»   » ಗ್ಲಾಮರ್‌ ವಿರೋಧಿ ಉಮಾಶಂಕರಿ ಮದುವೆಗೆ ಭರದ ಸಿದ್ಧತೆ

ಗ್ಲಾಮರ್‌ ವಿರೋಧಿ ಉಮಾಶಂಕರಿ ಮದುವೆಗೆ ಭರದ ಸಿದ್ಧತೆ

Subscribe to Filmibeat Kannada

‘ಉಪ್ಪಿದಾದಾ ಎಂಬಿಬಿಎಸ್‌’ ಚಿತ್ರದ ನಾಯಕಿ, ತಮಿಳು ಚಿತ್ರರಂಗದ ಖ್ಯಾತ ನಟಿ ಉಮಾ ಅಲಿಯಾಸ್‌ ಡಿ.ಆರ್‌.ಉಮಾಶಂಕರಿ(ಉಮಾ ಮಹೇಶ್ವರಿ), ಹಸೆಮಣೆ ಹತ್ತುತ್ತಿದ್ದಾರೆ. ಉಮೆಯ ಕೈ ಹಿಡಿಯುತ್ತಿರುವ ಶಂಕರನ ಹೆಸರು ಹೆಚ್‌.ದುಶ್ಯಂತ್‌. ಹೈದರಾಬಾದ್‌ ಮೂಲದ ಇವರು, ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌.

ಇಸ್ಕಾನ್‌ ದೇವಸ್ಥಾನದ ಆವರಣದಲ್ಲಿರುವ ಸಭಾಂಗಣದಲ್ಲಿ ಗುರುವಾರ(ಜೂ.15) ಬೆಳಗ್ಗೆ 5.17ಕ್ಕೆ ಮುಹೂರ್ತ . ಅದೇ ದಿನ 11.30ರಿಂದ 1ರವರೆಗೆ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಭಾರೀ ಸಿನಿಮಾ ದಂಡನ್ನು ನಿರೀಕ್ಷಿಸಲಾಗಿದೆ. ಕಾರಣ; ಉಮಾರ ಚಿತ್ರನಂಟು. ಉಮಾರ ತಂದೆ ಖ್ಯಾತ ನಿರ್ದೇಶಕ ಡಿ.ರಾಜೇಂದ್ರ ಬಾಬು. ತಾಯಿ ಪೋಷಕ ನಟಿ ಸುಮಿತ್ರಾ.

ತಮಿಳು ಮತ್ತು ಮಲಯಾಳಂನಲ್ಲಿ 40ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡ ಉಮಾ , ಗ್ಲಾಮರ್‌ ವಿರೋಧಿ. ‘ತುಂಡು ಬಟ್ಟೆ ಧರಿಸದೆಯೂ, ಸಭ್ಯ ಪಾತ್ರಗಳ ಮೂಲಕ ಇಮೇಜ್‌ ಸೃಷ್ಟಿಸಿಕೊಳ್ಳಬಹುದು. ಪ್ರೇಕ್ಷಕರ ಮನೆ ಗೆಲ್ಲಬಹುದು’ ಎಂಬುದನ್ನು ತಮ್ಮ ಚಿತ್ರಗಳ ಮೂಲಕ ಉಮಾ ಸಾಧಿಸಿ ತೋರಿಸಿದ್ದಾರೆ.

ಉಮಾರ ಹೊಸ ಚಿತ್ರ ‘ ಕಲ್ಲರಳಿ ಹೂವಾಗಿ’ ತೆರೆಗೆ ಬರಲು ಸಜ್ಜಾಗಿದೆ. ಈ ಐತಿಹಾಸಿಕ ಚಿತ್ರದಲ್ಲಿ ವಿಜಯರಾಘವೇಂದ್ರ ಜೊತೆ ಅವರು, ಮುಸ್ಲಿಂ ಹುಡುಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Post your views

‘ಗೆದ್ದೇ ಗೆಲ್ತೀನಿ ನಾನು ಗೆದ್ದೇ ಗೆಲ್ತೀನಿ’ -ಉಮಾ ಮಹೇಶ್ವರಿ
ಪ್ರೇಮಾಗೀಗ ಮದುವೆ ಸಮಯ!


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada