»   » ಗೋವಾದಲ್ಲಿ ದೋಣಿ ಅಪಘಾತ; ನಟ ಶಿವರಾಜ್‌ಕುಮಾರ್‌ ಬಜಾವ್‌

ಗೋವಾದಲ್ಲಿ ದೋಣಿ ಅಪಘಾತ; ನಟ ಶಿವರಾಜ್‌ಕುಮಾರ್‌ ಬಜಾವ್‌

Posted By: Staff
Subscribe to Filmibeat Kannada

ಬೆಂಗಳೂರು : ನಟ ಶಿವರಾಜ್‌ಕುಮಾರ್‌ಚಿತ್ರೀಕರಣದಲ್ಲಿ ನಡೆದ ದೋಣಿ ದುರಂತದಲ್ಲಿ , ಅಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಗೋವಾ ಸಮುದ್ರ ತೀರದಲ್ಲಿ ರಾಕ್ಷಸ ಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯಕ್ಕಾಗಿ ಸ್ಪೀಡ್‌ಬೋಟ್‌ಗಳನ್ನು ಬಳಸಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಬೋಟ್‌ ಚೇಸಿಂಗ್‌ನಲ್ಲಿ ಒಂದಕ್ಕೊಂದು ಬೋಟ್‌ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಆದರೆ ಶಿವರಾಜ್‌ಕುಮಾರ್‌ ಸಣ್ಣ ಪೆಟ್ಟಿನೊಂದಿಗೆ ಪಾರಾಗಿದ್ದಾರೆ ಎಂದು ಚಿತ್ರದ ನಿರ್ಮಾಪಕ ರಾಮು ತಿಳಿಸಿದ್ದಾರೆ.

ಚೇಸಿಂಗ್‌ ದೃಶ್ಯವನ್ನು ಕೆ.ಡಿ.ವೆಂಕಟೇಶ್‌ ಸಾಹಸ ನಿರ್ದೇಶನದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಅಪಘಾತದಲ್ಲಿ ಕ್ಯಾಮರಾ ಸಹಾಯಕರಿಬ್ಬರಿಗೆ ಗಾಯಗಳಾಗಿದ್ದು, ಗೋವಾದ ಬೃಂದಾವನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಪುಟ್ಟರಾಜು ಎಂಬಾತನ ಸ್ಥಿತಿ ತುಸು ಗಂಭೀರವಾಗಿದೆ. ಛಾಯಾಗ್ರಾಹಕ ಕೆ.ಕೃಷ್ಣಕುಮಾರ್‌ ಅಪಾಯದಿಂದ ಪಾರಾಗಿದ್ದಾರೆ.

ರಾಮು ನಿರ್ಮಾಣದ ಚಿತ್ರಗಳ ಶೂಟಿಂಗ್‌ ಸಂದರ್ಭದಲ್ಲಿ ಪದೇಪದೇ ಅಪಘಾತಗಳು ಸಂಭವಿಸುವುದು ಕಾಕತಾಳೀಯ. ಲಾಕಪ್‌ಡೆತ್‌ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ಮಹಾತ್ಮಗಾಂಧಿ ರಸ್ತೆಯಲ್ಲಿ ದುರಂತ ಸಂಭವಿಸಿತ್ತು .

(ಇನ್ಫೋ ವಾರ್ತೆ)

English summary
Shivrajkumar escapes in a boat accident

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada