಳು. ಆ ಕಾರಣಕ್ಕೇ ಎಗ್ಗಿಲ್ಲದೆ ಬಿಚ್ಚಮ್ಮನಾಗಿ ಬೆಚ್ಚಿ ಬೀಳಿಸಿದ್ದು ಫಲ ಕೊಡಲು ಖರೆ ಎರಡು ವರ್ಷ ಬೇಕಾಯಿತು. ಬಾಲಿವುಡ್‌ನ ಅವಕಾಶಗಳು ಒದ್ದುಕೊಂಡು ಬರುತ್ತಿರುವುದರಿಂದ ಸದ್ಯಕ್ಕೆ ದಕ್ಷಿಣ ಭಾರತದ ಚಿತ್ರಗಳತ್ತ ಬರಲಾರೆ ಅನ್ನುವ ಇಶಾ ಸಂಭಾವನೆ ಕೂಡ ಗಗನಕ್ಕೇರಿದೆಯಂತೆ.

ಬಾಲಿವುಡ್‌ ಕನಸನ್ನು ಕಣ್ಣಲ್ಲಿ ಕಟ್ಟಿಕೊಂಡಿರುವ ನಮ್ಮೂರ ಹುಡುಗಿ ರಕ್ಷಿತಾ ಈ ಸುದ್ದಿಯನ್ನು ಎರಡೆರಡು ಬಾರಿ ಓದಬೇಕು. ಯಾಕೆಂದರೆ, ಬಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸಲು ಸಿಂಗಲ್‌ ನಂಬರ್‌ಗೆ ಕ್ಯಾಬರೆ ನರ್ತನ ಮಾಡಲೂ ಸಿದ್ಧವಿರಬೇಕು ಅನ್ನೋದನ್ನು ಇಶಾ ಒತ್ತಿ ಒತ್ತಿ ಹೇಳುತ್ತಿದ್ದಾರೆ.

ರಕ್ಷಿತಾ ಏನು ಕಡಿಮೆಯಿಲ್ಲ ಬಿಡಿ ; ಸಾಕ್ಷಿ ಬೇಕಿದ್ದರೆ ತೆಲುಗಿನ ಈಡಿಯೆಟ್‌ ಸಿನಿಮಾ ನೋಡಿ.

ಇಷ್ಟೆಲ್ಲಾ ಸರ್ಕಸ್ಸು ಮಾಡಿ ಬಾಲಿವುಡ್‌ ನಾಯಕಿಯಾಗಬೇಕಾ, ನೀವೇನಂತೀರಿ?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada