»   » ಸೆನ್ಸಾರ್‌ ಸುಳಿಯಿಂದ ‘ನಮ್ಮಣ್ಣ’ನಿಗೆ ಮುಕ್ತಿ !

ಸೆನ್ಸಾರ್‌ ಸುಳಿಯಿಂದ ‘ನಮ್ಮಣ್ಣ’ನಿಗೆ ಮುಕ್ತಿ !

Subscribe to Filmibeat Kannada

ಸುದೀಪ್‌ ಅವರ ಹೊಸ ಚಿತ್ರ ‘ನಮ್ಮಣ್ಣ’ ಸೆನ್ಸಾರು ಸುಳಿಯಲ್ಲಿ ನರಳಿ-ಬೆಂದು ಹೊರಬರುತ್ತಿದೆ. ನ.18ರಂದು ರಾಜ್ಯದೆಲ್ಲೆಡೆ ಚಿತ್ರ ಬಿಡುಗಡೆಗೊಳ್ಳಲಿದೆ.

ಚಿತ್ರದಲ್ಲಿನ ‘ಹಸಿ-ಬಿಸಿ’ ದೃಶ್ಯಗಳ ಬಗ್ಗೆ ಸೆನ್ಸಾರ್‌ ಮಂಡಳಿ ಅಸಮಾಧಾನ ಪ್ರದರ್ಶಿಸಿತ್ತು. ಚಿತ್ರಕ್ಕೆ 25ಕಡೆ ಕತ್ತರಿ ಹಾಕುವುದಾಗಿ ತಿಳಿಸಿದ್ದ ಸೆನ್ಸಾರ್‌ ಮಂಡಳಿ ಮುಖ್ಯಸ್ಥ ಚಂದ್ರಶೇಖರ್‌, ಚಿತ್ರದ ಕ್ಲೈಮ್ಯಾಕ್ಸ್‌ ಬದಲಿಸಿದರೆ ‘ಯು’ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದರು.

ಸೆನ್ಸಾರ್‌ ಧೋರಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ನಿರ್ಮಾಪಕರು, ಸೆನ್ಸಾರ್‌ನ ಮರುಪರಿಶೀಲನಾ ಸಮಿತಿ ಮುಂದೆ ನ್ಯಾಯಕೇಳಿದ್ದರು. ಈ ಪರಿಣಾಮ ‘ನಮ್ಮಣ್ಣ’ ಸೆನ್ಸಾರ್‌ ಸುಳಿಯಿಂದ ಹೊರಬಂದಿದ್ದಾನೆ!

ಬಾಲ ಮುತ್ತಯ್ಯ ನಿರ್ಮಾಣದ ಎರಡನೇ ಚಿತ್ರವಾದ ‘ನಮ್ಮಣ್ಣ’ವನ್ನು ಶಂಕರ್‌ ನಿರ್ದೇಶಿಸಿದ್ದಾರೆ. ಸುದೀಪ್‌, ಅಂಜನಾ, ಫ್ಲಾರಾ ಸೈನಿ ಮತ್ತಿತರರು ತಾರಾಗಣದಲ್ಲಿದ್ದಾರೆ.

‘ನಮ್ಮಣ್ಣ’ನ ಕಥೆ : ಡಾ.ರಾಜಶೇಖರ್‌ ಅವರ ತೆಲುಗು ಚಿತ್ರ ‘ಅಣ್ಣ’ನನ್ನೇ ‘ನಮ್ಮಣ್ಣ ’ ಹೋಲುತ್ತಿದ್ದಾನೆ ಎಂದು ಗಾಂಧಿನಗರ ಪಿಸುಗುಟ್ಟುತ್ತಿದೆ. ಚಿತ್ರದ ಕೆಲವು ಹಾಡುಗಳನ್ನು ಟೀವಿಯಲ್ಲಿ ನೋಡಿಯೇ ಚಿತ್ರ ರಸಿಕರು, ಚಿತ್ರ ನೋಡಲು ನಿರ್ಧರಿಸಿದ್ದಾರೆ! ಮಚ್ಚು ಪ್ರೀಮಿಗಳಿಗೆ ಚಿತ್ರ ಇಷ್ಟವಾದರೇ, ‘ನಮ್ಮಣ್ಣ’ ಗೆಲ್ಲುತ್ತಾನೆ!

ಸುದೀಪ್‌ ಬಗ್ಗೆ ಮತ್ತೆರಡು ಸುದ್ದಿಗಳು :

  • ಸುದೀಪ್‌ ಬಹಳ ಆಸೆಯಿಂದ ನಟಿಸಲುದ್ದೇಶಿಸಿದ್ದ ‘ಪೋರ್ಕಿ’ ಚಿತ್ರದ ಟೈಟಲ್‌ಗೆ ಫಿಲಂ ಚೇಂಬರ್‌ ಕೆಂಪು ಬಾವುಟ ತೋರಿಸಿದೆ.

  • ಸುದೀಪ್‌ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ‘ಮೈ ಆಟೋಗ್ರಾಫ್‌’ ಚಿತ್ರ ತೆರೆಗೆ ಬರಲು ಟಾಕೀಸ್‌ ಹುಡುಕುತ್ತಿದೆ!
Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada