»   » ಸಿಲ್ಲಿಲಲ್ಲಿ, ಪಾಪಪಾಂಡು ಮತ್ತು ಸಿಹಿಕಹಿ

ಸಿಲ್ಲಿಲಲ್ಲಿ, ಪಾಪಪಾಂಡು ಮತ್ತು ಸಿಹಿಕಹಿ

Subscribe to Filmibeat Kannada
  • ದಟ್ಸ್‌ ಕನ್ನಡ ಸಿನಿಡೆಸ್ಕ್‌
ಮಾಧುರಿ ದೀಕ್ಷಿತ್‌ ಮತ್ತೊಂದು ಗಂಡು ಮಗುವನ್ನು ಹೆತ್ತಳಂತೆ...ಅಭಿ ನಾಯಕಿ ರಮ್ಯ ತನ್ನ ಮೂಗನ್ನು ಪ್ಲಾಸ್ಟಿಕ್‌ ಸರ್ಜರಿ ಮೂಲಕ ರಿಪೇರಿ ಮಾಡಿಸಿಕೊಂಡಳಂತೆ... ಇಂತಹ ಸುದ್ದಿಗಳಿಗಿಂತಲೂ ನಮ್ಮ ಕಿರುತೆರೆ ವೀಕ್ಷಕರಿಗೆ, ಗೋಪಿನೂ ಎನ್‌ಎಂಎಲ್‌ ಮದುವೆಯಾದರಂತೆ ಅನ್ನೋದೇ ಮುಖ್ಯವಾಗುತ್ತದೆ!

ಹೌದು. ಅಳುಮುಂಜಿ ಸೀರಿಯಲ್‌ಗಳ ನಡುವೆ 32ಹಲ್ಲೂ ಕಾಣಿಸೋ ರೀತಿ ಕನ್ನಡ ಪ್ರೇಕ್ಷಕರು ನಗ್ತಾಯಿದ್ದರೇ, ಅದಕ್ಕೆ ಸಿಲ್ಲಿಲಲ್ಲಿ ಹಾಗೂ ಪಾಪಪಾಂಡು ಧಾರಾವಾಹಿಗಳೇ ಕಾರಣ ಅನ್ನೋದರಲ್ಲಿ ಎರಡು ಮಾತಿಲ್ಲ.

ಇದ್ದ ಮೂರುನಾಲ್ಕು ಕೂದಲು ಖಾಲಿಯಾದ ಮೇಲೆ ಕಿರುತೆರೆ-ಹಿರಿತೆರೆ ಎರಡರಲ್ಲೂ ಸಿಹಿಕಹಿ ಚಂದ್ರು ನಿರುದ್ಯೋಗಿಯಾದರು ಅನ್ನುವಾಗಲೇ, ಅವರಿಗೆ ಲಾಟರಿ ಹೊಡೆಯಿತು! ಅದೂ ಬಂಪರ್‌ ಲಾಟರಿ. ಅವರ ಪಾಪ ಪಾಂಡು ಪ್ರಖ್ಯಾತಿ, ಕುಖ್ಯಾತಿಗಳನ್ನೆಲ್ಲಾ ಮೀರಿಸುವಂತೆ ಸಿಲ್ಲಿಲಲ್ಲಿ ಧಾರವಾಹಿ ನಾಗಾಲೋಟದಲ್ಲಿ ಸಾಗುತ್ತಿದೆ.

ಇತ್ತೀಚೆಗಷ್ಟೇ ಸಿಲ್ಲಿಲಲ್ಲಿ 500ರ ಗಡಿ ದಾಟಿ ಮುನ್ನುಗಿದೆ. ನಗಿಸೋ ಹೊಣೆ ಹೊತ್ತಿರುವ ಎಂ.ಎಸ್‌.ನರಸಿಂಹಮೂರ್ತಿ ಅವರಿಗಂತೂ ಕೈತುಂಬಾ ಕೆಲಸ. ಒಂದು ಕೈಯಲ್ಲಿ ಪಾಂಡೂಗೆ, ಮತ್ತೊಂದು ಕೈಯಲ್ಲಿ ಸಿಲ್ಲಿ-ಲಲ್ಲಿಗೆ ಸಂಭಾಷಣೆಯನ್ನು ಬರೆದುಬರೆದು ಚಂದ್ರುಮುಂದಕ್ಕೆ ಬಿಸಾಕುತ್ತಿದ್ದಾರೆ.

ಅರಳೆಣ್ಣೆ ಕುಡಿದವರ ಮುಖ ಈ ಸೀರಿಯಲ್‌ಗಳನ್ನು ನೋಡಿ ಅರಳಿದ ತಾವರೆಯಂತಾಗಿದ್ದರೆ ಅದರ ಎಲ್ಲಾ ಕೀರ್ತಿ, ಮೂರ್ತಿಯವರಿಗೆ ಸಲ್ಲಬೇಕು ಅನ್ನೋದನ್ನು ಎಲ್ಲರೂ ಒಪ್ಪುತ್ತಾರೆ. ‘ಪಾಂಡು ಮತ್ತು ಲಲ್ಲಿ’ ಯ 1500 ಎಪಿಸೋಡ್‌ಗೆ ಪಂಚ್‌ಯಿರೋ ಸಂಭಾಷಣೆಯನ್ನು ಮೂರ್ತಿ ಬರೆದರೂ ತುಸು ಸಹಾ ಸುಸ್ತಾಗಿಲ್ಲ. ಈಗಾಗಲೇ ಸಂಭಾಷಣೆ ಬರೆಯುವುದಕ್ಕಾಗಿಯೇ ಮೂವತ್ತು ಸಾವಿರ ಬಿಳಿ ಹಾಳೆಗಳು ಖರ್ಚಾಗಿವೆ.
ಡಾ.ವಿಠಲ್‌ರಾವ್‌, ಲಲ್ಲಿ, ಸಿಲ್ಲಿ, ವಿಶಾಲೂ, ಪಾಂಡು, ಪಾಚು, ಗೋಪಿ, ಪಲ್ಲಿ, ಸೂಜಿ, ಎನ್‌ಎಂಎಲ್‌ -ಇವರೆಲ್ಲರ ಕಚಗುಳಿ ಸದ್ಯಕ್ಕೆ ಅಡೆತಡೆಯಿಲ್ಲದೇ ಮುಂದುವರೆಯುತ್ತಿದೆ...ಮುಂದುವರೆಯಲಿ...

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada