»   » ದರ್ಶನ್ ಹೊಸ ಚಿತ್ರದಲ್ಲಿ ನಮಿತಾ ಎಂಬ ಶೃಂಗಾರ ಕಾವ್ಯ!

ದರ್ಶನ್ ಹೊಸ ಚಿತ್ರದಲ್ಲಿ ನಮಿತಾ ಎಂಬ ಶೃಂಗಾರ ಕಾವ್ಯ!

Subscribe to Filmibeat Kannada


ನೀಳಕಂಠ ಚಿತ್ರ ಇನ್ನೊಂದು ಮಲ್ಲ ಆಗುತ್ತದೆ. ಕೇವಲ ನಮಿತಾಳ ಮೈಮಾಟ ಮತ್ತು ಸಿಗ್ಗಿಲ್ಲದೇ ಮೈತೋರಿಸುವ ಧಾರಾಳತನದಿಂದಾಗಿಯೇ ಚಿತ್ರ ಗೆದ್ದೇಗೆಲ್ಲುತ್ತದೆ.

ಹೀಗಾಗಿ ಕನಸುಗಾರ ರವಿಚಂದ್ರನ್ ಅವರ ಸೋಲಿನ ಸರಪಣಿ ತುಂಡಾಗುತ್ತದೆ ಎಂದು ಪತ್ರಕರ್ತರು ಬರೆದಿದ್ದರು. ಆದರೂ ಚಿತ್ರ ಗೆಲ್ಲಲಿಲ್ಲ. ನಿರ್ಮಾಪಕರ ಜೇಬು ತುಂಬಿಸಲಿಲ್ಲ. ಆದರೆ ನಮಿತಾ ಎನ್ನುವ ಹೆಸರು, ಕನ್ನಡದ ಪಡ್ಡೆಗಳ ಮನದಲ್ಲಿ ಉಳಿದುಬಿಟ್ಟಿದೆ.

ನೀಳಕಂಠದಲ್ಲಿ ಅಮ್ಮೊಮ್ಮೊ ..ಎಂದು ಕುಣಿದು ಕುಪ್ಪಳಿಸಿದ ನಮಿತಾ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಐಟಂ ಗರ್ಲ್ ಎಂಬ ಕುಖ್ಯಾತಿ ಪಡೆದವಳು. ನಮಿತಾಳನ್ನು ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಕರೆತರಲು ನಿರ್ಮಾಪಕರು ಉತ್ಸುಕರಾಗಿದ್ದಾರೆ.

ಲಭ್ಯವಿರುವ ಮೂಲಗಳ ಪ್ರಕಾರ, ನಮಿತಾ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ. ಈ ಚಿತ್ರದ ನಾಯಕ ದರ್ಶನ್. ಆಗಸ್ಟ್ ಕೊನೆ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ .

ಬಹುಭಾಷಾ ತಾರೆಯಾಗಳು ನಮಿತಾಗೆ ಹಂಬಲವಂತೆ. ಒಳ್ಳೆ ಪಾತ್ರಗಳು ಸಿಕ್ಕಿದರೆ, ಮಲಯಾಳಂ ಚಿತ್ರದಲ್ಲಿ ಅಭಿನಯಿಸಲು ನಮಿತಾ ಸಿದ್ಧರಂತೆ.

ನಮಿತಾ ಬಗ್ಗೆ ಇನ್ನಷ್ಟು :

ಸೆಂಟಿಮೆಂಟು + ನಮಿತಾ ಪೆಪ್ಪರ್‌ಮೆಂಟು = ನೀಲಕಂಠ
‘ನೀಲಕಂಠ’ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada