»   » ಗೆಂಡೆತಿಮ್ಮನ ‘ಪರ’ಸಂಗ: ಖ್ಯಾತ ಕನ್ನಡ ಚಿತ್ರನಟ ಲೋಕೇಶ್‌ ಇನ್ನಿಲ್ಲ

ಗೆಂಡೆತಿಮ್ಮನ ‘ಪರ’ಸಂಗ: ಖ್ಯಾತ ಕನ್ನಡ ಚಿತ್ರನಟ ಲೋಕೇಶ್‌ ಇನ್ನಿಲ್ಲ

Posted By: Staff
Subscribe to Filmibeat Kannada

ಬೆಂಗಳೂರು : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಹಿರಿಯ ನಟ ಲೋಕೇಶ್‌ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ (ಅ. 14) ಮೃತಪಟ್ಟಿದ್ದಾರೆ.

ಹೃದಯದ ತೊಂದರೆಯಿಂದಾಗಿ ನಗರದ ಮಹಾವೀರ ಜೈನ್‌ ಆಸ್ಪತ್ರೆಯಲ್ಲಿ ಲೋಕೇಶ್‌ ಅವರನ್ನು ಕಳೆದ ಎರಡು ದಿನಗಳಿಂದ ತೀವ್ರನಿಗಾ ಘಟಕದಲ್ಲಿ ಇರಿಸಿ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಲೋಕೇಶ್‌ ಗುರುವಾರ ಮಧ್ಯಾಹ್ನ ನಿಧನರಾದರು.

ಕಳೆದ ಎರಡು ತಿಂಗಳ ಹಿಂದೆ ಹೃದಯದ ರಕ್ತನಾಳಗಳ ಸಮರ್ಪಕ ಕಾರ್ಯನಿರ್ವಹಣೆಗಾಗಿ ಲೋಕೇಶ್‌ ಅವರಿಗೆ ಪೇಸ್‌ಮೇಕರ್‌ ಅಳವಡಿಸಲಾಗಿತ್ತು. ತೊಂದರೆ ಮರುಕಳಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಎಂ.ವಿ. ಸುಬ್ಬಯ್ಯ ನಾಯ್ಡು ಪುತ್ರರಾದ ಲೋಕೇಶ್‌ ಚಿತ್ರರಂಗದಲ್ಲಿ ಮಾತ್ರವಲ್ಲದೇ ರಂಗಭೂಮಿಯಲ್ಲೂ ಪ್ರಖ್ಯಾತರಾಗಿದ್ದರು.

ಭೂತಯ್ಯನ ಮಗ ಅಯ್ಯು, ಪರಸಂಗದ ಗೆಂಡೆತಿಮ್ಮ, ಬ್ಯಾಂಕರ್‌ ಮಾರ್ಗಯ್ಯ, ಆಸೆಗೊಬ್ಬ ಮೀಸೆಗೊಬ್ಬ, ಸಂಕ್ರಾಂತಿ, ಭುಜಂಗಯ್ಯನ ದಶಾವತಾರ, ಮತ್ತಿತರ ಚಿತ್ರಗಳಲ್ಲಿ ಲೋಕೇಶ್‌ ಅವಿಸ್ಮರಣೀಯ ಅಭಿನಯ ನೀಡಿದ್ದರು. ನಾಯಕ ನಟರಾಗಿ, ಪೋಷಕ ಪಾತ್ರಗಳಲ್ಲಿ, ಹಾಸ್ಯಪಾತ್ರಗಳಲ್ಲಿ ಹೀಗೆ ವೈವಿಧ್ಯಮಯ ಪಾತ್ರಗಳ ಮೂಲಕ ಚಿತ್ರರಸಿಕರನ್ನು ಲೋಕೇಶ್‌ ರಂಜಿಸಿದ್ದರು.

ಸುಮಾರು 57 ವರ್ಷದ ಲೋಕೇಶ್‌- ಪತ್ನಿ ಗಿರಿಜಾ ಲೋಕೇಶ್‌, ಪುತ್ರಿ ಪೂಜಾಲೋಕೇಶ್‌ ಹಾಗೂ ಪುತ್ರ ಸೃಜನ್‌ ಲೋಕೇಶ್‌ರನ್ನು ಅಗಲಿದ್ದಾರೆ.(ಇನ್ಫೋ ವಾರ್ತೆ)

English summary
Kannada Actor Lokesh passes away

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada