»   » ಶುಕ್ರವಾರ ನಗರದ ಚಿತ್ರಮಂದಿರಕ್ಕೆ ‘ಹಸೀನಾ’ ಪ್ರವೇಶ

ಶುಕ್ರವಾರ ನಗರದ ಚಿತ್ರಮಂದಿರಕ್ಕೆ ‘ಹಸೀನಾ’ ಪ್ರವೇಶ

Subscribe to Filmibeat Kannada

ಬೆಂಗಳೂರು : ಗಿರೀಶ್‌ ಕಾಸರವಳ್ಳಿ ನಿರ್ದೇಶನದ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಹಸೀನಾ’ ನಗರದ ಚಿತ್ರಮಂದಿರಗಳಲ್ಲಿ ಶುಕ್ರವಾರ(ಸೆ.16) ತೆರೆಕಾಣಲಿದೆ.

ಪ್ರಶಸ್ತಿ ವಿಜೇತ ಚಿತ್ರಗಳಿಗೆ ಚಿತ್ರಮಂದಿರ ದೊರಕುವುದಿಲ್ಲ. ಹೀಗಾಗಿ ಎಷ್ಟೋ ಪ್ರಶಸ್ತಿ ವಿಜೇತ ಉತ್ತಮ ಚಿತ್ರಗಳು ಪ್ರೇಕ್ಷಕರನ್ನು ತಲುಪುವುದೇ ಇಲ್ಲ. ಈ ಮಧ್ಯೆ ಹಸೀನಾ ತೆರೆ ಕಾಣುತ್ತಿರುವುದಕ್ಕೆ ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಸಮುದಾಯದ ಮಹಿಳೆಯಾಬ್ಬಳ ಬದುಕಿನ ಸುತ್ತ ಸುತ್ತುವ ಈ ಚಿತ್ರದ ಅಭಿನಯಕ್ಕೆ, ನಟಿ ತಾರಾ ಅವರಿಗೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಹಸೀನಾ ಬೆನ್ನಲ್ಲಿಯೇ ಮತ್ತೊಬ್ಬ ಪ್ರತಿಭಾನ್ವಿತ ನಿರ್ದೇಶಕ ಶೇಷಾದ್ರಿ ಅವರು ತಮ್ಮ ‘ಬೇರು’ ಚಿತ್ರವನ್ನು ಸದ್ಯದಲ್ಲಿಯೇ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada