»   » ಪುನೀತ್‌ ಹೊಸ ಚಿತ್ರಕ್ಕಾಗಿ ಮೆಲ್ಲಮೆಲ್ಲನೆ ಬಂದ ಹಂಸಿಕಾ!

ಪುನೀತ್‌ ಹೊಸ ಚಿತ್ರಕ್ಕಾಗಿ ಮೆಲ್ಲಮೆಲ್ಲನೆ ಬಂದ ಹಂಸಿಕಾ!

Posted By:
Subscribe to Filmibeat Kannada


ಪುನೀತ್‌ ಸಿನಿಮಾಗಳ ನಾಯಕಿಯರು, ಚೆಲುವಿನಲ್ಲಿ ಪೈಪೋಟಿಗೆ ನಿಲ್ಲುವಷ್ಟು ಆಕರ್ಷಕ. ಅವರ ಮುಂದಿನ ಹೊಸ ಚಿತ್ರದ ನಾಯಕಿ ಸೌಂದರ್ಯದಲ್ಲಿ ಮತ್ತು ಬೇಡಿಕೆಯಲ್ಲಿ ಯಾರಿಗೇನೂ ಕಡಿಮೆಯಿಲ್ಲ. ಹೆಸರು; ಹಂಸಿಕಾ

ತೆಲುಗಿನಲ್ಲಿ ಅಲ್ಲು ಅರ್ಜುನ್‌-ಹಂಸಿಕಾ ಜೋಡಿಯ ‘ದೇಶ ಮುದುರು’ ಬಾಕ್ಸಾಫೀಸ್‌ನಲ್ಲಿ ಮೆರೆದ ಕತೆ ಎಲ್ಲರಿಗೂ ಗೊತ್ತು. ಉದ್ಯಮಿ ಪ್ರದೀಪ್‌ ಮತ್ತು ಮೋನಾ ಮೋತ್ವಾನಿ ದಂಪತಿಗಳ ಮಗಳಾದ ಈ ಹಂಸಿಕಾ, ಪುನೀತ್‌ ಚಿತ್ರಕ್ಕಾಗಿ ಸ್ಯಾಂಡಲ್‌ವುಡ್‌ ಪ್ರವೇಶಿಸುತ್ತಿದ್ದಾರೆ. ಈ ಬಾಲೆಯ ಊರು; ಮುಂಬೈ ನಗರಿ. ಪೋದರ್‌ ಇಂಡರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ 9ನೇ ತರಗತಿ ಮುಗಿಸಿದ್ದು, ತುಳು, ಹಿಂದಿ ಸೇರಿದಂತೆ ಬಹುಭಾಷಾ ಪಂಡಿತೆ.

ಇನ್ನೂ ಹೆಸರಿಡದ ಪುನೀತ್‌ ಚಿತ್ರದ ಚಿತ್ರೀಕರಣ ಜೂನ್‌ನಲ್ಲಿ ಆರಂಭಗೊಳ್ಳಲಿದೆ. ಗುರು ಕಿರಣ್‌ ಸಂಗೀತ ಸಾರಥ್ಯದಲ್ಲಿ ಹಾಡುಗಳ ಧ್ವನಿ ಮುದ್ರಣ ಮೇ ಕಡೆಯ ವಾರದಲ್ಲಿ ಆರಂಭಗೊಳ್ಳಲಿದೆ. ಚಂದ್ರಶೇಖರ್‌ ನಿರ್ಮಾಣದ ಈ ಚಿತ್ರದ ನಿರ್ದೇಶಕರು; ಡಿ.ರಾಜೇಂದ್ರ ಬಾಬು.

ಪುನೀತ್‌ರ ‘ಅರಸು’ ಮುಗ್ಗರಿಸಿದ ಎಂಬ ಮಾಧ್ಯಮಗಳ ಮಾತುಗಳ ನಡುವೆಯೇ ಚಿತ್ರ 100ದಿನ ಪೂರೈಸಿದೆ. ಈ ಚಿತ್ರದ ನಂತರ ಪುನೀತ್‌ ಪಾತ್ರಗಳ ಆಯ್ಕೆಯಲ್ಲಿ ಮತ್ತಷ್ಟು ನಿಗಾವಹಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada