For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಲ್ಲಿ ಭಲೆ ಚಿತ್ರಗಳ ಉತ್ಸವ

  By Staff
  |

  *ನಾಡಿಗೇರ್‌ ಚೇತನ್‌

  ನಿಮಗೆ ನೆನಪಿರಬಹುದು. 2001, ಅಕ್ಟೋಬರ್‌ 10 ರಿಂದ 20 ರವರೆಗೆ ಬೆಂಗಳೂರಿಗೆ 32ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಿಕೊಡುವ ಅವಕಾಶ ಲಭಿಸಿತ್ತು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಡಾ. ರಾಜ್‌ಕುಮಾರ್‌ ಉದ್ಘಾಟಿಸುವುದರೊಂದಿಗೆ ಶುರುವಾಗಬೇಕಾಗಿದ್ದ ಸಿನಿಮೋತ್ಸವದ ತೆರೆ ಸರಿಯಲೇ ಇಲ್ಲ. ಎಲ್ಲ ತಯಾರಿ ಮುಗಿದು ಇನ್ನೇನು ಕಾರ್ಯಕ್ರಮಕ್ಕೆ ಕೆಲವೇ ದಿನಗಳಿರುವಾಗ ಕರ್ನಾಟಕ ಸರ್ಕಾರ ಬರದ ನೆಪ ಒಡ್ಡಿ ಹಠಾತ್ತನೆ ಚಿತ್ರೋತ್ಸವವನ್ನು ರದ್ದು ಪಡಿಸಿತ್ತು. ಇದಕ್ಕೆ ಸಿನಿಮಾಸಕ್ತರಿಂದ ಮತ್ತು ಚಿತ್ರೋದ್ಯಮದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

  ಇದಾಗಿ 2 ವರ್ಷಗಳ ನಂತರ, ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ತನ್ನ ವೀಕ್ಷಕರ ಮತ್ತು ಚಲನಚಿತ್ರಾಸಕ್ತರ ಆಕಾಂಕ್ಷೆಗಳಿಗೆ ಸ್ಪಂದಿಸಿ, ಮಾರ್ಚ್‌14 ರಿಂದ 20 ರವರೆಗೆ ಏಳು ದಿನಗಳ ಕಾಲ ‘ವರ್ಲ್ಡ್‌ ಇನ್‌ ಬೆಂಗಳೂರ್‌’ ಎಂಬ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಏರ್ಪಡಿಸಿದೆ.

  ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಹಾಗೂ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಕಾರದಿಂದ ಈ ಚಲನಚಿತ್ರೋತ್ಸವವನ್ನು ಸುಚಿತ್ರ ಅಕಾಡೆಮಿ ಏರ್ಪಡಿಸಿದೆ.

  ಈ ಚಿತ್ರೋತ್ಸವದಲ್ಲಿ ಭಾರತದ 30 ಚಿತ್ರಗಳು ಮತ್ತು ವಿವಿಧ ದೇಶದ 30ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶಿತವಾಗಲಿವೆ. ಸುಮಾರು 1000 ದಿಂದ 1500 ಪ್ರೇಕ್ಷಕರು ಬೆಂಗಳೂರಿನ ಲಿಡೋ, ಸುಚಿತ್ರ ರಂಗಮಂದಿರ ಮತ್ತು ಬಾದಾಮಿ ಹೌಸ್‌ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ದಿನಂಪ್ರತಿ 5 ಪ್ರದರ್ಶನಗಳಲ್ಲಿ ಈ ಚಿತ್ರಗಳನ್ನು ವೀಕ್ಷಿಸಲಿದ್ದಾರೆ. ಖ್ಯಾತ ನಿರ್ದೇಶಕ ಬಿ.ವಿ. ಕಾರಂತರು ನಿರ್ದೇಶಿಸಿದ ‘ಚೋಮನ ದುಡಿ’ ಚಿತ್ರೋತ್ಸದಲ್ಲಿ ಪ್ರದರ್ಶಿತವಾಗಲಿದೆ. ಗಿರೀಶ್‌ ಕಾಸರವಳ್ಳಿ ಈ ಚಿತ್ರೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಚಿತ್ರೋತ್ಸವಕ್ಕಾಗಿ ಸುಚಿತ್ರ ಅಕಾಡೆಮಿ ವಿಶ್ವದ ವಿವಿಧ ಶ್ರೇಷ್ಠ ಚಿತ್ರಗಳನ್ನು ಗುರುತಿಸಿ, ಅವುಗಳನ್ನು ಬೆಂಗಳೂರಿಗೆ ತರಿಸಿ ಇಲ್ಲಿ ಪ್ರದರ್ಶಿಸಲಿದೆ.

  ವಿಶ್ವದ ವಿವಿಧ ದೇಶಗಳ ಹಾಗೂ ಭಾರತೀಯ ಸಮಕಾಲೀನ ಚಲನಚಿತ್ರಗಳ ಪ್ರದರ್ಶನ, ಚಲನಚಿತ್ರ ಮಾಧ್ಯಮದ ವಿವಿಧ ಭಾಗಗಳ ಹೆಸರಾಂತ ವ್ಯಕ್ತಿಗಳ ಪರಸ್ಪರ ಸಂವಾದ ಮತ್ತು ವಿಚಾರ ವಿನಿಮಯ ವೇದಿಕೆಗಳನ್ನು ಈ ಚಲನಚಿತ್ರೋತ್ಸವದಲ್ಲಿ ಏರ್ಪಡಿಸಿರುವುದು ವಿಶೇಷ.

  ಪ್ರದರ್ಶನ ಐದು ವಿಭಾಗಗಳಲ್ಲಿದೆ-

  • ಅತಿ ಶ್ರೇಷ್ಠ ಚಲನಚಿತ್ರಗಳು
  • ಸಮಕಾಲೀನ ಅಂತರರಾಷ್ಟ್ರೀಯ ಚಲನಚಿತ್ರಗಳು
  • ಸಮಕಾಲೀನ ಭಾರತೀಯ ಚಲನಚಿತ್ರಗಳು
  • ಹಿನ್ನೋಟ - ನಿರ್ದೇಶಕ ಅಮೋಲ್‌ ಪಾಲೇಕರ್‌ ಮತ್ತು ಛಾಯಾಗ್ರಹಕ ಕೆ.ಕೆ. ಮಹಾಜನ್‌ರ ಶ್ರೇಷ್ಠ ಚಲನಚಿತ್ರಗಳು
  • ಶ್ರದ್ಧಾಂಜಲಿ ಸಮರ್ಪಣೆ - ಖ್ಯಾತ ಸಂಗೀತ ನಿರ್ದೇಶಕ ದಿವಂಗತ ಸಿ. ರಾಮಚಂದ್ರ
  ಪ್ರದರ್ಶನಗೊಳ್ಳುವ ಚಿತ್ರಗಳ ವಿವರ :

  Film NameCountryDirectorYearContemporary World CinemaRun for MoneyTurkeyReha Erdem2001Sweetie CakesSwitzerlandGeretta Geretta2001Beauty Queen OliviaItalyFederica Martino2001Three BirdsArgentinaCarlos M. Jaureguialzo2001The Root of the HeartPortugalPaulo Rocha2000The RoomGermanyRoland Reber2000Quartet In Four MovementsGreeceLucia Rikaki1994Lan YuHong KongStanley Kwan2001Unescapable BeautyItalyFrancesca Pirani2001CeuxquiFrancePatrice Chereau1998Peut - EtreFranceCedric Klapisch1999Marius Et JeanetteFranceRobert Guediguian1999ConteFranceEhic Rohmer1997The Sea That ThinksNetherlandsGert De Graaf2000NeutreSwitzerlandXavier Ruiz2001I Love You TooNetherlandsRuud Van Hemeht2001Hi TereskaPolandRobert Glinski2000ScarsNorwayLars Berg2001Mayday MayhemHungaryRobert Koltai2001Brighter Than The MoonAustriaVirgil Widrich2000SarojaSri LankaSomaratne Dissanayake2000Little AngelSri LankaSomaratne Dissanayake2000Blue TearsAfricaSockate Safo2001Taking SidesFranceIstvan Szabo2000Aswesuma (The Compensation)Sri LankaBennet Rathnayake2001Black NameTaiwanDong Cheng Liang2000Little VilmaHungaryMarta Meszaros2000Whitman BoysHungaryJanos Szasz1997Thorns Under The Finger NailHungarySan Dor SaraI987On Death RowHungaryJanoz Zsombolyai EllingNorwayPetter Naess2001Last SupperIranFereydoun Jeyrani2002Journey To The EastIranSeyyed Mehdi Borgheje2002 World Classics Of YesteryearsCitizen KaneUsaOrson Welles1941Meghe Dhaka TaraIndiaRitwik Chalak1960The Virgin Spring (Jungfrukallan)SwedenIngmar Bergman1960Woman Of The Dunes / Suna No OnnaJapanHiroshi Teshigahara1964The Sacrifice / OffretSwedenAndrei Tarkovsky1986Close-Up / Nama-Ye NazdikIranAbbas Kiarostami1987A Short Film About LovePolandKrzysztof Kieslowski1988 Retrospective Of Amol Palekar - DirectorAnkaheeHindiAmol Palekar1984Thodasa Roomani Ho JayenHindiAmol Palekar1990BanagarwadiMarathiAmol Palekar1995KaireeMarathiAmol Palekar2000Dhyas ParvaMarathiAmol Palekar2000 Retrospective Of K K Mahajan - CinematographerBhuvan ShomeHindiMrinal Sen1969Calcutta 71BengaliMrinal Sen1971Chit ChorHindiBasu Chatterji1976SwamiHindiBasu Chatterji1977Khayal Gatha / The Khayal RagaHindiKumar Shahani1989Chaar AdyayBengaliKumar Shahani1997 Indian FilmsUttaraBengaliBuddha Deb Das Gupta1999Oru Cheru PunchiriMalayalamMt Vasudevan Nair2000ShowTeluguNeeiakanta2001TiladanamTeluguK N T Sastry2001SwarajHindiAnwar Jamal2001DehamEnglishGovind Nihalani2001BubKashmiriJyoti Sarup2001MagunirashagadaOriyaPrafulla Mohanty, Sumitra Bhave, Sunil2001VastupurushMarathiSukhankar2002

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X