»   » ವಿಷ್ಣುವರ್ಧನ್‌ಗೆ ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿ?

ವಿಷ್ಣುವರ್ಧನ್‌ಗೆ ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿ?

Subscribe to Filmibeat Kannada


ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗೆ ವಿಷ್ಣು ಜೊತೆ, ಎಚ್‌ಐವಿ ಪೀಡಿತರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ವೀಣಾಧರಿ ಅವರ ಹೆಸರನ್ನೂ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ.

ಬೆಂಗಳೂರು : ನಟ ವಿಷ್ಣುವರ್ಧನ್‌ ಅವರಿಗೆ ಪದ್ಮ ಪ್ರಶಸ್ತಿ ನೀಡುವಂತೆ, ರಾಜ್ಯ ಸರ್ಕಾರ ಬಲವಾದ ಶಿಫಾರಸು ಮಾಡಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಆಪ್ತ ಮೂಲಗಳು ತಿಳಿಸಿವೆ.

ಹಿರಿಯ ನಟ ವಿಷ್ಣುವರ್ಧನ್‌, ಕನ್ನಡ ಚಿತ್ರರಂಗಕ್ಕೆ ನೀಡಿದ ಸಮಗ್ರ ಕೊಡುಗೆಯನ್ನು ಪರಿಗಣಿಸಿ, ಈ ಪ್ರಶಸ್ತಿಯನ್ನು ಯಾವಗಲೋ ನೀಡಬೇಕಿತ್ತು. ಈಗಲಾದರೂ, ಕೇಂದ್ರ ಸರ್ಕಾರ ರಾಜ್ಯದ ಶಿಫಾರಸ್ಸನ್ನು ಪುರಸ್ಕರಿಸಲಿ ಎಂದು ವಿಷ್ಣು ಅಭಿಮಾನಿಗಳ ಸಂಘ ಒತ್ತಾಯಿಸಿದೆ.

ಇತ್ತೀಚೆಗಷ್ಟೇ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ವಿಷ್ಣುವರ್ಧನ್‌ ಅವರಿಗೆ ಸಂದಿತ್ತು. ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗೆ ವಿಷ್ಣು ಜೊತೆ, ಎಚ್‌ಐವಿ ಪೀಡಿತರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ವೀಣಾಧರಿ ಅವರ ಹೆಸರನ್ನೂ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ ಎನ್ನಲಾಗಿದೆ.

ಎರಡು ಸಾಲು ಬರೆಯಿರಿ : ನಟ ವಿಷ್ಣುವರ್ಧನ್‌ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಬಗ್ಗೆ ನಿಮಗೆ ಸಮಾಧಾನವಿದೆಯೇ? ಓದುಗರು ತಮ್ಮ ಅಭಿಪ್ರಾಯ ತಿಳಿಸಬಹುದು.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada