»   » ಶುಕ್ರವಾರ ಸೆಟ್ಟೇರಿದ ಅರ್ಧ ಡಜನ್ ಸಿನಿಮಾಗಳ ಸುತ್ತಮುತ್ತ!

ಶುಕ್ರವಾರ ಸೆಟ್ಟೇರಿದ ಅರ್ಧ ಡಜನ್ ಸಿನಿಮಾಗಳ ಸುತ್ತಮುತ್ತ!

Posted By:
Subscribe to Filmibeat Kannada

ಸಾಲುಸಾಲು ಹೊಸ ಚಿತ್ರಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಇತ್ತ ಈ ಶುಕ್ರವಾರ(ಡಿ.14) ಅರ್ಧ ಡಜನ್ ಹೊಸ ಚಿತ್ರಗಳು ಸೆಟ್ಟೇರಿವೆ. ಪುನೀತ್, ವಿಜಯ್, ಸುದೀಪ್,ದರ್ಶನ್ ಅವರ ತಲಾ ಒಂದೊಂದು ಚಿತ್ರಗಳ ಮುಹೂರ್ತ ಇಂದು ನೆರವೇರಿತು. ಆ ಚಿತ್ರಗಳ ವಿವರ ;

*'ಮಯೂರ'ಎಂದರೆ ರಾಜ್ ಕುಮಾರ್ ನೆನಪಾಗುತ್ತಾರೆ. ಆ ಟೈಟಲ್ ಬಳಸಿಕೊಂಡು ಪುನೀತ್ ಅವರ ಹೊಸ ಚಿತ್ರ ಶುರುವಾಗಿದೆ. ನಾನಿರುವುದೇ ನಿಮಗಾಗಿ ಅಡಿ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಸಂಗೀತ ನೀಡಿದ್ದು, ತೆಲುಗು ನಿರ್ದೇಶಕ ಶೋಭನ್ ಆಕ್ಷನ್ ಕಟ್ ಹೇಳಲಿದ್ದಾರೆ. ಶ್ರದ್ಧಾ ಆರ್ಯ ಚಿತ್ರದ ನಾಯಕಿ.

*'ದುನಿಯಾ'ವಿಜಯ್ ಅವರ ಹೊಸ ಚಿತ್ರ 'ಮಿಂಚು'. ವಿಶಾಲ್ ರಾಜ್ ಚಿತ್ರಕತೆ, ನಿರ್ದೇಶನದ ಈ ಚಿತ್ರದ ಮುಹೂರ್ತ ಇಂದು ನೆರವೇರಿತು.

*ರಂಗ ಎಸ್ಸೆಸ್ಸೆಲ್ಸಿ ಚಿತ್ರದಲ್ಲಿದ್ದ ಸುದೀಪ್ ಮತ್ತು ರಮ್ಯಾ ಮತ್ತೆ ಜೋಡಿಯಾಗಿದ್ದಾರೆ. ಈ ಜೋಡಿಯ 'ಮುಸ್ಸಂಜೆಯ ಮಾತು'ಹೊಸ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ನಿರ್ದೇಶನ ಮಹೇಶ್ ಅವರದು. ಸುರೇಶ್ ಜೈನ್ ನಿರ್ಮಾಪಕರು. ವಿ.ಶ್ರೀಧರ್ ಸಂಗೀತ ನೀಡಿದ್ದಾರೆ.

*ದಿಗಂತ್ ನಾಯಕನಾಗಿ ಅಭಿನಯಿಸುತ್ತಿರುವ 'ಕರೆಯೇ ಕೋಗಿಲೆ ಮಾಧವನಾ..'ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆ, ನಿರ್ದೇಶನ ಕೃಷ್ಣನಾಡಿಗ್ ಅವರದು. ಪ್ರವೀಣ್ ಗೋಡಖಿಂಡಿ ಸಂಗೀತ ನೀಡುತ್ತಿದ್ದು, ಈ ಚಿತ್ರ ಉಷನವರತ್ನರಾಮ್ ಅವರ ಹೊಸರಾಗ ಕಾದಂಬರಿ ಆಧಾರಿತ.

*ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರ 'ಅರ್ಜುನ್'. ವಿ.ಹರಿಕೃಷ್ಣ ಸಂಗೀತ, ಜನಾರ್ದನ್ ಮಹರ್ಷಿ ಕತೆಯುಳ್ಳ ಈ ಚಿತ್ರದ ನಿರ್ದೇಶಕರು; ಶಾಹುರಾಜ್ ಶಿಂಧೆ.

*ಸತ್ಯ ಇನ್ ಲವ್ ನಿರ್ದೇಶಕ ಎನ್.ಲೋಕೀ ಅವರ ಹೊಸ ಚಿತ್ರ 'ತಬ್ಬಲಿ'(ಅಡಿ ಶೀರ್ಷಿಕೆ : ಇವರಿಗೆ ಹೇಳೋರು ಯಾರು ಜೋ ಜೋ)ಗೆ ಇಂದು ಮುಹೂರ್ತ. ಹರೂನ್ ಹೆಚ್.ಎಸ್. ನಿರ್ಮಾಣದ ಈ ಚಿತ್ರದಲ್ಲಿ ಆಕಾಶ್ ಎಂಬ ಯುವನಟ, ಸ್ಯಾಂಡಲ್ ವುಡ್ ಗೆ ಪರಿಚಿತವಾಗುತ್ತಿದ್ದಾರೆ. ಇದರ ಜೊತೆಗೆ ಲೋಕೀ ಅವರ ಇನ್ನೊಂದು ಚಿತ್ರ 'ಧರಣಿ' ಸದ್ಯದಲ್ಲೇ ಸೆಟ್ಟೇರಲಿದೆ.

(ದಟ್ಸ್ ಕನ್ನಡ ಸಿನಿವಾರ್ತೆ )

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada