ದಕ್ಷಿಣಭಾರತ ಚಿತ್ರರಂಗದ ‘ಪ್ರೀಮಿಯರ್‌’ ಬಸವರಾಜಯ್ಯ ವಿಧಿವಶ

By Super

ಮೈಸೂರು : ನಿರ್ಮಾಪಕರುಗಳ ಪಾಲಿನ ಮೆಕ್ಕಾ ಎಂದು ಖ್ಯಾತವಾಗಿದ್ದ ಪ್ರೀಮಿಯರ್‌ ಸ್ಟುಡಿಯೋದ ಮಾಲಿಕ ಎಂ.ಎನ್‌.ಬಸವರಾಜಯ್ಯ ಬುಧವಾರ (ಜುಲೈ 14) ಬೆಳಗ್ಗೆ ನಿಧನರಾದರು. ಕೆಲ ಕಾಲದಿಂದ ಅಸ್ವಸ್ಥರಾಗಿದ್ದ ಬಸವರಾಜಯ್ಯನವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು . ಅವರಿಗೆ 92 ವರ್ಷ ವಯಸ್ಸಾಗಿತ್ತು . ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ.

ಬಸವರಾಜಯ್ಯನವರ ಪ್ರೀಮಿಯರ್‌ ಸ್ಟುಡಿಯೋದಲ್ಲಿ ಕನ್ನಡ ಚಿತ್ರಗಳು ಮಾತ್ರವಲ್ಲದೆ ಅನೇಕ ತಮಿಳು, ತೆಲುಗು, ಮಲಯಾಳಂ, ತುಳು ಹಾಗೂ ಕೊಂಕಣಿ ಚಿತ್ರಗಳ ಚಿತ್ರೀಕರಣವೂ ನಡೆದಿದೆ. ಬಿ.ಆರ್‌.ಪಂತಲು, ಪುಟ್ಟಣ್ಣ ಕಣಗಾಲ್‌, ಮಣಿರತ್ನಂ, ಬಾಲಚಂದರ್‌ ಮುಂತಾದ ಖ್ಯಾತ ನಿರ್ದೇಶಕರು ತಮ್ಮ ಚಿತ್ರಗಳನ್ನು ಪ್ರೀಮಿಯರ್‌ ಸ್ಟುಡಿಯೋದಲ್ಲಿ ಚಿತ್ರಿಸಿದ್ದಾರೆ. ಹಿಂದಿಯ ಸೂಪರ್‌ಹಿಟ್‌ ಚಿತ್ರ ಶೋಲೆ ಚಿತ್ರೀಕರಣದ ನೆನಪುಗಳು ಪ್ರೀಮಿಯರ್‌ ಪರಿಸರದಲ್ಲಿ ಇನ್ನೂ ಹಸಿರಾಗಿದೆ. ಇಂಗ್ಲಿಷ್‌ನ ಎಲಿಫೆಂಟ್‌ ಬಾಯ್‌ ಎನ್ನುವ ಚಿತ್ರದ ಚಿತ್ರೀಕರಣವೂ ಇಲ್ಲಿ ನಡೆದಿದೆ.

ಮೈಸೂರಿನಲ್ಲಿ , 10 ಎಕರೆ ವಿಸ್ತೀರ್ಣದ ಜಾಗದಲ್ಲಿ ಬಸವರಾಜಯ್ಯ 1954ರಲ್ಲಿ ಪ್ರೀಮಿಯರ್‌ ಸ್ಟುಡಿಯೋ ಬೆಳೆಸಿದ್ದರು. ಕಳೆದ 50 ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗವಾಗಿ ಪ್ರೀಮಿಯರ್‌ ಸ್ಟುಡಿಯೋ ಹಾಗೂ ಬಸವರಾಜಯ್ಯ ಗುರ್ತಿಸಿಕೊಂಡಿದ್ದರು.

ರಾಜ್ಯದಲ್ಲಿ ಚಿತ್ರೀಕರಣ ನಡೆಸಿದ ಕನ್ನಡ ಚಿತ್ರಗಳಿಗೆ ಸಬ್ಸಿಡಿ ನೀಡುವ ಯೋಜನೆ ಜಾರಿಗೆ ಬಂದ ಹಿಂದೆ ಬಸವರಾಜಯ್ಯನವರ ಶ್ರಮವಿತ್ತು . ಈ ಯೋಜನೆಯನ್ನು ಜಾರಿಗೊಳಿಸುವಂತೆ ಆಗಿನ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪನವರ ಮೇಲೆ ಬಸವರಾಜಯ್ಯ ಒತ್ತಡ ತಂದಿದ್ದರು.

ಬಸವರಾಜಯ್ಯನವರ ಪ್ರೀಮಿಯರ್‌ ಸ್ಟುಡಿಯೋ ಅನೇಕ ಅದ್ಭುತ ಚಿತ್ರಗಳಿಗೆ ಸಾಕ್ಷಿಯಾಗಿರುವಂತೆ ದುರಂತಕ್ಕೂ ಸಾಕ್ಷಿಯಾಗಿದೆ. 1986ರಲ್ಲಿ , ಸಂಜಯ್‌ಖಾನ್‌ರ ಸೋರ್ಡ್‌ ಆಫ್‌ ಟಿಪ್ಪುಸುಲ್ತಾನ್‌ ಧಾರಾವಾಹಿಯ ಚಿತ್ರೀಕರಣದ ಸಂದರ್ಭದಲ್ಲಿ ಉಂಟಾದ ಅಗ್ನಿ ಆಕಸ್ಮಿಕದಲ್ಲಿ 62 ಮಂದಿ ಸಜೀವವಾಗಿ ದಹಿಸಿಹೋಗಿದ್ದರು. ಈ ಘಟನೆಯಲ್ಲಿ ಸ್ಟುಡಿಯೋದ ಒಂದು ಭಾಗ ಸುಟ್ಟುಹೋಗಿತ್ತು . ಬಸವರಾಜಯ್ಯ ಈ ದುರ್ಘಟನೆಯಿಂದ ತತ್ತರಿಸಿದ್ದರು.

ಬಸವರಾಜಯ್ಯ ಇನ್ನು ನೆನಪು ಮಾತ್ರ. ಅವರ ಸಾಧನೆಯ ರೂಪವಾಗಿ ಕನ್ನಡ ಚಿತ್ರರಂಗ ನಮ್ಮೊಂದಿಗಿದೆ.(ಇನ್ಫೋ ವಾರ್ತೆ)

English summary
M N Basavarajaiah of Premier Studio, Mysore has died (July 14, 200). He was 92
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X