»   » ರೀಲ್ ಕಾಪ್ ಆದಿಗೆ ರಿಯಲ್ ಕಾಪ್ ಗಳ ಪ್ರಶಂಸೆ

ರೀಲ್ ಕಾಪ್ ಆದಿಗೆ ರಿಯಲ್ ಕಾಪ್ ಗಳ ಪ್ರಶಂಸೆ

Posted By:
Subscribe to Filmibeat Kannada

ನಿಷೇಧಾಜ್ಞೆಗೆ ಹೆದರುವವರಿದ್ದಾರೆ. ಆದರೆ ಪ್ರಶಂಸಿಸುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಳೆದವಾರ ಚಿಕ್ಕಮಗಳೂರಿನ ಅತ್ತಿಗುಂಡಿ, ಚೆಕ್‌ಪೋಸ್ಟ್, ಹಿರೇಕೊಳಲಿ ಹಾಗೂ ಆಲದೂರಿನಲ್ಲಿ ನಿರ್ದೇಶಕ ಪದ್ಮನಾಭ ಅವರು ನಿಷೇಧಾಜ್ಞೆ ಚಿತ್ರಕ್ಕೆ ಅವರೇ ಬರೆದ

'ಏಕೋ ಕಾಣೆ ನನ್ನ ಮನಸು ಹಗುರವಾಯ್ತು...ಎಲ್ಲೋ ಏನೋ ನನ್ನ ಹೃದಯ ಕಳೆದೋಯ್ತು' ಎಂಬ ಗೀತೆಯನ್ನು ಭರತ್‌ಬಾಬು, ಪ್ರಿಯಾಂಕ ಹಾಗೂ 40 ಸಹನರ್ತಕರ ಅಭಿನಯದಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದ ಸಮಯಕ್ಕೆ ಅಲ್ಲಿಗೆ ಆಗಮಿಸಿದ್ದ ಸೂಪರ್ ಇಂಟೆಂಡೆಂಟ್ ಆಫ್ ಪೊಲೀಸ್ ವಿಪ್ರಲ್‌ಕುಮಾರ್, ಜಿಲ್ಲಾಧಿಕಾರಿ ನವೀನ್‌ರಾಜ್ ಸಿಂಗ್ ಚಿತ್ರದ ಕಥಾ ಹಂದರ ತಿಳಿದು ಪ್ರಶಂಸಿಸಿದ್ದಾರೆ. ಚಿತ್ರೀಕರಣ ಸ್ಥಳಕ್ಕೆ ಈ ರೀತಿ ಅಧಿಕಾರಿಗಳು ಆಗಮಿಸಿ ಪ್ರೋತ್ಸಾಹಿಸುವುದು ಅಪರೂಪ. ನಮ್ಮ ಚಿತ್ರಕ್ಕೆ ಈ ಸೌಭಾಗ್ಯ ದೊರಕ್ಕಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಭರತ್‌ಬಾಬು ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ವಿ.ನಾರಾಯಣಸ್ವಾಮಿ ಹಾಗೂ ಸೂರ್ಯಕಾಂತ್ ಜಾದವ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬಸವರಾಜಪ್ಪ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಪದ್ಮಾನಾಭ ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯಿರುವ ನಿಷೇಧಾಜ್ಞೆಗೆ ರಮೇಶ್ ಅವರ ಛಾಯಾಗ್ರಹಣವಿದೆ. ಗಿರಿಧರ್ ಸಂಗೀತ, ಯತೀಶ್‌ಕುಮಾರ್ ಸಂಕಲನ, ಅರವಿಂದ್ ನೃತ್ಯ, ಕೃಷ್ಣಾಚಾರ್ ಕಲೆ, ಲಕ್ಷ್ಮೀಕುಮಾರ್, ಮೂರ್ತಿ ಸಹನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಆದಿಲೋಕೇಶ್, ಭರತ್‌ಬಾಬು, ಪ್ರಿಯಾಂಕ, ಪದ್ಮಜಾರಾವ್, ಶಂಕರ್‌ಅಶ್ವತ್, ನೀನಾಸಂ ಅಶ್ವತ್, ಸುರೇಶ್‌ಮಂಗಳೂರು, ಸ್ನೇಹಜಗದೀಶ್, ಹಾಗೂ ಧಮ್‌ಕುಮಾರ್ ಇದ್ದಾರೆ.

(ದಟ್ಸ್ ಕನ್ನಡಸಿನಿವಾರ್ತೆ)

ಪೂಜಾರಿ ಆದಿಲೋಕೇಶ್ 'ನಿಷೇಧಾಜ್ಞೆ'ಯಲ್ಲಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada