»   » ನಮ್ಮುಡುಗಿ ದಾಮಿನಿನೂ ತಪ್ಪಿಸಿಕೊಂಡಿದ್ದಾಳೆ!

ನಮ್ಮುಡುಗಿ ದಾಮಿನಿನೂ ತಪ್ಪಿಸಿಕೊಂಡಿದ್ದಾಳೆ!

Posted By:
Subscribe to Filmibeat Kannada


ಛಾಯಾಸಿಂಗ್‌ ಕಾಣ್ತಾಯಿಲ್ಲವೆಂದು ಶೀನ ಮೊನ್ನೆ ಬೇಸರಗೊಂಡಿದ್ದ, ಈಗ ದಾಮಿನಿ ಕಾಣ್ತಾಯಿಲ್ಲವಂತೆ!

  • ಏಳನೆ ಕ್ರಾಸ್‌ ಶೀನ
ನೋಡ್ತಾ ನೋಡ್ತಾ ಒಂಭತ್ತನೇ ಕ್ಲಾಸಲ್ಲಿ ಓದುತ್ತಿದ್ದ ಹುಡುಗಿ, ‘ಉಪೇಂದ್ರ’ ಚಿತ್ರದ ನಾಯಕಿಯಾದಳು! ಆ ಸಿನಿಮಾದಲ್ಲಿ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಳು. ಎಷ್ಟು ಚೆನ್ನಾಗಿ ಮಾತಾಡಿದ್ದಳು ಅಂದ್ರೆ, ನಾವೆಲ್ಲರೂ ಸಕತ್ತು ಖುಷಿ ಪಟ್ಟಿದ್ವಿ. ಈಗಲೂ ಮರೆಯೋದಕ್ಕೆ ಕಷ್ಟ. ಶ್ಯಾನಾ ಕಷ್ಟ ಮಾರಾಯ್ರೇ...

ಕನ್ನಡದವರ್ಯಾರು ಈಕೆಗೆ ಸರಿಯಾದ ಅವಕಾಶ ಕೊಡ್ಲೇ ಇಲ್ಲ. ಸಿಟ್ಟು ಮಾಡಿಕೊಂಡು ತೆಲುಗು, ತಮಿಳು ಎಂದೆಲ್ಲಾ ಅಲೆದಳು. ಈ ಮಧ್ಯೆ ನೋಡ್ತಾ ನೋಡ್ತಾನೇ ಈ ಹುಡುಗಿ, ಡುಮ್ಮಿನಿಯಾದಳು! ಅಷ್ಟು ಮಾತ್ರವಲ್ಲ, ನೋಡ್ತಾ ನೋಡ್ತಾ ‘ಗುಡ್‌ಲಕ್‌’ ಸಿನಿಮಾದಲ್ಲಿ ಬೆಚ್ಚುವಂತೆ ವಸ್ತ್ರತ್ಯಾಗ ಮಾಡಿದಳು!

ಅಷ್ಟು ಸಾಲದು ಎಂಬಂತೆ ‘ದೇವರ ಸಿನಿಮಾ’ ಅದೇ ಸ್ವಾಮಿ ‘ಭಾ-ರತಿ’ಯಲ್ಲೂ ದರ್ಶನ ನೀಡಿದಳು! ನಮಗಂತೂ ಶ್ಯಾನಾ ಕ್ವಾಪ ಬಂತು... ಬೇಸರ ಆಯಿತು... ಆವತ್ತು ನಮಗೇನಾದ್ರೂ ಆಯಮ್ಮ ಸಿಕ್ಕಿದ್ದಿದ್ರೆ ಗ್ಯಾಚಾರ ಬಿಡಿಸ್ತಾಯಿದ್ವಿ... ಈ ಮಾತಿಗೆ ಬೆಟ್ಟದ ಮೇಲಿನ ಆಂಜನೇಯನೇ ಸಾಕ್ಷಿ.

ತಿಂಗಳಿಗೆ ನಾಲ್ಕೈದು ಪೋಲಿ ಸಿನಿಮಾ ನೋಡೋ ಚಟ ನಮಗಿರೋದು ನಿಜ್ವೆಯಾದ್ರೂ, ನಮ್ಮ ಹುಡುಗೀರನ್ನು ಪರದೆ ಮೇಲೆ, ಆ ಸ್ಥಿತಿಯಲ್ಲಿ ನೋಡೋದು ಹೆಂಗೆ ಸ್ವಾಮಿ... ? ಆ ವಿಷ್ಯಾ ಬಿಡಿ. ನಾವೆಲ್ಲರೂ ನೋಡ್ತಾ ನೋಡ್ತಾನೇ ಎಲ್ಲಿಗೋದಳೋ, ನಮಗಂತೂ ಕಾಣ್ತಾಯಿಲ್ಲ! ನಿಮಗೇನಾದ್ರೂ ದಾಮಿನಿ ಕಾಣಿಸಿದ್ರೆ ನನ್ನ ಅಡ್ರೆಸ್‌ ಕೊಡ್ತೀರಾ?

ಆಯಮ್ಮ ಎಲ್ಲೇ ಇರಲಿ, ಚೆನ್ನಾಗಿರಲಿ... ಸ್ವಾಮಿ ನಿರ್ದೇಶಕರೇ, ಸ್ವಾಮಿ ನಿರ್ಮಾಪಕರೇ, ಕನ್ನಡದ ಆ ಹೆಣ್ಣು ಮಗಳಿಗೆ ಮುಂದೆಯಾದ್ರೂ, ಒಳ್ಳೆ ಅವಕಾಶ ಕೊಡ್ರಿ... ಹಿತ್ತಲ ಗಿಡ ಮದ್ದಲ್ಲ ಅನ್ನೋರಂತೆ ಯಾಕೆ ಹಿಂಗ್‌ ಮಾಡ್ತೀರಾ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada