»   » ಶಿವು ಜೊತೆ ನಟಿಸಿ, ರಾಜಣ್ಣನಿಗೆ ಶ್ರದ್ಧಾಂಜಲಿ -ಡಾ. ವಿಷ್ಣು

ಶಿವು ಜೊತೆ ನಟಿಸಿ, ರಾಜಣ್ಣನಿಗೆ ಶ್ರದ್ಧಾಂಜಲಿ -ಡಾ. ವಿಷ್ಣು

Subscribe to Filmibeat Kannada


ಕಿರಿಯ ನಟರೊಂದಿಗೆ ಅಭಿನಯಿಸಲು ಆಸಕ್ತಿ ತೋರುತ್ತಿರುವ ಸಾಹಸಸಿಂಹ ಡಾ. ವಿಷ್ಣುವರ್ಧನ್‌, ಈಗ ಇನ್ನೊಂದು ಬಯಕೆಯನ್ನು ತೆರೆದಿಟ್ಟಿದ್ದಾರೆ.

ನಟ ಶಿವರಾಜ್‌ಕುಮಾರ್‌ ಜೊತೆ ಅಭಿನಯಿಸಲು ನಾನು ಇಷ್ಟಪಡುತ್ತೇನೆ. ಆ ಮೂಲಕ ಡಾ.ರಾಜ್‌ಕುಮಾರ್‌ಗೆ ಗೌರವ ಶ್ರದ್ಧಾಂಜಲಿ ಸಲ್ಲಿಸುವ ಹಂಬಲ ನನ್ನದು ಎನ್ನುವ ಮೂಲಕ ವಿಷ್ಣು, ಅಭಿಮಾನಿಗಳಿಗೆ ರೋಮಾಂಚನ ತಂದಿದ್ದಾರೆ.

ಸುದ್ದಿಗಾರರೊಂದಿಗೆ ಮನಬಿಚ್ಚಿ ಮಾತನಾಡುತ್ತಿದ್ದ ಅವರು, ಶಿವರಾಜ್‌ಕುಮಾರ್‌ರೊಂದಿಗೆ ನಾನು ನಟಿಸುವುದನ್ನು ನೋಡಲು ರಾಜ್‌ ಬಯಸಿದ್ದರು. ಅವರು ಈ ಬಗ್ಗೆ ನನಗೆ ಹೇಳಿದ್ದರು. ಸೂಕ್ತ ಕತೆ ಸೇರಿದಂತೆ ವಿವಿಧ ಕಾರಣಗಳಿಂದ ಆ ಭಾಗ್ಯ ಕೂಡಿಬರಲಿಲ್ಲ. ಈಗ ಆ ದಿನವನ್ನು ಎದುರು ನೋಡುತ್ತಿದ್ದೇನೆ ಎಂದು ವಿಷ್ಣು ಹೇಳಿದ್ದಾರೆ.

ಶಿವರಾಜ್‌ ಕುಮಾರ್‌ ಒಬ್ಬ ಒಳ್ಳೆ ನಟ. ಅಷ್ಟೇ ಒಳ್ಳೆಯ ಮನಸ್ಸುಳ್ಳವರು ಎಂದು ವಿಷ್ಣು ಪ್ರಶಂಸಿಸಿದ್ದಾರೆ. ಜಗ್ಗೇಶ್‌ರೊಂದಿಗೆ, ಮತ್ತೊಂದು ಕಡೆ ದರ್ಶನ್‌ ಜೊತೆ ವಿಷ್ಣು ಅಭಿನಯಿಸುತ್ತಿದ್ದಾರೆ.

ದರ್ಶನ್‌, ಜಯಪ್ರದಾರೊಂದಿಗಿನ ಹೊಸ ಚಿತ್ರ‘ಈ ಬಂಧನ’ ಬಗ್ಗೆ ಪ್ರಸ್ತಾಪಿಸಿದ ವಿಷ್ಣು, ಇದು ರೀಮೇಕ್‌ ಚಿತ್ರವಲ್ಲ. ಇಂಗ್ಲಿಷ್‌ ಕಾದಂಬರಿಯನ್ನು ಮೂಲವಾಗಿಟ್ಟುಕೊಂಡು ಹೊರಬರುತ್ತಿರುವ ಚಿತ್ರ. ಇದು ನನ್ನ ಹಿಂದಿನ ‘ಬಂಧನ’ವನ್ನು ನೆನಪಿಸುತ್ತಿದೆ ಎಂದರು.

ನಾನು ಸದ್ಯಕ್ಕೆ ಒಪ್ಪಿಕೊಂಡಿರುವ ಚಿತ್ರಗಳು ಮುಗಿದ ಮೇಲೆ, ನಿವೃತ್ತಿ ಪಡೆಯುವ ಬಗ್ಗೆ ಚಿಂತಿಸುತ್ತಿದ್ದೇನೆ. ಮತ್ತೊಂದು ಕಡೆ

ಉಪೇಂದ್ರರೊಂದಿಗಿನ ‘ಯುಗೇ ಯುಗೇ’ ಚಿತ್ರ ಯಾಕೋ ಮುಂದಕ್ಕೆ ಹೋಗುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್‌ ಬಗ್ಗೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಜೊತೆ 10ಸುತ್ತಿನ ಚರ್ಚೆ ನಡೆದಿದೆ ಎಂದ ವಿಷ್ಣು ಮೌನಿಯಾದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada