»   » ಬಾಲಿವುಡ್‌ ಅಮ್ಮ ನಿರುಪಾರಾಯ್‌ ಇನ್ನಿಲ್ಲ

ಬಾಲಿವುಡ್‌ ಅಮ್ಮ ನಿರುಪಾರಾಯ್‌ ಇನ್ನಿಲ್ಲ

Posted By: Super
Subscribe to Filmibeat Kannada
Veteran film actress Nirupa Roy
ಮುಂಬೈ : ಬಾಲಿವುಡ್‌ನ ತಾಯಿ ಎಂದು ಹೆಸರಾಗಿದ್ದ ಹಿರಿಯ ನಟಿ ನಿರುಪಾ ರಾಯ್‌ ಇನ್ನಿಲ್ಲ.

ಹಿಂದಿ ಚಿತ್ರದಲ್ಲಿ ಅನೇಕ ನಟ-ನಟಿಯರಿಗೆ ತಾಯಿ ಪಾತ್ರಕ್ಕೆ ಜೀವ ತುಂಬಿದ ನಿರುಪಾ ರಾಯ್‌ ಅ.13ರ ರಾತ್ರಿ ಹೃದಯಾಘಾತದಿಂದ ನಿಧನರಾದರು. 'ಮುನೀೂಂಜಿ "ಚಿತ್ರದಲ್ಲಿ ದೇವಾನಂದ್‌ಗೆ ತಾಯಿಯಾಗಿ ನಟಿಸುವುದರ ಮೂಲಕ ಚಿತ್ರರಂಗದಲ್ಲಿ ತಾಯಿ ಸ್ಥಾನವನ್ನು ಖಾಯಂ ಮಾಡಿಕೊಂಡ ಅವರು- ಸೂಪರ್‌ಸ್ಟಾರ್‌ ಅಮಿತಾಭ್‌ ಬಚ್ಚನ್‌ಗೆ ಅನೇಕ ಚಿತ್ರಗಳಲ್ಲಿ ತಾಯಿ ಮಮತೆ ನೀಡಿದವರು. ಅವುಗಳಲ್ಲಿ ದಿವಾರ್‌, ಮರ್ದ್‌, ಖೂನ್‌ ಪಸೀನಾ ಮತ್ತು ಅಮರ್‌ ಅಕ್ಬರ್‌ ಆಂಥೋಣಿ ಮರೆಯಲಾಗದ ಚಿತ್ರಗಳು. ಕೇವಲ ಹಿಂದಿಯಲ್ಲಷ್ಟೇ ಅಲ್ಲದೆ ತೆಲುಗು ಭಾಷೆಯಲ್ಲೂ ಸುಮಾರು 25 ಕ್ಕೂ ಹೆಚ್ಚು ಚಿತ್ರದಲ್ಲಿ ಅವರು ಅಭಿನಯಿಸಿದ್ದರು.

ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ನಿರುಪಾ ಅವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ.(ಏಜನ್ಸೀಸ್‌)

English summary
Veteran film actress Nirupa Roy passed away on Wednesday night (Oct. 13th 2004) following cardiac arrest

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada