»   » ಜಗ್ಗೇಶ್‌ಗೆ ಮತ್ತೆ ಡಿಮ್ಯಾಡಪ್ಪೊ ಡಿಮ್ಯಾಂಡು

ಜಗ್ಗೇಶ್‌ಗೆ ಮತ್ತೆ ಡಿಮ್ಯಾಡಪ್ಪೊ ಡಿಮ್ಯಾಂಡು

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

‘ಇಷ್ಟು ವರ್ಷ ಸಿನಿಮಾ ಮಾಡಿದ್ದೀನಿ, ಈಗಲೂ ಐತೇರೀಕಿ ಲಕ್ಕಡಿ ಪಕ್ಕಡಿ ಜುಮ್ಮಾ ಅಂತಾನೇ ಅನ್ನಪ್ಪಾ ಅಂದ್ರೆ ಹೆಂಗಾತೈತೆ ಶಿವಾ’ ಅನ್ನುವ ಜಗ್ಗೇಶ್‌ ಸೀರಿಯಸ್‌ ಮೂಡಿಗೆ ಶಿಫ್ಟ್‌ ಆಗಲು ನಿಶ್ಚಯಿಸಿದ್ದರೂ, ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ಅವರ ಸಿನಿಮಾಗಳು ಡಬ್ಬದಲ್ಲಿರುವಾಗಲೇ ಜಗ್ಗೇಶ್‌ಗೆ ಈಗ ಮತ್ತೆ ಡಿಮ್ಯಾಂಡಪ್ಪೋ ಡಿಮ್ಯಾಂಡು.

ಇದ್ದ ಬದ್ದ ದುಡ್ಡು ಹಾಕಿ, ಮಹತ್ವಾಕಾಂಕ್ಷೆ ಇಟ್ಟುಕೊಂಡು ತಯಾರಿಸಿದ ಮೇಕಪ್‌ ಚಿತ್ರ ಬೋರಲಾದ ನಂತರ ನಿರ್ಮಾಪಕನಾಗಲು ಒಲ್ಲೆ ಎಂಬ ತಾತ್ಕಾಲಿಕ ತೀರ್ಮಾನಕ್ಕೆ ಜಗ್ಗೇಶ್‌ ಬಂದರು. ಅದರಿಂದ ಅವರಿಗೆ ಒಳ್ಳೆಯದೇ ಆಗಿದೆ. ‘ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ’ ಸಿಟಿಗಳಲ್ಲಿ ಓಡದಿದ್ದರೂ, ಹಳ್ಳಿ ಹೈಕಳು ಬ್ಲಾಕ್‌ ಟಿಕೇಟು ಮಾರಿ ಜಗ್ಗೇಶ್‌ ಅವರನ್ನು ಗೆಲ್ಲಿಸಿಬಿಟ್ಟರು. ಆಮೇಲೆ ‘ಕಾಸು ಇದ್ದೋನೆ ಬಾಸು’, ‘ಹುಚ್ಚನ ಮದುವೇಲಿ ಉಂಡೋನೆ ಜಾಣ’ , ‘ಯಾರಿಗೆ ಬೇಕು ಈ ಸಂಸಾರ’ ಚಿತ್ರಗಳು ಹುಡುಕಿಕೊಂಡು ಬಂದವು. ಈ ಪೈಕಿ ಇನ್ನೂ ಒಂದೂ ತೆರೆಕಂಡಿಲ್ಲ. ಅಷ್ಟರಲ್ಲೇ ಈಗ ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಚಿತ್ರ ಜಗ್ಗೇಶ್‌ಗೆ ಸಿಕ್ಕಿದೆ.

ರಾಜಶೇಖರ್‌ ನಿರ್ಮಾಣದ ಈ ಚಿತ್ರಕ್ಕೆ ಬಾಲಾಜಿ ಸಿಂಗ್‌ ಕಥೆ ಬರೆದು, ನಿರ್ದೇಶಿಸುತ್ತಿದ್ದಾರೆ. ಮಧ್ಯಮ ವರ್ಗದ ಇಬ್ಬರು ಹುಡುಗರು ಮತ್ತು ಹುಡುಗೀರ ಸರಳ ಕಥೆಯ ಈ ಚಿತ್ರದ ಟೈಟಲ್ಲೇ ಮೆಸೇಜನ್ನು ಹೇಳುತ್ತದೆ. ಅಂದಹಾಗೆ, ಇದು ಜಗ್ಗೇಶ್‌ 97ನೇ ಚಿತ್ರ. ಸೋದರ ಕೋಮಲ್‌ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಮ್ರತಾ ಹಾಗೂ ಸಂಗೀತ ಕಪೂರ್‌ ಚಿತ್ರದ ನಾಯಕಿಯರು.

ಮೊದಲೇ ಹೇಳಿದಂತೆ ತಮಾಷಿ ಚಿತ್ರಗಳಲ್ಲಿ ಮಾಡಿ ಮಾಡಿ ಜಗ್ಗೇಶ್‌ಗೆ ಸಾಕಾಗಿಹೋಗಿದೆ. ಮುಂದೆ ಅವರು ಚಿತ್ರ ಅಂತೇನಾದರೂ ನಿರ್ಮಿಸಿದರೆ ಅದು ದಲಿತರ ಸಮಸ್ಯೆಯಾಂದರ ಗಂಭೀರ ಕಥೆಯಾಗಿರುತ್ತೆ. ರಾಜಕಾರಣಿಯಾಗಿ ಹಳ್ಳಿಯಾಂದರಲ್ಲಿ ತಾವೇ ಕಂಡ ಸಮಸ್ಯೆಯನ್ನು ತೆರೆಗೆ ತರುವುದು ಜಗ್ಗೇಶ್‌ ಕನಸು.

Post your views

ಇದನ್ನೂ ಓದಿ-
ಜಗ್ಗೇಶ್‌-ರಾಧಿಕಾ ಚೌಧುರಿ ಲುಕ್ಕು ಡಿಕ್ಕಿ!


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada