»   » ನಿರ್ಮಾಪಕನಾಗಿ ಗೋಲ್ಡನ್ ಸ್ಟಾರ್ ಗಣೇಶ್

ನಿರ್ಮಾಪಕನಾಗಿ ಗೋಲ್ಡನ್ ಸ್ಟಾರ್ ಗಣೇಶ್

Subscribe to Filmibeat Kannada
Golden Star Ganesh
ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಪಕರಾಗಿ ಬದಲಾಗಲಿದ್ದಾರೆ. ಈ ಚಿತ್ರವನ್ನು ಗಣೇಶ್ ರ ಹಳೆಯ ಗೆಳೆಯ ಹಾಗೂ ನಾಗಶೇಖರ್ ನಿರ್ದೇಶಿಸಲಿದ್ದಾರೆ. ಈ ಹಿಂದೆ ಅವರು ಗಣೇಶ್ ರ 'ಅರಮನೆ' ಚಿತ್ರವನ್ನು ನಿರ್ದೇಶಿಸಿದ್ದರು.

ಬಾಕ್ಸಾಫೀಸ್ ಗಳಿಕೆಯಲ್ಲಿ ಮುಂದಿದ್ದ 'ಅರಮನೆ' ಚಿತ್ರ ಶತ ದಿನೋತ್ಸವವನ್ನೂ ಆಚರಿಸಿಕೊಂಡಿತು. ಈ ಚಿತ್ರವನ್ನು ಇನ್ನೂ ಚೆನ್ನಾಗಿ ಮಾಡಬೇಕಿತ್ತು ಎಂಬುದು ಗಣೇಶ್ ಮತ್ತು ನಾಗಶೇಖರ್ ಅವರ ಕೊರಗು. ಇದಕ್ಕಿಂತಲೂ ಉತ್ತ್ತಮ ಚಿತ್ರ ಮಾಡಬೇಕೆಂದು ಪಣತೊಟ್ಟು ಕೊನೆಗೆ 'ಮುರಳಿ ಮೋಹನ' ಎಂಬ ಚಿತ್ರ ಮಾಡಲು ನಿಶ್ಚಿಯಿಸಿದ್ದಾರೆ.

ಗಣೇಶ್ ರ ಪತ್ನಿ ಶಿಲ್ಪಾ ಅವರೆ ಈ ಚಿತ್ರಕ್ಕೆ ಸ್ಫೂರ್ತಿಯಂತೆ.ಗಣೇಶ್ ರನ್ನು ಕಾಮಿಡಿ ರೋಲ್ ಗಳಲ್ಲಿ ಪ್ರೇಕ್ಷಕರು ಇಷ್ಟಪಡುತ್ತಾರೆ. ಆದ್ದರಿಂದ ಕಾಮಿಡಿ ಚಿತ್ರ ಮಾಡೋಣ ಎಂದರಂತೆ. ಅದಕ್ಕೆ ಒಪ್ಪಿಕೊಂಡ ಗಣೇಶ್ ಈ ಸಾಹಸಕ್ಕೆ ಕೈ ಹಾಕಿದರು.ಗಣೇಶ್ ರ ಸಂಭಾವನೆ ಸೇರಿಕೊಂಡು ಚಿತ್ರದ ಬಜೆಟ್ ಒಟ್ಟು 6 ಕೋಟಿಯಾಗಲಿದೆ.

'ಬೊಂಬಾಟ್' ಮತ್ತು 'ಸಂಗಮ' ಚಿತ್ರಗಳಲ್ಲಿ ಕಳೆಗುಂದಿದ ತಮ್ಮ ಸ್ಟಾರ್ ಇಮೇಜನ್ನು ಈ ಚಿತ್ರದ ಮೂಲಕವಾದರೂ ಪಡೆಯಬೇಕು ಎಂಬುದು ಗಣೇಶ್ ರ ಎಣಿಕೆ. ಇದಕ್ಕೆ ನಿರ್ದೇಶಕ ನಾಗಕಿರಣ್ ಸಹ ಕೈ ಜೋಡಿಸುತ್ತಿದ್ದಾರೆ. ಗಣೇಶ್ ರ ಏಳು ಚಿತ್ರಗಳು ಈಗಾಗಲೆ ಗೆದ್ದಿವೆ. ಹಾಗಾಗಿ ಅವರು ನಿರ್ಮಾಪಕರ ಡಾರ್ಲಿಂಗ್ ಎಂಬುದು ಸಾಬೀತಾಗಿದೆ. ಈ ಎಲ್ಲ ಲೆಕ್ಕಾಚಾರಗಳನ್ನಿಟ್ಟುಕೊಂಡೆ ಗಣೇಶ್ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada