»   » ಪರಮೇಶನ ಪಾನ್‌ಗೆ ಪರಶಿವನ ಪ್ರಶಂಸೆ

ಪರಮೇಶನ ಪಾನ್‌ಗೆ ಪರಶಿವನ ಪ್ರಶಂಸೆ

Posted By:
Subscribe to Filmibeat Kannada

ಪಾನ್ ತಯಾರಿಸುವಲ್ಲಿ ಪರಮೇಶನಿಗೆ ಸರಿಸಮರಿಲ್ಲ. ಅವನು ತಯಾರಿಸಿದ್ದ ಪಾನ್ ಉಮಾಪತಿಯಾದ ಪರಶಿವನಿಗೂ ಪ್ರಿಯವಂತೆ. ಹಾಗೆಂದವರೂ ಬೇರೆ ಯಾರು ಅಲ್ಲ ಸ್ವತಃ ಪರಮೇಶ(ಶಿವರಾಜಕುಮಾರ್). ಸಹೋದರಿ ಸೋನು ಸ್ನೇಹಿತರಾದ ಸಾಧುಕೋಕಿಲಾ, ಶರಣ್, ಹಾಗೂ ಸಹನರ್ತಕರೊಂದಿಗೆ ಗವಿಪುರಂನಲ್ಲಿ ಪಾನ್‌ಬೀಡದ ಬಗ್ಗೆ ಪರಮೇಶ ಹಾಡಿ ಕುಣಿದಿದ್ದಾರೆ.

ಡಾ:ನಾಗೇಂದ್ರಪ್ರಸಾದ್ ರಚಿಸಿರುವ 'ಮದರಾಸು ಐಸಾ ಬನರಾಸು ಐಸಾ ಕೊಲ್ಕತ್ತಾ ಐಸಾ ...ತಿನ್‌ತಾನೆ ಪರಶಿವನು ನನ್ನ ಕೈಲಿ ಪಾನ್‌ಬೀಡ ಐಸಾ..' ಎಂಬ ಹಾಡಿಗೆ ಇಮ್ರಾನ್ ನೃತ್ಯ ಸಂಯೋಜಿಸಿದ್ದು ಐದು ದಿನಗಳ ಕಾಲ ಚಿತ್ರೀಕೃತವಾಗಿದೆ.

ಶ್ರೀಮತಿ ಲಕ್ಷ್ಮೀ ಅವರು ಅರ್ಪಿಸಿ ಆದಿತ್ಯ ಆರ್ಟ್ ಎಂ.ಅಲ್.ಸಿ ಲಾಂಛನದಲ್ಲಿ ಆದಿತ್ಯಬಾಬು ನಿರ್ಮಿಸುತ್ತಿರುವ ಪರಮೇಶ ಪಾನ್‌ವಾಲ ಚಿತ್ರವನ್ನು ಮಹೇಶ್‌ಬಾಬು ಅವರು ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ವೀನಸ್‌ಮೂರ್ತಿ ಛಾಯಾಗ್ರಹಣ, ಜನಾರ್ದನ ಮಹರ್ಷಿ ಕಥೆ, ಹರಿಕೃಷ್ಣ ಸಂಗೀತ, ರವಿವರ್ಮಾ ಸಾಹಸ, ಚಂಪಕಧಾಮ ಬಾಬು ನಿರ್ಮಾಣನಿರ್ವಹಣೆಯಿರುವ

ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸುರ್ವೀನ್‌ಚಾವ್ಲಾ, ಶ್ರೀನಿವಾಸಮೂರ್ತಿ, ಆಶೀಷ್‌ವಿದ್ಯಾರ್ಥಿ, ಚಿತ್ರಾಶೆಣೈ, ಅಕುಲ್‌ಬಾಲಾಜಿ, ಸೋನು, ರೇಖಾ, ಸಾಧುಕೋಕಿಲಾ, ಶರಣ್ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

ಪಾನ್‌ವಾಲಾ ಗೆಟಪ್ಪಿನಲ್ಲಿ ಶಿವರಾಜ್ ಕುಮಾರ್!
ನಗುತಾ ನಗುತಾ ಬಾಳು ಶಿವು ನೂರು ವರುಷ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada