»   » ಪ್ರೇಮಿಗಳ ದಿನದಂದು ತಾರಾ ಜೊತೆ ಮಾತುಕತೆ

ಪ್ರೇಮಿಗಳ ದಿನದಂದು ತಾರಾ ಜೊತೆ ಮಾತುಕತೆ

Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ಚಿತ್ರರಂಗಕ್ಕೆ ಬಂದು ಹಲವಾರು ವರ್ಷಗಳೇ ಕಳೆದರೂ ಇವತ್ತಿಗೂ ಜನಪ್ರೀತಿ ಉಳಿಸಿಕೊಂಡಿರುವಾಕೆ ನಟಿ ತಾರಾ. ಇಡೀ ಬೆಂಗಳೂರು ಪ್ರೇಮಿಗಳ ದಿನಾಚರಣೆಗೆ ಎಂತೆಂಥದೋ ಸಿದ್ಧತೆಗೆ ತೊಡಗಿಕೊಂಡಿದ್ದಾಗ ನಮ್ಮ ವಿನಂತಿಗೆ ಒಪ್ಪಿದ ತಾರಾ ಪ್ರೀತಿ-ಪ್ರೇಮದ ಕುರಿತ ಪ್ರಶ್ನೆಗಳಿಗೆ ತುಂಬ ಸಂಭ್ರಮದಿಂದ ಉತ್ತರಿಸಿದರು. ಹೇಗೆ ಅಂತೀರಾ... ಓದಿ ನೋಡಿ.

‘ಪ್ರೇಮಿಗಳ ದಿನ’ ಸಂದರ್ಭದಲ್ಲಿ ಪ್ರೇಮಿಗಳಿಗೆ ನಿಮ್ಮ ಸಂದೇಶ ಏನು ?
ಸದಾ ಪ್ರೇಮಿಯಾಗಿರಿ. ಹಾಗಿದ್ದಾಗ ನಮ್ಮಲ್ಲಿ ಹುಮ್ಮಸ್ಸು ಬರುತ್ತೆ . ‘ಪ್ರೇಮ’ ಎಂಬ ಎರಡೂವರೆ ಅಕ್ಷರ ಬದುಕಲ್ಲಿ ಚೈತನ್ಯದ ಚಿಲುಮೆ ಉಕ್ಕಿಸುತ್ತೆ . ಹಾಗಾಗಿ ಸದಾ ಪ್ರೇಮಿಯಾಗಿರಿ...

ಪ್ರೇಮಿಗಳ ದಿನ ಎನ್ನೋದನ್ನೇ ನೆಪ ಮಾಡಿಕೊಂಡು ಯಾರಾದ್ರೂ ಹುಡುಗ ನಿಮ್ಗೆ ಪ್ರಪೋಸ್‌ ಮಾಡಿದ್ರೆ... ಹೇಳಿ ಏನ್ಮಾಡ್ತೀರಿ ?
ಸಾರಿ ಕಣಪ್ಪ ದೊರೆ. ಯೂ ಆರ್‌ ಟೂ ಲೇಟ್‌. ಈಗಾಗಲೇ ನಂಗೆ ಎಂಗೇಜ್‌ಮೆಂಟ್‌ ಆಗಿಹೋಗಿದೆ ಅಂತ ಸಣ್ಣದೊಂದು ಸುಳ್ಳು ಹೇಳಿ ತಪ್ಪಿಸ್ಕೋತೀನಿ.

ನಿಮ್ಗೆ ಸುಮ್‌ಸುಮ್ನೆ ಪ್ರೇಮಪತ್ರ ಬರೆಯೋದ್ರಲ್ಲಿ ಖುಷಿ ಇದೆಯೋ ಅಥವಾ ಪ್ರೇಮ ಪತ್ರಗಳನ್ನು ಓದುವರಲ್ಲಿದೆಯೋ ?
ಎರಡರಲ್ಲೂ ಇಲ್ಲ . ಆದ್ರೆ ಅದನ್ನ ಫೀಲ್‌ ಮಾಡೋದ್ರಲ್ಲಿದೆ. ಲೆಟರ್‌ ಬರೆಯೋದು ಅಂದ್ರೇನೆ ನನಗೆ ಬೋರು. ನಾನು ಈಗ ಯಾರಿಗೂ ಪತ್ರ ಬರೆಯೋದಿಲ್ಲ ಅಂದ್ರೆ ನೀವು ನಂಬದೇ ಇರಬಹುದು. ಆದ್ರೆ ಅದೇ ಸತ್ಯ. ಇನ್ನು ಪ್ರೇಮ ಪತ್ರ ಓದೋದೂ... ಒಂಥರಾ ಬೋರೇ. ಆದ್ರೆ ಪ್ರೇಮದ ಬಗ್ಗೆ ಕಲ್ಪಿಸಿಕೊಳ್ಳೋದಿದೆಯಲ್ಲ ... ಅದು ವಂಡರ್‌ಫುಲ್‌!

ಹೇಳಿ, ನಿಮ್ಮ ಪ್ರೀತಿಯ ಹುಡುಗ ಹೇಗಿರಬೇಕು ?
ಅವನು ಎಲ್ಲರನ್ನೂ ಇಷ್ಟಪಡುವ, ಎಲ್ಲರನ್ನೂ ಗೌರವಿಸುವ ಹುಡುಗ ಆಗಿರಬೇಕು. ಹಾಗೇ ಎಲ್ಲರೂ ಗೌರವಿಸುವ, ಇಷ್ಟಪಡುವ ವ್ಯಕ್ತಿತ್ವ ಹೊಂದಿದವನಾಗಿರಬೇಕು.

(ವಿಜಯ ಕರ್ನಾಟಕ)

Post your views

ತಾರಾ ಓ ತಾರಾ ...
ಕೋರ್ಟಲ್ಲಿ ತಾರಾ Vs ಬಿಂಬ ಮಕ್ಕಳು
ಋತು ಚಕ್ರದಲ್ಲಿ ಹಣ್ಣಾಗದ ಹೂವು?

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada