»   » ರವೀನಾ ಟೆಂಡನ್‌ ಲವ್ವಲ್ಲಿ ಬಿದ್ದಿದ್ದಾರೆ !

ರವೀನಾ ಟೆಂಡನ್‌ ಲವ್ವಲ್ಲಿ ಬಿದ್ದಿದ್ದಾರೆ !

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಮಸ್ತು ಮಸ್ತು ಹುಡುಗಿ ರವೀನಾ ಟೆಂಡನ್‌ ಮದುವೆಯಂತೆ- ಬಾಲಿವುಡ್‌ನಲ್ಲಿ ಕರಿಷ್ಮಾ ಕಪೂರ್‌ ಮದುವೆಯ ನಂತರ ದಟ್ಟೈಸಿರುವ ಸುದ್ದಿಯಿದು.

ಸೋಮವಾರ (ಅ. 13) ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಗ್ಯ ವಿಚಾರಿಸಲು ರವೀನಾ ಹೈದರಾಬಾದ್‌ಗೆ ಹೋದಾಗಲೂ, ಸುದ್ದಿಗಾರರು ಈಕೆಯ ಮದುವೆಯ ಕುರಿತೇ ಪ್ರಶ್ನೆ ಎಸೆದರು. ‘ಇನ್ನೂ ನನಗೆ ಮಿಸ್ಟರ್‌ ರೈಟ್‌ ಸಿಗಬೇಕಲ್ಲ. ಸಿಕ್ಕಿದ ತಕ್ಷಣ ಮದುವೆ’ ಅಂತ ರವೀನಾ ಹೇಳಿ, ‘ನೋ ಮೋರ್‌ ಕ್ವೆಶ್ಚನ್ಸ್‌ ’ ಅಂತ ಸುಮ್ಮನಾದರು.

ಮುಂಬಯಿಯಲ್ಲಿ ಹಬ್ಬಿರುವ ಸುದ್ದಿಯ ಪ್ರಕಾರ, ರವೀನಾ ಟೆಂಡನ್‌ ಕಳೆದ ಕೆಲವು ದಿನಗಳಿಂದ ಅನಿಲ್‌ ತಂದಾನಿ ಎಂಬ ಶ್ರೀಮಂತ ವಿತಕರನ ಜೊತೆ ಸುತ್ತುತ್ತಿದ್ದಾಳೆ. ಈತನ ಜೊತೆಯೇ ಮದುವೆಯೂ ನಿಶ್ಚಯವಾಗಿದೆ. ಬಾಲಿವುಡ್‌ನಲ್ಲಿ ಅಲ್ಪ ಕಾಲದಲ್ಲೇ ವಿತರಕನಾಗಿ ಭಾರೀ ಹೆಸರು ಮಾಡಿರುವ ತಂದಾನಿ ಶಾರುಖ್‌ ಖಾನ್‌ ನಿರ್ಮಿಸಿ ನಟಿಸಿದ ‘ಚಲ್ತೆ ಚಲ್ತೆ’ ಚಿತ್ರ ಸೇರಿದಂತೆ ಅನೇಕ ಹಿಟ್‌ ಚಿತ್ರಗಳನ್ನು ವಿತರಿಸಿದ್ದಾನೆ.

ಆಪ್ತರ ಮೂಲಕ ತಂದಾನಿ ಜೊತೆ ಟೆಂಡನ್‌ ಗೆಳೆತನ ಬೆಳೆಯಿತು. ಸ್ನೇಹ ಪ್ರೇಮವಾಯ್ತು. ಪ್ರೇಮ ಮದುವೆಯ ಯೋಚನೆ ಹಚ್ಚಿತು. ಈಗ ಗಟ್ಟಿಮೇಳ ಒಂದೇ ಬಾಕಿ. ಆದರೆ ತಮ್ಮ ವಿವಾಹದ ಬಗ್ಗೆ ರವೀನಾ ಆಗಲೀ, ತಂದಾನಿ ಆಗಲೀ ಈವರೆಗೆ ಏನನ್ನೂ ಹೇಳಿಲ್ಲ. ಹಾಗಿದ್ದೂ ರವೀನಾ ಮುಂದೆ ತಂದಾನಿ ಹೆಸರೆತ್ತಿದರೆ ಆಕೆಯ ಕೆನ್ನೆ ಕೆಂಪಾಗುತ್ತದೆ. ಈ ಸಲ ರವೀನಾ ಟ್ರೆೃನ್‌ ಮಿಸ್‌ ಮಾಡಿಕೊಳ್ಳದಿರಲಿ. ತಂದಾನಿ ಒಳ್ಳೆಯ ಹುಡುಗ ಅನ್ನೋದು ಬಾಲಿವುಡ್‌ ಪಂಡಿತರ ಸಲಹೆ.

ಈಗ ವಿವಾಹಿತನಾಗಿರುವ ಅಕ್ಷಯ್‌ ಕುಮಾರ್‌ ಜೊತೆ ರವೀನಾ ಪ್ರೇಮ ಪ್ರಸಂಗ ಕೆಲವು ವರ್ಷಗಳ ಹಿಂದೆ ಭಾರೀ ಸದ್ದು ಮಾಡಿತ್ತು.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada