»   » ಮುಂಬೈನಲ್ಲಿ ನಾಗತಿಗೆ ಅಭಿನಂದನೆ

ಮುಂಬೈನಲ್ಲಿ ನಾಗತಿಗೆ ಅಭಿನಂದನೆ

Subscribe to Filmibeat Kannada

ಮುಂಬಯಿ : ನಗರದಲ್ಲಿ ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಚಿತ್ರಗಳ ಚಿತ್ರೋತ್ಸವ ಅಕ್ಟೋಬರ್‌ 15ರವರೆಗೆ ನಡೆಯಲಿದೆ.

ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಿ.ಕೆ.ಚೌಟ ಚಿತ್ರೋತ್ಸವವನ್ನು ಅ.13ರಂದು ಉದ್ಘಾಟಿಸಿದರು. ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಎಂ.ಎಂ.ಕೋರಿ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಕೊಟ್ರೇಶಿ ಕನಸು’, ‘ಅಮೆರಿಕಾ ಅಮೆರಿಕಾ’ ಮತ್ತು ‘ಅಮೃತಧಾರೆ’ ಚಿತ್ರಗಳು ಪ್ರದರ್ಶನವಾಗುತ್ತಿವೆ. ಮುಂಬಯಿ ಕರ್ನಾಟಕ ಸಂಘದ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಸಮಾರೋಪ : ಅಕ್ಟೋಬರ್‌ 15ರಂದು ಚಿತ್ರೋತ್ಸವದ ಮುಕ್ತಾಯ ಸಮಾರಂಭದಲ್ಲಿ , ನಾಗತಿಹಳ್ಳಿ ಚಂದ್ರಶೇಖರ್‌ ಅವರನ್ನು ಅಭಿನಂದಿಸಲಾಗುತ್ತಿದೆ. ಸಮಾರಂಭದಲ್ಲಿ ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್‌, ಪತ್ರಕರ್ತ ರವಿ ಬೆಳಗೆರೆ, ಕವಯತ್ರಿ ಪ್ರೊ.ಶಶಿಕಲಾ ವೀರಯ್ಯಸ್ವಾಮಿ, ಜೋಗಿ ಮತ್ತಿತರರು ಪಾಲ್ಗೊಳ್ಳುವರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada