»   » ಈ ವಾರ ‘ಮ್ಯಾಜಿಕ್‌ ಅಜ್ಜಿ’ ಬರ್ತಾಳೆ!

ಈ ವಾರ ‘ಮ್ಯಾಜಿಕ್‌ ಅಜ್ಜಿ’ ಬರ್ತಾಳೆ!

Posted By:
Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ ಕನ್ನಡ
ಒಂದೂವರೆ ವರ್ಷಗಳಿಂದ ಬಾಕ್ಸ್‌ನಲ್ಲಿದ್ದ ‘ಮ್ಯಾಜಿಕ್‌ ಅಜ್ಜಿ’ ಈ ವಾರ ತೆರೆಗೆ(ಜೂ.17)ಬರುತ್ತಿದ್ದಾಳೆ. ಭಾರತದಲ್ಲಿಯೇ ಅತ್ಯಂತ ದುಬಾರಿ ಮಕ್ಕಳ ಚಿತ್ರ ಎಂಬ ಹೆಗ್ಗಳಿಕೆ ಚಿತ್ರಕ್ಕಿದೆ.

‘ರಣಧೀರ’ ಚಿತ್ರದ ಸುಂದರ ಚೆಲುವೆ ಖುಷ್ಟು ಅವರಿಗೆ ಚಿತ್ರದಲ್ಲಿ ನೂರು ವರ್ಷದ ಅಜ್ಜಿಯ ಪಾತ್ರ. ವಿಶೇಷ ಮೇಕಪ್‌ನಲ್ಲಿ ಖುಷ್ಟು ತಮ್ಮ ವೃತ್ತಿ ಜೀವನದ ಮತ್ತೊಂದು ಮಜಲನ್ನು ಪ್ರವೇಶಿಸಿದ್ದಾರೆ. ಮಕ್ಕಳಿಗೆ ‘ಮ್ಯಾಜಿಕ್‌ ಅಜ್ಜಿ’ ನಗುವಿನ ಹಬ್ಬ ತರಲಿದ್ದಾಳೆ.

40 ನಿಮಿಷಗಳ ಕಾಲ ಬಳಸಲಾಗಿರುವ ಗ್ರಾಫಿಕ್ಸ್‌ ಚಿತ್ರಕ್ಕೆ ವಿಶೇಷ ಮೆರಗು ತಂದಿದೆ. ಸುಮಾರು ಎರಡು ಕೋಟಿ ಸುರಿದು ಮಕ್ಕಳ ಚಿತ್ರ ನಿರ್ಮಿಸಿದ ಧೀರ ನಿರ್ಮಾಪಕರ ಹೆಸರು ರಜಸ್ಸು ಸುಬ್ಬರಾಜು. ಚಿತ್ರವನ್ನು ತೆಲುಗು, ತಮಿಳು, ಹಿಂದಿಗೆ ಡಬ್‌ ಮಾಡುವ ಯೋಜನೆ ನಿರ್ಮಾಪಕರಲ್ಲಿದೆ.

ರಾಜ್ಯದ ಎಲ್ಲಾ ಅನಾಥಾಶ್ರಮ ಮತ್ತು ಅಂಗವಿಕಲ ಮಕ್ಕಳಿಗೆ ‘ಮ್ಯಾಜಿಕ್‌ ಅಜ್ಜಿ’ಯನ್ನು ಕಾಣಲು ಉಚಿತ ಪ್ರವೇಶವನ್ನು ನಿರ್ಮಾಪಕ ಸುಬ್ಬರಾಜು ಕಲ್ಪಿಸಿದ್ದಾರೆ. ಚಿತ್ರದ ನಿದೇಶಕ ದಿನೇಶ್‌ ಬಾಬು ಅವರಿಗಂತೂ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.

ಚಿತ್ರದ ಇನ್ನೊಂದು ಆಕರ್ಷಣೆ ತೇಜಸ್‌. ‘ಶ್ರೀರೇಣುಕಾದೇವಿ’ ಮತ್ತು ‘ಪ್ರವಾಹ’ ಚಿತ್ರದಲ್ಲಿ ಸ್ಮರಣೀಯ ಅಭಿನಯ ನೀಡಿ ಎಲ್ಲರ ಗಮನ ಸೆಳೆದಿದ್ದ ತೇಜಸ್‌ಗೆ ಚಿತ್ರದಲ್ಲೊಂದು ಪ್ರಮುಖ ಪಾತ್ರವಿದೆ.

ಸ್ವರ್ಗ, ನರಕ, ಉದ್ಯಾನ, ಸಮುದ್ರದ ತಳ, ಆಕಾಶ -ಹೀಗೆ ಚಿತ್ರದಲ್ಲಿನ ಫ್ಯಾಂಟಸಿ ಟ್ರಿಪ್‌ ಮಕ್ಕಳನ್ನು ಮಾತ್ರವಲ್ಲ, ಹಿರಿಯರನ್ನು ಸೆಳೆದರೂ ಅಚ್ಚರಿಯೇನಿಲ್ಲ.

ಸುಧಾರಾಣಿ, ಪೂಜಾ ಲೋಕೇಶ್‌, ಚಿತ್ರ ಶೆಣೈ, ಚಿ.ಗುರುದತ್‌, ಮಂಡ್ಯ ರಮೇಶ್‌, ರಮೇಶ್‌ಭಟ್‌ ಚಿತ್ರದಲ್ಲಿದ್ದಾರೆ.

Post your views

ಪೂರಕ ಓದಿಗೆ-
ಮಕ್ಕಳಿಗೆ ‘ಮ್ಯಾಜಿಕ್‌ ಅಜ್ಜಿ’ ಗಿಫ್ಟ್‌-ಖುಷ್ಬೂ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada