»   » ಟಿ.ಎನ್‌.ಸೀತಾರಾಮ್‌ಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ!

ಟಿ.ಎನ್‌.ಸೀತಾರಾಮ್‌ಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ!

Posted By:
Subscribe to Filmibeat Kannada


ಕಿರುತೆರೆ ಸಾಧಕರಿಗೆ ಆರ್ಯಭಟ ಪ್ರಶಸ್ತಿಯ ಮನ್ನಣೆ... ಮಣೆ...

ಬೆಂಗಳೂರು : ಕಿರುತೆರೆ ಶ್ರೇಷ್ಠರಿಗೆ ನೀಡಲಾಗುವ 2005ರ ಸಾಲಿನ ಆರ್ಯಭಟ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

‘ಮುಕ್ತ ’ ಖ್ಯಾತಿಯ ಟಿ.ಎನ್‌.ಸೀತಾರಾಂ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾಗಿರುವ ‘ಮುಕ್ತ ’ಧಾರಾವಾಹಿ, ಮೊದಲ ಶ್ರೇಷ್ಠ ಧಾರಾವಾಹಿ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಯಾವ ಜನ್ಮದ ಮೈತ್ರಿ’ ಎರಡನೇ ಅತ್ಯುತ್ತಮ ಧಾರವಾಹಿ ಪ್ರಶಸ್ತಿಗೆ ಆಯ್ಕೆಯಾಗಿದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಏಪ್ರಿಲ್‌ 6ರಂದು ಸಂಜೆ 6.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.

ಆರ್ಯಭಟ ಪ್ರಶಸ್ತಿ ಪಟ್ಟಿಯ ಪೂರ್ಣ ವಿವರ :

 • ಮೊದಲ ಶ್ರೇಷ್ಠ ಧಾರವಾಹಿ- ಮುಕ್ತ
 • ಎರಡನೇ ಶ್ರೇಷ್ಠ ಧಾರವಾಹಿ- ಯಾವ ಜನ್ಮದ ಮೈತ್ರಿ
 • ಶ್ರೇಷ್ಠ ಕಥೆ - ವಿಜಯ್‌ ಸರೈಯ (ಯಾವ ಜನ್ಮದ ಮೈತ್ರಿ)
 • ಅತ್ಯುತ್ತಮ ಶ್ರೇಷ್ಠ ನಿರ್ದೇಶಕ - ಟಿ.ಎನ್‌.ಸೀತಾರಾಂ ( ಮುಕ್ತ )
 • ಶ್ರೇಷ್ಠ ಸಂಗೀತ ನಿರ್ದೇಶಕ - ಸಿ.ಅಶ್ವಥ್‌ ( ಮುಕ್ತ )
 • ಶ್ರೇಷ್ಠ ಖಳ ನಾಯಕ - ನಾಗರಾಜ ಮೂರ್ತಿ ( ಮುಕ್ತ )
 • ಶ್ರೇಷ್ಠ ನಟ - ಶಿವರಾಂ (ಅಮ್ಮ ನಾಗಮ್ಮ)
 • ಶ್ರೇಷ್ಠ ನಟಿ- ಸುಷ್ಮಾರಾವ್‌ (ಯಾವ ಜನ್ಮದ ಮೈತ್ರಿ)
 • ಶ್ರೇಷ್ಠ ಪೋಷಕ ನಟಿ - ಪವಿತ್ರ ಲೋಕೇಶ್‌ (ಗುಪ್ತಗಾಮಿನಿಯ)
 • ಶ್ರೇಷ್ಠ ಪೋಷಕ ನಟ - ಅಚ್ಯುತ ಕುಮಾರ್‌( ಪ್ರೀತಿ ಇಲ್ಲದ ಮೇಲೆ)
 • ಶ್ರೇಷ್ಠ ಅಭಿನಯದ ವಿಶೇಷ ಪ್ರಶಸ್ತಿ - ರಾಜೇಶ್‌ ( ಪ್ರೀತಿ ಇಲ್ಲದ ಮೇಲೆ)
 • ಶ್ರೇಷ್ಠ ಅಭಿನಯದ ವಿಶೇಷ ಪ್ರಶಸ್ತಿ - ಮರೀನ ತಾರಾ (ಬದುಕು)
 • ಸಿನಿಮಾ ಮತ್ತು ಟಿ.ವಿ.ಡೈರಕ್ಟರಿ ತಯಾರಿಸಿದ ಎಂ.ಜಿ.ಲಿಂಗರಾಜು, ಚಿತ್ರರಂಗಕ್ಕೆ ಶ್ರೇಷ್ಠ
 • ಕೊಡುಗೆ ನೀಡಿದ ಜಯಸಿಂಹ ಅವರಿಗೂ ಆರ್ಯಭಟ ಪ್ರಶಸ್ತಿ ಸಂದಿದೆ.
 • (ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada