ನಟ ಸುದೀಪ್ ತೆಲುಗು 'ಈಗ' ಶೂಟಿಂಗ್ ಫಿನಿಶ್
ಎಸ್ ಎಸ್ ರಾಜಮೌಳಿ ನಿರ್ದೇಶನದ ತೆಲುಗು 'ಈಗ' ಚಿತ್ರದ ತಮ್ಮ ಭಾಗದ ಚಿತ್ರೀಕರಣವನ್ನು ನಟ ಸುದೀಪ್ ಮುಗಿಸಿದ್ದಾರೆ. ಮಂಗಳವಾರ (ಡಿ.13) ಹೈದರಾಬಾದಿನಲ್ಲಿ ತಮ್ಮ ಭಾಗದ ಚಿತ್ರೀಕರಣವನ್ನು ಸುದೀಪ್ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ್ದಾರೆ.
'ಓನ್ಲಿ ವಿಷ್ಣುವರ್ಧನ' ಚಿತ್ರ ಯಶಸ್ವಿಯಾಗಿದ್ದೆ ತಡ ಸುದೀಪ್‌ಗೆ ಸಾಲು ಸಾಲು ಚಿತ್ರಗಳ ಆಫರ್‌ಗಳು ಬರುತ್ತಿವೆ. ಕನ್ನಡದ ಚಿತ್ರ ನಿರ್ಮಾಪಕರು ನಾಮುಂದು ತಾಮುಂದು ಎಂದು ಸುದೀಪ್ ಕಾಲ್ ಶೀಟ್‌ಗಾಗಿ ಕಾಯುವಂತಾಗಿದೆ. ಏತನ್ಮಧ್ಯೆ ಸುದೀಪ್ ಒಪ್ಪಿಕೊಂಡಿರುವ ಮತ್ತೊಂದು ಕನ್ನಡ ಚಿತ್ರ 'ವರದನಾಯಕ' ಚಿತ್ರೀಕರಣವೂ ಭರದಿಂದ ಸಾಗಿದೆ.
ಹೈದರಾಬಾದಿನಿಂದ ಬುಧವಾರ ಬೆಂಗಳೂರಿಗೆ ಹಿಂತಿರುಗಿರುವ ಸುದೀಪ್, ಸ್ವಲ್ಪ ದಿನಗಳ ಕಾಲ ರಿಲ್ಯಾಕ್ಸ್ ಆಗಿ ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದೇನೆ. 'ಈಗ' ಚಿತ್ರದ ಬಿಜಿ ಶೆಡ್ಯೂಲ್‌ನಿಂದ ಅವರು ಬಳಲಿರುವುದಾಗಿ ತಿಳಿಸಿದ್ದಾರೆ. 'ವರದನಾಯಕ' ಚಿತ್ರದಲ್ಲಿ ಸುದೀಪ್ ಅವರು ಪ್ರಮುಖ ಪಾತ್ರವನ್ನು ಪೋಷಿಸುತ್ತಿರುವುದು ಗೊತ್ತೇ ಇದೆ.
ಜನವರಿಯಲ್ಲಿ 'ವರದನಾಯಕ' ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಅವರು 25 ದಿನಗಳ ಕಾಲ್ ಶೀಟನ್ನು ಕೊಟ್ಟಿದ್ದಾರೆ. ಜನವರಿ 19ರಂದು ನಿರ್ಮಾಪಕ ಹಾಗೂ ವಿತರಕ ಎನ್ ಕುಮಾರ್ ನಿರ್ಮಾಣದ ಸುದೀಪ್ ಅವರ ಮತ್ತೊಂದು ಚಿತ್ರ ಸೆಟ್ಟೇರಲಿದೆ. (ಏಜೆನ್ಸೀಸ್)


Click it and Unblock the Notifications











