»   » ರಾಜ್‌ ಪ್ರಭಾವ : ಕಣ್ಣು ಕೊಡುವ ಕಣ್ಣಪ್ಪರ ಸಂಖ್ಯೆ ಹೆಚ್ಚಳ

ರಾಜ್‌ ಪ್ರಭಾವ : ಕಣ್ಣು ಕೊಡುವ ಕಣ್ಣಪ್ಪರ ಸಂಖ್ಯೆ ಹೆಚ್ಚಳ

Subscribe to Filmibeat Kannada

ಬೆಂಗಳೂರು : ನಟ ರಾಜ್‌ಕುಮಾರ್‌ ಅವರ ಆದರ್ಶಗಳನ್ನು ಅಭಿಮಾನಿಗಳು ಪಾಲಿಸುತ್ತಿದ್ದಾರೆ. ಕಳೆದ 3 ತಿಂಗಳಲ್ಲಿ ನಾರಾಯಣ ನೇತ್ರಾಲಯದ ‘ರಾಜ್‌ ನೇತ್ರನಿಧಿ’ಯಲ್ಲಿ 1500ಕ್ಕೂ ಅಧಿಕ ಮಂದಿ ನೇತ್ರದಾನಕ್ಕೆ ಮುಂದೆ ಬಂದಿದ್ದಾರೆ.

ನೇತ್ರದಾನದ ಮಹತ್ವವನ್ನು ಜನರು ಈಗೀಗ ಅರಿಯುತ್ತಿದ್ದಾರೆ. ರಾಜ್‌ಕುಮಾರ್‌ರ ಮಾದರಿಯಲ್ಲಿ ಗಣ್ಯರು, ಸಾರ್ವಜನಿಕರು ನೇತ್ರದಾನಕ್ಕೆ ಆಸಕ್ತಿ ತೋರಿಸಿದ್ದಾರೆ. ಈ ಆಸಕ್ತಿ ಮತ್ತು ಜಾಗೃತಿ ಮತ್ತಷ್ಟು ಹೆಚ್ಚಿದಲ್ಲಿ, ರಾಜ್ಯದಲ್ಲಿರುವ ಒಂದು ಲಕ್ಷ ಅಂಧರು ಪ್ರಪಂಚ ನೋಡಬಲ್ಲರು.

ನಟಿ ಬಿ.ಸರೋಜಾದೇವಿ, ನಟ ದೊಡ್ಡಣ್ಣ, ಕ್ರಿಕೆಟ್‌ಪಟುಗಳಾದ ಅನಿಲ್‌ ಕುಂಬ್ಳೆ, ಬ್ರಿಜೇಶ್‌ ಪಟೇಲ್‌, ನೂತನ ಲೋಕಾಯುಕ್ತ ಸಂತೋಷ್‌ ಹೆಗಡೆ, ಶಾಸಕ ಬಿ.ಸಿ.ಪಾಟೀಲ್‌ ಮತ್ತಿತರರು ಕಣ್ಣು ನೀಡುವ ಪ್ರತಿಜ್ಞೆ ಸ್ವೀಕರಿಸಿದ್ದಾರೆ.

ನಂದಿನಿ ಹೋಟೆಲ್‌ ಸಮೂಹದ ಅಧ್ಯಕ್ಷ ಎನ್‌.ಆನಂದ್‌ ನೇತ್ರದಾನ ಮಾಡಿದವರಿಗೆ, ತಮ್ಮ ಹೋಟೆಲ್‌ನಲ್ಲಿ ಜೀವನಪೂರ್ತಿ ಶೇ.10ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada