»   » ಒಂದೇ ಸಿನಿಮಾದಲ್ಲಿ ರಾಘು, ಶಿವು ಮತ್ತು ಪುನೀತ್!

ಒಂದೇ ಸಿನಿಮಾದಲ್ಲಿ ರಾಘು, ಶಿವು ಮತ್ತು ಪುನೀತ್!

Subscribe to Filmibeat Kannada

ಅಪ್ಪ ಮಕ್ಕಳು ಒಂದೇ ಚಿತ್ರದಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳು ಮತ್ತು ಕುಟುಂಬವರ್ಗದ ಬಯಕೆಯಾಗಿತ್ತು.'ಸೂಕ್ತ ಕತೆ ಸಿಕ್ಕರೇ ಯಾಕೆ ಆಗಬಾರದು'ಎಂದು ರಾಜ್ ಕುಮಾರ್ ಸಹಾ ಹಿಂದೆ ಹೇಳಿದ್ದರು. ಆ ಪ್ರಯತ್ನವಂತೂ ಆಗಲಿಲ್ಲ. ಇದೀಗ ರಾಜ್ ಅವರ ಮೂವರೂ ಪುತ್ರರು ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ.

ಇತ್ತೀಚೆಗಷ್ಟೇ ನಟನೆಗೆ ಮರಳುವುದಾಗಿ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದರು. ಸದ್ಯದಲ್ಲೇ ಅವರ ನಾಯಕತ್ವದಲ್ಲಿ ಹೊಸ ಚಿತ್ರ ಸೆಟ್ಟೇರಲಿದೆ. ಅದಕ್ಕೂ ಮುನ್ನವೇ ರಾಘವೇಂದ್ರ ರಾಜ್ ಕುಮಾರ್ ಅವರ ಇನ್ನೊಂದು ಚಿತ್ರವನ್ನು ಸಮೀರಾ ಪಿರಮಿಡ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದೆ. ರಾಘವೇಂದ್ರ ರಾಜ್ ಕುಮಾರ್ ಜೊತೆ ಅವರ ಸಹೋದರರಾದ ಶಿವರಾಜ್ ಕುಮಾರ್, ಪುನೀತ್ ಸಹಾ ಅಭಿನಯಿಸಲಿದ್ದಾರೆ.

2008ರ ಏಪ್ರಿಲ್ 24ರಂದು ಹೊಸ ಚಿತ್ರ ಸೆಟ್ಟೇರಲಿದೆ. ಅಣ್ಣ ತಮ್ಮಂದಿರು ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು ನಿಜಕ್ಕೂ ರೋಮಾಂಚನ ತಂದಿದೆ. ಅಪ್ಪಾಜಿ ಹುಟ್ಟಿದ ಹಬ್ಬಕ್ಕೆ ಈ ಚಿತ್ರ ಗೌರವ ಕಾಣಿಕೆಯಾಗಲಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.

ತ್ರಿಮೂರ್ತಿಗಳ ಈ ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡಲಿದ್ದಾರೆ. ಚಿತ್ರದ ಕತೆಯನ್ನು ಕೇಳಿರುವ ಮೂವರೂ ಸಹೋದರರು, ಸಮ್ಮತಿ ಸೂಚಿಸಿದ್ದಾರೆ. ಉಪೇಂದ್ರ ನಿರ್ದೇಶನ ಬಿಟ್ಟು ಬಹಳ ದಿನಗಳಾಗಿವೆ. ಅವರ ನಿರ್ದೇಶನದ ಕಡೆಯ ಚಿತ್ರ ಉಪೇಂದ್ರ. ಈ ಚಿತ್ರದಲ್ಲಿ ರವೀನಾ, ಪ್ರೇಮ, ದಾಮಿನಿ ನಾಯಕಿಯರಾಗಿದ್ದರು.

(ದಟ್ಸ್ ಕನ್ನಡ ಸಿನಿ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada