»   » ಬೆಳಗಾವಿ ಬಳಿ ನಾನಾ ಪಾಟೇಕರ್‌ರ ಸಿನಿಮಾ ಶೂಟಿಂಗ್‌

ಬೆಳಗಾವಿ ಬಳಿ ನಾನಾ ಪಾಟೇಕರ್‌ರ ಸಿನಿಮಾ ಶೂಟಿಂಗ್‌

Subscribe to Filmibeat Kannada

ರಾಮದುರ್ಗ(ಬೆಳಗಾವಿ ಜಿಲ್ಲೆ) : ತಾಲ್ಲೂಕಿನ ಹಲಗತ್ತಿ ಗ್ರಾಮದಲ್ಲಿ ಬಾಲಿವುಡ್‌ನ ಪ್ರತಿಭಾವಂತ ನಟ, ಡೈಲಾಗ್‌ ಕಿಂಗ್‌ ನಾನಾ ಪಾಟೇಕರ್‌ ಅಭಿನಯಿಸುತ್ತಿರುವ ಚಲನಚಿತ್ರದ ಚಿತ್ರೀಕರಣ ನಡೆದಿದೆ.

ಶುಕ್ರವಾರವೂ ಚಿತ್ರೀಕರಣ ನಡೆಯುವ ಸಾಧ್ಯತೆಗಳಿವೆ. ಮಂಗಳವಾರ ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗಾಣದ ಬಳಿ ಚಿತ್ರೀಕರಣ ನಡೆಯಿತು. ನಾನಾ ಪಾಟೇಕರ್‌, ಹೊಸ ನಟಿ ಕಾಜಲ್‌ ಅಗರ್‌ವಾಲ್‌ ಹಾಗೂ ಸಹನಟಿ ರುಕ್ಮಿಣಿ ವಿಜಯನ್‌ ಮೊದಲಾದವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಚಿತ್ರದ ಹೆಸರು ಇನ್ನೂ ತಿಳಿದು ಬಂದಿಲ್ಲ.

ಸುತ್ತಮುತ್ತಲಿನ ಊರುಗಳ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿ ನಟ-ನಟಿಯರನ್ನು ನೋಡಿಕೊಂಡು ಹೋದರು. ಚಿತ್ರೀಕರಣ ಸಂಜೆತನಕ ನಡೆಯಿತು.

ತೀರಾ ಇತ್ತೀಚೆಗಷ್ಟೇ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯಾ ರೈ ಅಭಿನಯದ ‘ಗುರು’ ಸಿನಿಮಾದ ಚಿತ್ರೀಕರಣ ಬಾಗಲಕೋಟೆ ಸುತ್ತಮುತ್ತ ನಡೆದಿತ್ತು. ಹಲವು ದಿನಗಳಕಾಲ ನಡೆದ ಈ ಚಿತ್ರೀಕರಣ ವೀಕ್ಷಿಸಲು, ಲಕ್ಷಾಂತರ ಜನ ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada