25ಮೈಲಿ ಸವೆಸಿದ ಜಗ್ಗೇಶು ಮತ್ತು ಎದ್ದೇಳು ಮಂಜುನಾಥಾ!

By Staff

ಇವ್ರು ಈವರೆಗೆ ಮಾಡಿದ್ದು ಕೇವಲ ಒಂದೇ ಒಂದು ಸಿನಿಮಾ ಆದರೂ ಗುರುಪ್ರಸಾದ್ ಅಂದರೆ, ಓ 'ಮಠ'ಚಿತ್ರದ ನಿರ್ದೇಶಕರಾ ಅನ್ನುತ್ತಾರೆ ಪ್ರೇಕ್ಷಕರು. ದಟ್ ಈಸ್ ಗುರುಪ್ರಸಾದ್! 'ಏನ್ ಮಾಡಿದರೂ ಅಲ್ಲಿ ನಾವಿರಬೇಕು, ನಮ್ಮತನವಿರಬೇಕು'ಎಂದು ಹಂಬಲಿಸುವ ಗುರು, ತಮ್ಮ ಎರಡನೇ ಚಿತ್ರ 'ಎದ್ದೇಳು ಮಂಜುನಾಥಾ..!'ಕ್ಕಾಗಿ ಸಾಕಷ್ಟು ಹೋಂವರ್ಕ್ ಮಾಡಿದ್ದಾರೆ.

ಚಿತ್ರದ ಮುಹೂರ್ತ ಗುರುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರು ಅರಮನೆಯಲ್ಲಿ ನಡೆಯಲಿದೆ. ಕೆ.ಎಂ.ಶ್ರೀನಿವಾಸಮೂರ್ತಿ ಆರಂಭ ಫಲಕ ತೋರಿಸಲಿದ್ದು, ಪತ್ರಕರ್ತ ಬಿ.ವಿ.ವೈಕುಂಟರಾಜು ಕ್ಯಾಮೆರಾ ಚಾಲನೆ ಮಾಡಲಿದ್ದಾರೆ. 'ಮಠ'ಚಿತ್ರದ ನಂತರ, ತಮ್ಮ ಬಗ್ಗೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ ಎಂಬುದನ್ನು ಗುರು ಬಲ್ಲರು. ಹೀಗಾಗಿಯೇ ಎರಡನೇ ಚಿತ್ರವನ್ನು ತರಾತುರಿಯಲ್ಲಿ ಆರಂಭಿಸಲಿಲ್ಲ. ಅದೂ ಅಲ್ಲದೇ ಇದು ನವರಸ ನಾಯಕ ಜಗ್ಗೇಶ್ ವೃತ್ತಿ ಬದುಕಿನ 25ನೇ ವಸಂತದ ಸಂದರ್ಭದಲ್ಲಿ ಹೊರಬರುತ್ತಿರುವ ಚಿತ್ರ.

ಜಗ್ಗೇಶ್ ಮುಖಕ್ಕೆ ಬಣ್ಣ ಹಚ್ಚಿ ಇಷ್ಟು ಬೇಗ 25ವರ್ಷಗಳು ಸವೆದವಾ ಅನ್ನಿಸುತ್ತದೆ. ಇಷ್ಟು ಸುದೀರ್ಘ ಹಾದಿಯಲ್ಲಿ ಜಗ್ಗೇಶ್ ಅವರ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡು ಹೊರಬಂದ ಚಿತ್ರಗಳು ಅತಿ ವಿರಳ. ಆ ಪ್ರಯತ್ನವನ್ನೇ ನಮ್ಮ ನಿರ್ದೇಶಕರು ಮಾಡಲಿಲ್ಲ. ಸಂತೇ ಹೊತ್ತಿಗೆ ಮೂರು ಮೊಳದಂತೆ ರೀಲ್ ಸುತ್ತಿದರು. ಆದರೂ ಜಗ್ಗೇಶ್ ಚಿತ್ರಗಳು ಗೆದ್ದಿವೆ. ಅದಕ್ಕೆ ಅವರಷ್ಟೇ ಕಾರಣ. ಈಗ ಜಗ್ಗೇಶ್ ಗಾಗಿಯೇ, ತಮಗಾಗಿಯೇ, ಸ್ಯಾಂಡಲ್ ವುಡ್ ನಲ್ಲಿ ಹೊಸ ಮಾದರಿಯ ಅಲೆ ಸೃಷ್ಟಿಸುವುದಕ್ಕಾಗಿಯೇ 'ಎದ್ದೇಳು ಮಂಜುನಾಥಾ..!' ಚಿತ್ರವನ್ನು ಗುರು ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ.

ಚಿತ್ರದ ಕತೆ ಬಗ್ಗೆ ಗುರು ಬಾಯಿ ಬಿಡುವುದಿಲ್ಲ. ಸೋಮಾರಿಯೊಬ್ಬನನ್ನು ತೆರೆ ಮೇಲೆ ತರಲಿದ್ದೇನೆ. ಯಾರವನು ಸೋಮಾರಿ, ಸೋಮಾರಿಗ್ಯಾಕೆ ಈಗ ಮಹತ್ವ ಎಂಬ ಪ್ರಶ್ನೆಗಳಿಗೆ ಚಿತ್ರದಲ್ಲಷ್ಟೇ ಉತ್ತರ ದೊರೆಯಲಿದೆ. ಇದು ಒಳ್ಳೆಯ ಚಿತ್ರವಾಗುತ್ತದೆ ಎಂಬ ವಿಶ್ವಾಸ ನಮ್ಮದು. ಹೀಗಾಗಿಯೇ ಗುರುಗೆ ಅಡ್ವಾನ್ಸಾಗಿ ಅಭಿನಂದನೆ.

ಅಶೋಕ್ ವಿ ರಾಮನ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತವನ್ನು ಚಿತ್ರ ಹೊಂದಿದೆ. ವಿ.ಸನತ್ ಕುಮಾರ್, ಆರ್.ಮಂಜುನಾಥ್, ಎಸ್.ಕೆ.ಶಂಕರ್ ರಾವ್ ಚಿತ್ರತಂಡದಲ್ಲಿದ್ದಾರೆ.

ಗುರು ಮಾತು ಕೇಳೋದೇ ಒಂದು ಆನಂದ!

(ದಟ್ಸ್ ಕನ್ನಡ ಸಿನಿವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X