»   » ಆದಿತ್ಯನೊಂದಿಗೆ ಬ್ಯಾಂಕಾಕ್‌ಗೆ ಹಾರಿದ ಡೈಸಿ ಬೋಪಣ್ಣ

ಆದಿತ್ಯನೊಂದಿಗೆ ಬ್ಯಾಂಕಾಕ್‌ಗೆ ಹಾರಿದ ಡೈಸಿ ಬೋಪಣ್ಣ

Posted By:
Subscribe to Filmibeat Kannada

ಹೊಸ ಬಾಳಿನ ಹೊಸಿಲಲಿ ನಿಂತಿರುವ ಡೈಸಿ ಬೋಪಣ್ಣ ಜೊತೆ ಡೈಡ್ಲಿ ಆದಿತ್ಯ ಬ್ಯಾಂಕಾಕ್‌ಗೆ ಹಾರಿದ್ದಾರೆ. ಆದರಿದು 'ಮಾಸ್' ಚಿತ್ರೀಕರಣಕ್ಕಾಗಿ ಎಂಬುದು ನಿಮ್ಮ ಗಮನಕ್ಕಿರಲಿ. ಈಗಾಗಲೆ ಚಿತ್ರೀಕರಣ ಮುಗಿದಿದ್ದು ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಜೂನ್ ಅಂತ್ಯಕ್ಕೆ ಬ್ಯಾಂಕಾಕ್‌ನಲ್ಲಿ ಹಾಡುಗಳ ಚಿತ್ರೀಕರಣ ಮುಗಿಯಲಿದೆ.

ಡಿಸೆಂಬರ್ 15, 2010ರಂದು 'ಮಾಸ್' ಚಿತ್ರ ಸೆಟ್ಟೇರಿತ್ತು. ಎರಡು ಹಾಡುಗಳು ಹಾಗೂ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾತ್ರ ಬಾಕಿ ಇದೆ. ಫೆಬ್ರವರಿಯಲ್ಲೆ ಚಿತ್ರೀಕರಣ ಮುಗಿಯಬೇಕಾಗಿತ್ತಂತೆ. ಆದರೆ ಕಾರಣಾಂತರಗಳಿಂದ ಚಿತ್ರೀಕರಣ ತಡವಾಗಿದೆ ಎನ್ನುತ್ತದೆ ಚಿತ್ರತಂಡ.

ದಂಡಂ ದಶಗುಣಂ ಖ್ಯಾತಿಯ ಎ ಗಣೇಶ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಜೆ ಜಿ ಕೃಷ್ಣ ಅವರ ನಿರ್ದೇಶನ ಜೊತೆಗೆ ಛಾಯಾಗ್ರಹಣ ಈ ಚಿತ್ರಕ್ಕಿದೆ. ಥ್ರಿಲ್ಲರ್ ಮಂಜು ಅವರ ಸಾಹಸ, ರವಿ ಶ್ರೀವತ್ಸ ಅವರ ಸಂಭಾಷಣೆ ಇರುವ ಚಿತ್ರದಲ್ಲಿ ಸತ್ಯ ಪ್ರಕಾಶ್, ಸುಚೇಂದ್ರ ಪ್ರಸಾದ್, ದೇವರಾಜ್, ಪೆಟ್ರೋಲ್ ಪ್ರಸನ್ನ, ರವಿ ಕಾಳೆ ಮುಂತಾದವರಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Actor Aaditya is now flying off to Bangkok with actress Daisy Bopanna for the shooting of the movie Mass. The team has completed shooting of the film. Now, the duo will shoot those two songs of the film in Bangkok by the end of June.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada