»   » ಪ್ರೀತ್ಸೋಕೆ ‘ನಲ್ಲ’! ಬರ್ತಿದ್ದಾನಲ್ಲ

ಪ್ರೀತ್ಸೋಕೆ ‘ನಲ್ಲ’! ಬರ್ತಿದ್ದಾನಲ್ಲ

Posted By: Super
Subscribe to Filmibeat Kannada
Hatric award winner sudeeps
ಪ್ರೀತಿನ, ಪ್ರೀತಿಯಿಂದ, ಪ್ರೀತ್ಸಿ ...
ಇದು ಯಾವ ಹಾಡು ಅಂದ್ಕೊಂಡ್ರ. ಕ್ಷಮಿಸಿ! ಇದು ಹಾಡಲ್ಲ . ಹಾಡು ಬರೆಯುವವನ ಹೊಸ ಪಾಡು. ಚಿತ್ರ ಸಾಹಿತಿ ಡಾ. ನಾಗೇಂದ್ರ ಪ್ರಸಾದ್‌ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರದ ಒಂದು ಮಾತು. ಇದು ಸುದೀಪ್‌ ಅಭಿನಯದ ಚಿತ್ರ 'ನಲ್ಲ".

'ನಲ್ಲ" ಕೆ.ಸಿ.ಎನ್‌ ಚಂದ್ರಶೇಖರ್‌ ಕಂಪನಿಯ ಚಿತ್ರ. ಇದರ ಮೂಲಕ ಅವರ ಮಕ್ಕಳಾದ ಕಾವ್ಯ, ಸ್ಪೂರ್ತಿ ಹಾಗೂ ಶ್ರೇಯಸ್‌ ನಿರ್ಮಾಪಕರಾಗಿ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ. ಹಾಗಾಗಿಯೇ ಮಹೂರ್ತಕ್ಕೆ ಹಬ್ಬದ ಕಳೆ ಬಂದಿತ್ತು. ಅವರ ಬ್ಯಾನರ್‌ ಇದುವರೆಗೆ ನಿರ್ಮಿಸಿರುವ ಚಿತ್ರಗಳಲ್ಲಿ ಹೆಚ್ಚಿನವೆಲ್ಲವೂ ಯಶಸ್ಸು ಕಂಡಿವೆ.

ನಲ್ಲ ತುಂಬಾ ಚೂಟಿ, ಚಮಕಾಯಿಸೋದ್ರಲ್ಲಿ ಚಾಣಕ್ಯ. ಮೆಗಾ ಸಿರೀಯಲ್‌ ತರಾ ಇಷ್ಟ ಪಟ್ಟ ಹುಡುಗಿಯನ್ನು ಪ್ರೀತಿಸಬಲ್ಲ. ಕೋಪ ಬಂದ್ರೆ ಕೆಟ್ಟವ. ಹಾಗೆಲ್ಲ ಆತ ಹೇಳೋದು 'ನನ್ನ ಕ್ರೈಂ ಡೈರಿಯಲ್ಲಿ ಬರೋತರ ಮಾಡ್ಬೇಡ್ರೋ" ಅಂತ. ಆದರೂ ಕೊನೆಗೊಂದು ದಿನ ಆತ ಕ್ರೈಂ ಡೈರಿಯಲ್ಲಿ ಬರೋ ಹಾಗಾಗುತ್ತದೆ. (ಶುದ್ಧ ರವಿಬೆಳಗೆರೆ ಸಾಲುಗಳು) ಅಲ್ಲಿಂದ 'ನಲ್ಲ"ನ (ಕಿಚ್ಚನ ) ಸ್ಟೈಲ್‌ಗಳು ಆರಂಭವಾಗುತ್ತವೆ.

ಚಿತ್ರದ ನಾಯಕಿ ಸಂಗೀತಾ. ಹೊಸ ಪರಿಚಯ. ಅವರ ಪಾತ್ರವನ್ನು ಅವರು ಉತ್ತಮವಾಗೇ ನಿರ್ವಹಿಸಬಲ್ಲರು ಎನ್ನುವ ಭರವಸೆ ಚಿತ್ರ ತಂಡದಲ್ಲಿದೆ. ನಿರ್ಮಾಪಕ ಚಂದ್ರಶೇಖರ್‌ ಹಾಗೂ ಸುದೀಪ್‌ ಪ್ರಕಾರ ಚಿತ್ರದಲ್ಲಿ ಯುವ ಜನಾಂಗಕ್ಕಾಗಿಷ್ಟು ಸ್ಟೈಲ್‌. ಮಹಿಳಾ ಪ್ರೇಕ್ಷಕರಿಗಾಗಿ ಸ್ವಲ್ಪ ಸೆಂಟಿಮೆಂಟ್‌.ಒಟ್ಟಾರೆ ನಾವೆಲ್ಟಿ ಮುಖ್ಯವಾಗಿದೆಯೆಂತೆ.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಡಾ. ನಾಗೇಂದ್ರ ಪ್ರಸಾದ್‌ ಅವರದ್ದೇ. ನಿರ್ಮಾಣ 'ರಂಗ (ಎಸ್‌.ಎಸ್‌.ಎಲ್‌.ಸಿ)" ನಿರ್ಮಾಪಕರಾದ ಎನ್‌. ಕುಮಾರ್‌. ಅಗಷ್ಟ್‌27ರಂದು ಚಿತ್ರ ತೆರೆತಾಣುವ ಸಾಧ್ಯತೆಯಿದೆ. ಅನಂತ್‌ನಾಗ್‌, ವಿನಯಾಪ್ರಸಾದ್‌, ನವೀನ್‌ ಮಯೂರ್‌, ಮುಮ್ತಾಜ್‌ ಮೊದಲಾದವರು ತಾರಾಬಳಗದಲ್ಲಿರುತ್ತಾರೆ. ವೆಂಕಟ್‌-ನಾರಾಯಣ್‌ ಅವರು ಸಂಗೀತ ನೀಡುತ್ತಿದ್ದಾರೆ.

English summary
Coming soon: Hatric award winner sudeeps new venture Nalla in nagendra prasads direction

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada