»   » ಗುಜರಾತ್‌ನ ಅಕ್ಷರಧಾಮದ ಮೇಲೆ ನಡೆದ ಧಾಳಿ ಕುರಿತ ಟೆಲಿ ಚಿತ್ರ ರೆಡಿ

ಗುಜರಾತ್‌ನ ಅಕ್ಷರಧಾಮದ ಮೇಲೆ ನಡೆದ ಧಾಳಿ ಕುರಿತ ಟೆಲಿ ಚಿತ್ರ ರೆಡಿ

Subscribe to Filmibeat Kannada

ನವದೆಹಲಿ: ಗುಜರಾತ್‌ನ ಅಕ್ಷರ ಧಾಮ ದೇವಸ್ಥಾನದ ಮೇಲೆ ಇತ್ತೀಚೆಗೆ ಉಗ್ರರು ನಡೆಸಿದ ಧಾಳಿಯ ಟೆಲಿ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದ ಹೆಸರು ಮಿಶನ್‌ ಅಕ್ಷರ ಧಾಮ.

ಮೇ 13ರಂದು ಅಕ್ಷರಧಾಮ ಚಿತ್ರದ ಬಿಡುಗಡೆ ಪೂರ್ವ ಪ್ರದರ್ಶನವನ್ನು ಉಪ ಪ್ರಧಾನಿ ಲಾಲ್‌ಕೃಷ್ಣ ಅಡ್ವಾಣಿ ವೀಕ್ಷಿಸಿದರು. ಆದರೆ ಅಡ್ವಾಣಿಯವರಿಗೆ ಈ ಚಿತ್ರ ಅಷ್ಟೇನೂ ಹಿಡಿಸಲಿಲ್ಲ. ಕಾರಣ, ಈ ಚಿತ್ರ ಅತ್ತ ಪೂರ್ತಿ ಡಾಕ್ಯುಮೆಂಟರಿಯೂ ಅಲ್ಲದೆ, ಇತ್ತ ಕಾಲ್ಪನಿಕವೂ ಅಲ್ಲ ಎಂಬಂತಿದೆ.

ಅಕ್ಷರ ಧಾಮ ಚಿತ್ರ ನಿರ್ಮಾಪಕರು ಈ ಹಿಂದೆ ಡಿಸೆಂಬರ್‌ 13ರಂದು ಸಂಸತ್ತಿನ ಮೇಲೆ ಉಗ್ರರು ನಡೆಸಿದ ಧಾಳಿಯ ಕುರಿತೂ ಚಿತ್ರ ತೆಗೆದಿದ್ದರು. ‘ ಸಂಸತ್ತಿನ ಮೇಲಿನ ಧಾಳಿಯ ಕುರಿತು ತೆಗೆದ ಚಿತ್ರ ನನಗೆ ಇಷ್ಟವಾಯಿತು. ಆದರೆ ಮಿಶನ್‌ ಅಕ್ಷರಧಾಮ ಆ ಮಾದರಿಯಲ್ಲಿ ಇಲ್ಲ. ಮಾಧ್ಯಮಗಳು ಭಯೋತ್ಪಾದಕರ ಕೃತ್ಯ ಹಾಗೂ ಘಟನೆಗಳನ್ನು ಸತ್ಯಕ್ಕೆ ಅಪಚಾರವಾಗದಂತೆ ಹೈಲೈಟ್‌ ಮಾಡಬೇಕು. ಆಗ ಭಯೋತ್ಪಾದನೆಯ ವಿರುದ್ಧದ ಹೋರಾಟದ ಬಗ್ಗೆ ಜನರಲ್ಲಿ ನಂಬಿಕೆ ಮತ್ತು ಆಶಾವಾದ ಹುಟ್ಟುತ್ತದೆ’ ಎಂದು ಚಿತ್ರ ನೋಡಿದ ಬಳಿಕ ನಿರ್ಮಾಪಕರಿಗೆ ಅಡ್ವಾಣಿ ಕಿವಿ ಮಾತು ಹೇಳಿದ್ದಾರೆ.

ಭಾರತವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದೆ. ಭಯೋತ್ಪಾದನೆಯ ಬಗ್ಗೆ ಜನ ಸಿನಿಕರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾಧ್ಯಮಗಳದು ಎಂಬುದು ಅಡ್ವಾಣಿ ಅಭಿಪ್ರಾಯ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada