ದರ್ಶನ್ ಹೆಗ್ಗೋಡಿನ ನೀನಾಸಂ ಪದವೀಧರ ಗೊತ್ತೆ!
ನಟ ದರ್ಶನ್ ತನ್ನ ಮೇಲೆ ಕೆಟ್ಟದಾಗಿ ಹಲ್ಲೆ ಮಾಡಿದರೆನ್ನಲಾದ ಘಟನೆ ಆತಂಕ ತರುವ ಸಂಗತಿ. ಇದೆಲ್ಲ ಸಿನಿಮಾರಂಗದ ಗಣ್ಯರಿಗೆ ಮತ್ತು ಅವರ ಅಭಿಮಾನಿಗಳಿಗೆ ಸಂಸಾರದಲ್ಲಿ ನಡೆಯುವ ಸಾಮಾನ್ಯ ಘಟನೆಯಂತೆ!
ಘಟನೆ ನಡೆದ ದಿನದಂದು ಟಿ.ವಿ ವಾಹಿನಿಯೊಂದರಲ್ಲಿ ದರ್ಶನ್‌ರ ಅಭಿಮಾನಿ ಹೆಣ್ಣುಮಕ್ಕಳೂ ಸಹ ಗಂಡ ಹೆಂಡತಿಯರಲ್ಲಿ ಇದೆಲ್ಲ ಸಾಮಾನ್ಯ. ವಿಜಯಲಕ್ಷ್ಮಿ ಅವರು ಇದನ್ನು ಬೀದಿಗೆ ತರಬಾರದಿತ್ತು ಎಂಬ ಹೇಳಿಕೆ ಕೊಟ್ಟರು. ಹೆಣ್ಣು ಮಕ್ಕಳಾಗಿ ನೊಂದ ಹೆಣ್ಣಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಬೇಕಾದ ಮಹಿಳೆಯರೂ ಈ ರೀತಿ ಹೇಳಿದ್ದು ವಿಪರ್ಯಾಸ.
ಯಾವುದೇ ವ್ಯಕ್ತಿಗೆ ಏಕ ಕಾಲದಲ್ಲಿ ಹಣ ಮತ್ತು ಜನಪ್ರಿಯತೆ ದೊರಕಿ ಬಿಟ್ಟರೆ ಇಂತಹ ದುರಹಂಕಾರವನ್ನು ಬೆಳಸಿಕೊಂಡು ಅಮಾನವೀಯರಾಗುತ್ತಾರೆ. ಹಾಗೆ ನೋಡಿದರೆ ಕನ್ನಡದ ಯುವ ನಟರಲ್ಲಿ ದರ್ಶನ್ ನಿಜಕ್ಕೂ ಒಬ್ಬ ಪ್ರತಿಭಾವಂತ ನಟ. ಇವರು ಕರ್ನಾಟಕ ಒಂದು ಮಹೋನ್ನತ ಸಂಸ್ಥೆ ಹೆಗ್ಗೋಡಿನ ನೀನಾಸಂನಲ್ಲಿ ಪದವಿ ಪಡೆದವರು. ನಾಗರಿಕ ಸಮಾಜ ಇವರಿಂದ ಇಂತಹ ಅನಾಗರಿಕ ನಡವಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಇದನ್ನು ಸಮರ್ಥಿಸುವುದು ಸರ್ವಥಾ ಸಲ್ಲದು.


Click it and Unblock the Notifications











