»   » ದುರ್ಗಾ ಶೆಟ್ಟಿ ಕನ್ನಡ ಅಷ್ಟಕ್ಕಷ್ಟೇರೀ..

ದುರ್ಗಾ ಶೆಟ್ಟಿ ಕನ್ನಡ ಅಷ್ಟಕ್ಕಷ್ಟೇರೀ..

Posted By: Staff
Subscribe to Filmibeat Kannada
Durga Shetty
'ನನಗೆ ಕನ್ನಡ ಅಷ್ಟೊಂದು ಚೆನ್ನಾಗಿ ಬರಲ್ಲ. ಹಾಗಾಗಿ ಅರ್ಧಂಬರ್ಧ ಭಾಷೆ ನಂದು. ಸ್ವಲ್ಪ ಅಡ್ಜಸ್ಟ್‌ ಮಾಡಿಕೊಳ್ಳಿ. ಪ್ಲೀಸ್‌..."ಎನ್ನುತ್ತಲೇ ತಮ್ಮ ಪ್ರೊಫೆಷನ್‌ ಪುರಾಣ ಆರಂಭಿಸಿದವರು ಕನ್ನಡದ ನವ ನಟಿ ದುರ್ಗಾ ಶೆಟ್ಟಿ.

ಇವತ್ತು ಗಾಂಧಿ ನಗರದ ಹಾಟ್‌ಕೇಕ್‌ ಎಂದೇ ಹೆಸರಾಗಿರುವ ದುರ್ಗಾ ಹೇಳುವುದಿಷ್ಟು-
ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ನಿರಂಜನ್‌. ನಾನು ಕ್ಯಾಮರಾ ಎದುರಿಸಿದ ಮೊದಲ ಚಿತ್ರ 'ಮೀಸೆ ಚಿಗುರಿದಾಗ". ಮೊದಲಿಗೆ ಕ್ಯಾಮರಾ ಮುಂದೆ ನಿಂತಾಗ ಅಯ್ಯೋ ಏನಾಗಿಬಿಡುತ್ತೋ ಏನೋ ಎಂಬ ಅಂಜಿಕೆ ಇತ್ತು. ಆದರೆ ಚಿತ್ರತಂಡದವರ ಆತ್ಮೀಯತೆ, ಸಹಕಾರ ನನ್ನ ಅಂಜಿಕೆಯನ್ನು ಓಡಿಸಿತು.

'ಮೀಸೆ ಚಿಗುರಿದಾಗ" ಮೊದಲ ಚಿತ್ರ. ನಾ ಅದರಲ್ಲಿ ತುಸು ಓವರ್‌ ಅನ್ನುವಂಥ ಗ್ಲಾಮರಸ್‌ ಪಾತ್ರದಲ್ಲಿ ಮಿಂಚಿದೆ. ಮೊದಲ ಚಿತ್ರ ಬಿಡುಗಡೆ ಆಗೋಕೆ ಮುಂಚೆಯೇ ಒಂದರ ಹಿಂದೊಂದು ಅವಕಾಶಗಳು ಸಿಕ್ಕವು ನೋಡಿ. ಆಗ ತುಂಬಾ ಖುಷಿಯಾಯಿತು. ಚಿತ್ರಗಳಲ್ಲಿ ಹಲವು ಜನರೆದುರು, ಹಲವು ಪಾತ್ರಗಳಿಗಾಗಿ ಅಭಿನಯಿಸಲು ನಿಂತೆನಲ್ಲ- ಆ ಸಂದರ್ಭದಲ್ಲಿ ನನ್ನ ನೆರವಿಗೆ ಬಂದದ್ದು ಹಿಂದೆ ಮಾಡೆಲಿಂಗ್‌ನಲ್ಲಿ ಕಲಿತಿದ್ದ ಅಭಿನಯ, ಅನುಭವ ಎನ್ನುವ ದುರ್ಗಾ ಶೆಟ್ಟಿ ಮುಂದುವರಿದು ಹೇಳುತ್ತಾರೆ-

'...ಸಿನಿಮಾ ರಂಗ ಕೆಟ್ಟದ್ದು ಅಂತ ಈವತ್ತಿನವರೆಗೂ ನಂಗೆ ಅನಿಸಿಲ್ಲ. ನಾವು ಒಳ್ಳೆಯವರಾಗಿ ನಡೆದುಕೊಂಡರೆ ಉಳಿದವರೂ ಒಳ್ಳೆಯವರಾಗಿ ವರ್ತಿಸುತ್ತಾರೆ. ನಾವು ಕೆಟ್ಟವರಾದರೆ, ಉಳಿದವರೂ ಕೆಟ್ಟವರಾಗಿ ನಡ್ಕೋತಾರೆ. ನನಗೀಗ ತೆಲುಗು, ತಮಿಳು ಚಿತ್ರರಂಗದಿಂದಲೂ ಅವಕಾಶಗಳು ಬರ್ತಾ ಇವೆ. ಬೆಸ್ಟ್‌ ಕ್ಯಾರೆಕ್ಟರ್‌ ಎಂಬಂಥ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡ್ಕೋತಾ ಇದೀನಿ ನಾನು" ನಸು ನಕ್ಕರು ದುರ್ಗಾ.

ಈ ಪ್ರೊಫೆಷನ್‌ ಕುರಿತು ಚಿಕ್ಕ ಪುಟ್ಟ ಅಸಹನೆ ಇರೋದು ಸಹಜ. ಆದ್ರೆ ಮುಂದೆ ಕೂಡ ಸಿನಿಮಾ ರಂಗದಲ್ಲೇ ಉಳಿಯಬೇಕು. ಜನರು ಬಹುಕಾಲ ನೆನಪಿಡುವ ಹಾಗೆ, ಅವರಿಗೆ ಇಷ್ಟವಾಗುವ ಹಾಗೆ ನಟಿಸಬೇಕು ಎಂದೆಲ್ಲ ಕನಸು ಕಂಡಿರುವ ದುರ್ಗಾ ಶೆಟ್ಟಿಗೆ ಅಂದುಕೊಂಡಿದ್ದನ್ನೆಲ್ಲ ಸಾಧಿಸಲೇ ಬೇಕು ಎಂಬ ಛಲವೂ ಇದೆಯಂತೆ. ನನ್ನ ಪ್ರೊಫೆಷನ್‌ ಕತೆ ಹೇಳಿದ್ದಾಯ್ತಲ್ಲಾ ಸ್ವಾಮಿ, ಈಗ ನೀವೂ ನಂಗೊಂದು ಬೆಸ್ಟ್‌ ಆಫ್‌ ಲಕ್‌ ಹೇಳಿ ಎಂದು ಆರ್ಡರು ಎಸೆದೇ ಮಾತು ಮುಗಿಸಿದರು ದುರ್ಗಾ ಶೆಟ್ಟಿ.(ಸ್ನೇಹಸೇತು : ವಿಜಯ ಕರ್ನಾಟಕ)

English summary
Kannada cinema world : Hot offers in the hand of Durga Shetty

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada