»   » ಉದಯ ವಿರುದ್ಧ ಕೇಬಲಿಗರ ಬಂಡಾಯ

ಉದಯ ವಿರುದ್ಧ ಕೇಬಲಿಗರ ಬಂಡಾಯ

Posted By: Staff
Subscribe to Filmibeat Kannada

ಬೆಂಗಳೂರು: ಕನ್ನಡದ ಜನಪ್ರಿಯ ಚಾನಲ್‌ ಉದಯ ಟೀವಿ ಪೇ ಚಾನಲ್‌ ಆಗಿ ಬದಲಾಗಿರುವುದು ಕೇಬಲ್‌ ಆಪರೇಟರ್‌ಗಳ ಅಸಮಾಧಾನಕ್ಕೆ ಕಾರಣವಾಗಿದ್ದು , ಕರ್ನಾಟಕ ಕೇಬಲ್‌ ಆಪರೇಟರ್‌ಗಳ ಸಂಘ ಉದಯ ಟೀವಿಯ ವಿರುದ್ಧ ಆಗಸ್ಟ್‌ 16ರಂದು ಭಾರೀ ಪ್ರತಿಭಟನೆ ಹಮ್ಮಿಕೊಂಡಿದೆ.

ಆ.16ರ ಸೋಮವಾರ ಬೆಳಗ್ಗೆ 10.30 ಕ್ಕೆ ಬೆಂಗಳೂರು ಚಲೋ ನಡೆಸಲು ಕೇಬಲ್‌ ಆಪರೇಟರ್‌ಗಳ ಸಂಘ ನಿರ್ಧರಿಸಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ರಾಜ್ಯದಲ್ಲಿ ಸುಮಾರು 2000ಕ್ಕೂ ಹೆಚ್ಚು ಕೇಬಲ್‌ ಟಿವಿ ಅಪರೇಟರ್‌ಗಳಿದ್ದು ಅವರೆಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಸಂಘ ಕರೆ ನೀಡಿದೆ.

ಬೆಂಗಳೂರಿನ ವಸಂತನಗರದಲ್ಲಿರುವ ಉದಯ ಟೀವಿ ಕಚೇರಿ ಎದುರು ಧರಣಿ ನಡೆಸಲಾಗುವುದು. ಪೇ ಚಾನಲ್‌ ನಿರ್ಧಾರದಿಂದ ಉದಯ ಹಿಂದೆ ಸರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೇಬಲ್‌ ಆಪರೇಟರ್‌ಗಳು ಎಚ್ಚರಿಸಿದದಾರೆ.

ಸನ್‌ ಹಾಗೂ ಸೂರ್ಯ ಚಾನಲ್‌ಗಳು ಉಚಿತ ಚಾನಲ್‌ಗಳಾಗಿ ಮುಂದುವರಿದಿದ್ದರೂ, ಉದಯಟಿವಿಯನ್ನು ಮಾತ್ರ ಪೇ ಚಾನಲ್‌ ಆಗಿ ಪರಿವರ್ತಿಸುವ ಕ್ರಮ ಸರಿಯಾದುದಲ್ಲ ಎಂದು ಕೇಬಲ್‌ ಆಪರೇಟರ್‌ಗಳ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಬಲ್‌ ದುಬಾರಿ : ಸೇವಾ ತೆರಿಗೆ ಮತ್ತು ಶೈಕ್ಷಣಿಕ ಸೆಸ್‌ ಏರಿಕೆ ಹಿನ್ನೆಲೆಯಲ್ಲಿ ಕೇಬಲ್‌ ದರ ಏರಿಸಲು ಕೇಬಲ್‌ ಆಪರೇಟರ್‌ಗೆ ದೂರವಾಣಿ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ.(ಏಜನ್ಸೀಸ್‌)

English summary
Karnataka State Cable TV Operators' Association decided to take out Bangalore Chalo protest march on August 16 at 10.30 am against Udaya TV network for its decision to convert Kannada channels from freetoair channels to pay channels
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada