»   » ಬರಗೂರರ ‘ಶಾಂತಿ’ ಚಲನಚಿತ್ರಕ್ಕೆ ಗಿನ್ನಿಸ್‌ ಮಾನ್ಯತೆ

ಬರಗೂರರ ‘ಶಾಂತಿ’ ಚಲನಚಿತ್ರಕ್ಕೆ ಗಿನ್ನಿಸ್‌ ಮಾನ್ಯತೆ

Subscribe to Filmibeat Kannada

ಬೆಂಗಳೂರು : ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಕಥೆ ಮತ್ತು ನಿರ್ದೇಶನದ ‘ಶಾಂತಿ’ ಚಿತ್ರ ಗಿನ್ನಿಸ್‌ ದಾಖಲೆಗೆ ಸೇರ್ಪಡೆಯಾಗಿದೆ.

ಈ ಬಗೆಗೆ ಸುದ್ದಿಗಾರರಿಗೆ ಗುರುವಾರ ಮಾಹಿತಿ ನೀಡಿದ ಬರಗೂರು ರಾಮಚಂದ್ರಪ್ಪ, ಕಡಿಮೆ ಕಲಾವಿದರುಳ್ಳ ರೂಪಕ ಚಿತ್ರ ವಿಭಾಗದಲ್ಲಿ ‘ಶಾಂತಿ’ ಗಿನ್ನಿಸ್‌ ಪುಸ್ತಕಕ್ಕೆ ಪ್ರವೇಶ ಪಡೆದಿದೆ ಎಂದರು.

ಏಕೈಕ ಕಲಾವಿದ ಅಥವಾ ಕಲಾವಿದೆಯ ಈ ಚಿತ್ರದ ವಸ್ತು , ವೈವಿಧ್ಯತೆಯಿಂದ ಕೂಡಿದೆ. ಸಮಕಾಲೀನ ಸಂವೇದನೆ ಚಿತ್ರದಲ್ಲಿದೆ. ಶಾಂತಿ ಮತ್ತು ಸಾಮರಸ್ಯಗಳನ್ನು ಚಿತ್ರ ಬಿಂಬಿಸಿದೆ ಎಂದು ಬರಗೂರು ಹೇಳಿದರು.

ಈ ಸಂದರ್ಭದಲ್ಲಿ ‘ಶಾಂತಿ’ ಚಿತ್ರದ ನಿರ್ಮಾಪಕ ರಮೇಶ್‌ ಯಾದವ್‌, ಸಂಗೀತ ನಿರ್ದೇಶಕ ಹಂಸಲೇಖ ಹಾಜರಿದ್ದರು. ಚಿತ್ರದಲ್ಲಿ ನಟಿ ಭಾವನಾ ಏಕೈಕ ಕಲಾವಿದೆಯಾಗಿ ನಟಿಸಿದ್ದಾರೆ.
(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada