»   » ಸಲ್ಮಾನ್‌ ಜತೆ ಅಭಿನಯಿಸಲು ‘ನೋ’ ಎಂದ ದೀಪಿಕಾ!

ಸಲ್ಮಾನ್‌ ಜತೆ ಅಭಿನಯಿಸಲು ‘ನೋ’ ಎಂದ ದೀಪಿಕಾ!

Posted By:
Subscribe to Filmibeat Kannada


ಐಶ್ವರ್ಯ ’ ಚಿತ್ರದಲ್ಲಿ ಉಪ್ಪಿ ಜತೆ ಕುಣಿದ ಮಂಗಳೂರು ಬೆಡಗಿ ದೀಪಿಕಾ ಪಡುಕೋಣೆ, ಬಾಲಿವುಡ್‌ನಲ್ಲಿ ಸಲ್ಮಾನ್‌ ಖಾನ್‌ ಜೊತೆ ಕುಣಿಯಲು ಆಗೋದಿಲ್ಲ ಎಂದಿದ್ದಾಳೆ! ಬಾಲಿವುಡ್‌ಗೆ ಕಾಲಿಟ್ಟ ಕೆಲ ಸಮಯದಲ್ಲೇ ಇಂತಹ ನಿರ್ಧಾರ ಪ್ರಕಟಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.

ಸಲ್ಮಾನ್‌ ಜತೆ ನಟಿಸುವ ಅವಕಾಶ ಒದಗಿ ಬಂದಿದ್ದು ,ಅನಿಲ್‌ ಕಪೂರ್‌ ಅಣ್ಣ ಬೋನಿ ಕಫೂರ್‌ ಮೂಲಕ. ಬೋನಿ ಕಪೂರ್‌ ತೆಲುಗಿನ ಸೂಪರ್‌ ಹಿಟ್‌ ಚಿತ್ರ ‘ಪೋಕರಿ’ಯನ್ನು ಹಿಂದಿಗೆ ರಿಮೇಕ್‌ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಲ್ಮಾನ್‌ ಒಪ್ಪಿದ್ದು ಆಗಿದೆ. ದೀಪಿಕಾರನ್ನು ಕರೆದು ಅವರಿಗಾಗಿ ‘ಪೋಕರಿ’ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲು ಯೋಚಿಸಿದ್ದ ಬೋನಿ ಕಪೂರ್‌, ಆರಂಭದಲ್ಲಿಯೇ ದೀಪಿಕಾ ಅವರ ನಕಾರದಿಂದ ಪೆಚ್ಚಾಗಿದ್ದಾರೆ.

ದೀಪಿಕಾ ಒಪ್ಪಲಿಲ್ಲ ಯಾಕೆ?

ಫರ್ಹಾಖಾನ್‌ ನಿರ್ದೇಶನದ ‘ಓಂ ಶಾಂತಿ ಓಂ’ ಚಿತ್ರದ ಮೂಲಕ ದೀಪಿಕಾ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಚಿತ್ರದಲ್ಲೇ ಶಾರುಖ್‌ ಖಾನ್‌ ಜತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು , ಯಾವುದೇ ಹೊಸ ಕಲಾವಿದೆಗೆ ಕನಸು ನನಸಾದಂತೆ!.

ಆದರೆ ಸಮಸ್ಯೆ ಬಂದಿರುವುದು ಈ ಚಿತ್ರದಿಂದಲೇ. ‘ಓಂ ಶಾಂತಿ ಓಂ’ ಚಿತ್ರ ಬಿಡುಗಡೆ ಆಗುವ ಮುನ್ನ ಯಾವುದೆ ಇತರ ಚಿತ್ರಗಳನ್ನು ದೀಪಿಕಾ ಒಪ್ಪಿಕೊಳ್ಳುವಂತಿಲ್ಲ. ಈ ಚಿತ್ರದ ಬಿಡುಗಡೆ ವಿಳಂಬವಾಗುತ್ತಿದೆ. ಬೋನಿ ಕಪೂರ್‌ ಅವರ ಆಹ್ವಾನವನ್ನು ತಿರಸ್ಕರಿಸಲು ಈ ಒಪ್ಪಂದವೇ ಕಾರಣ. ಹಾಗಾಗಿ ದೀಪಿಕಾ, ವಿನಯಪೂರ್ವಕವಾಗಿ ಬೋನಿಕಪೂರ್‌ ಅವರಿಗೆ ನೋ ಎಂದಿದ್ದಾರೆ.

ಬಂದ ದಾರಿಗೆ ಸುಂಕವಿಲ್ಲವೆಂದು ಬೋನಿ, ಹೊಸ ನಾಯಕಿ ಹುಡುಕಾಟದಲ್ಲಿ ತೊಡಗಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada