For Quick Alerts
  ALLOW NOTIFICATIONS  
  For Daily Alerts

  ನಾಗಾರ್ಜುನ ಪುತ್ರನ ಜೊತೆ ಅನುಷ್ಕಾ ಶೆಟ್ಟಿ ನಿಶ್ಚಿತಾರ್ಥ

  By Rajendra
  |

  ತೆಲುಗು ಚಿತ್ರರಂಗದಲ್ಲಿ ಊಹಿಸಲೂ ಸಾಧ್ಯವಾಗದ ಬೆಳವಣಿಗೆಯೊಂದು ಸದ್ದಿಲ್ಲದೆ ನಡೆದು ಹೋಗಿದೆ. ಅದೇನಪ್ಪಾ ಅಂದ್ರೆ ಬೆಂಗಳೂರು ಹುಡುಗಿ ಅನುಷ್ಕಾ ಶೆಟ್ಟಿ ನಿಶ್ಚಿತಾರ್ಥ. ತೆಲುಗು ಚಿತ್ರರಂಗದ ಮಾಸ್ ಹೀರೋ ನಾಗಾರ್ಜುನ ಹಾಗೂ ಅಮಲಾ ಮಗ ನಾಗಚೈತನ್ಯ ಜೊತೆ ಇತ್ತೀಚೆಗೆ ನಿಶ್ಚಿತಾರ್ಥ ನಡೆದು ಹೋಗಿದೆ.

  ಇಷ್ಟು ತರಾತುರಿಯಲ್ಲಿ ಹಾಗೂ ಮಾಧ್ಯಮಗಳಿಗೆ ಸುಳಿವೇ ಸಿಗದಂತೆ ನಿಶ್ಚಿತಾರ್ಥ ನಡೆದಿರುವುದು ಟಾಲಿವುಡ್‌ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ನಿಶ್ಚಿತಾರ್ಥ ರಹಸ್ಯ ಸ್ಥಳದಲ್ಲಿ ನಡೆದಿದ್ದು, ಕೇವಲ ಇವರಿಬ್ಬರ ಕುಟುಂಬಿಕರ ಸಮ್ಮುಖದಲ್ಲಿ ನಡೆದಿದೆ ಎನ್ನಲಾಗಿದೆ.

  ಈಗಾಗಲೆ ತೆಲುಗು, ತಮಿಳು ಚಿತ್ರರಂಗದಲ್ಲಿ ಅನುಷ್ಕಾ ಸಖತ್ ಬೇಡಿಕೆಯುಳ್ಳ ನಟಿ. ನಾಗಚೈತನ್ಯ ಕೂಡ ಈಗೀಗ ಫಾರ್ಮ್‌ಗೆ ಬರುತ್ತಿದ್ದಾನೆ. ನಿಶ್ಚಿತಾರ್ಥ ಸುದ್ದಿ ಮೊದಲೆ ಗೊತ್ತಾದರೆ ತಮ್ಮ ವೃತ್ತಿಜೀವನಕ್ಕೆ ಎಲ್ಲಿ ಹೊಡೆತ ಬೀಳುತ್ತದೋ ಎಂದು ಇವರಿಬ್ಬರೂ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

  English summary
  South Indian actress Anushka Shetty engaged to Naga Chaitanya. Naga Chaitanya is Telugu superstar Nagarjuna’s and Amala’s son. Anushka is one of the top heroines in Kollywood and Tollywood. According to the grapevine, both the actors got engaged to each other in a secret ceremony held very much in private between the two families.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X